ವಾಷಿಂಗ್ಟನ್, ಮೇ 13- ಅಮೆರಿಕದ ಕ್ಲೀವೆಂಡ್ ಸ್ಟೇಟ್ ವಿಶ್ವವಿದ್ಯಾಲಯದ ಇಬ್ಬರು ಭಾರತೀಯ ವಿದ್ಯಾರ್ಥಿಗಳು ನ್ಯೂಯಾರ್ಕ್‌ನಲ್ಲಿ ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿಗಳನ್ನು 20 ವರ್ಷದ ಮನು ಲಕ್ಷ್ಮಿ ಪಟೇಲ ಮತ್ತು 23 ವರ್ಷದ ಸೌರವ್ ಪ್ರಭಾಕರ್ ಎಂದು ಗುರುತಿಸಲಾಗಿದೆ ಎಂದು ಪಿಟಿಐ ವರದಿ ನೀಡಿದೆ.
ಲ್ಯಾಂಕಾಸ್ಟರ್ ಕೌಂಟಿ ಕೋರೋನಾ ಕಚೇರಿ ಪ್ರಕಾರ, ಪ್ರಭಾಕರ್ ಕಾರು ಚಲಾಯಿಸುತ್ತಿದ್ದಾಗ ಇಸ್ಟ್ ಕೋಕಲಿಕೊ ತಾಂಟ್ ನಲ್ಲಿ ಅಪಘಾತವಾಗಿದೆ. ಪ್ರಭಾಕರ್ ಮತ್ತು ಪಟೇಲ್ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಮತ್ತೊಬ್ಬ ಪ್ರಯಾಣಿಕ ಗಾಯಗೊಂಡು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಲಾಗಿದೆ.
ಅಪಘಾತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ ದೃಶ್ಯಗಳು ವಾಹನವು ರಸ್ತೆಯಿಂದ ಹೊರಗೆ ಹೊರಟು, ಮರಕ್ಕೆ ಡಿಕ್ಕಿ ಹೊಡೆದು ಬಳಿಕ ಸೇತುವೆಗೆ ಅಪ್ಪಳಿಸಿರುವುದು ಕಂಡುಬಂದಿದೆ.