ಪಾಕ್‌ಅನ್ನು ಬಗ್ಗು ಬಡಿದ ಇಂದಿರಾ ದಿಟ್ಟ ನಡೆ
ಬೆಂಗಳೂರು,ಮೇ 13-ಪಾಕಿಸ್ತಾನವನ್ನು ಎರಡು ಭಾಗ ಮಾಡಿ ಸದೆಬಡೆದ ಅಂದಿನ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ರವರ ಹೋರಾಟವನ್ನು ಇಂದು ದೇಶದ ಪ್ರತಿಯೊಬ್ಬ ನಾಗರೀಕರು ಸರಿಸುತ್ತಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ಹೇಳಿದ್ದಾರೆ.ಅವರ ದಿಟ್ಟತನದ ಕ್ರಮಗಳು ಇಂದಿಗೂ ಅವಿಸರಣೀಯ ಹಾಗೂ ಭಾರತದ ಸೈನಿಕರಿಗೆ ಇಂದಿರಾಗಾಂಧಿ ಅವರು ನೀಡಿದ ನೈತಿಕ ಬೆಂಬಲದಿಂದ ಇಡೀ ಪಾಕಿಸ್ತಾನವನ್ನು ಬಗ್ಗು ಬಡಿಯಲು ಸಾಧ್ಯವಾಯಿತು ಎಂದು ದೇಶದ ಜನತೆ ಹೆಮೆಯಿಂದ ಹೇಳಿಕೊಳ್ಳುತ್ತಿದ್ದಾರೆ.
ಭಾರತದ ಸೈನಿಕರು ಪಾಕಿಸ್ತಾನದಲ್ಲಿ ಅಡಗಿರುವ ಉಗ್ರರ ನೆಲೆಗಳನ್ನು ದ್ವಂಸ ಮಾಡಿದ್ದಾರೆ ಪಾಕಿಸ್ತಾನದ ಬೆಂಬಲಿತ ಉಗ್ರರು ಭಾರತದ ಮುಗ್ಧ ನಾಗರೀಕರನ್ನ ಕೊಂದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವಿದೇಶದಲ್ಲಿ ಇದ್ದು ನಂತರ ದೇಶಕ್ಕೆ ಆಗಮಿಸಿ ಉಗ್ರರಿಂದ ಬಲಿಯಾದ ಕುಟುಂಬಗಳಿಗೆ ಸಾಂತ್ವಾನ ಹೇಳುವುದಾಗಲಿ ಅಥವಾ ಮತಪಟ್ಟ ಕುಟುಂಬಳಿಗೆ ಪರಿಹಾರ ಘೋಷಿಸುವುದಾಗಲಿ ಏನನ್ನು ಮಾಡದೆ ಕೇವಲ ಸಭೆಗಳನ್ನು ನಡೆಸಿ ಹೈ ವೋಲ್ಟೇಜ್ ಮೀಟಿಂಗ್ ಎಂದು ಪ್ರಚಾರ ಪಡೆದಿದ್ದು ಮಾತ್ರ ನಿಮ ಸಾಧನೆಯಾಗಿದೆ ಎಂದು ಟೀಕಿಸಿದ್ದಾರೆ.
ನಿನ್ನೆ ತಾವು ದೇಶವನ್ನುದ್ದೇಶಿಸಿ ಮಾಡಿದ ಭಾಷಣವನ್ನು ನೈತಿಕ ಸ್ಥೈರ್ಯ ತುಂಬಿಸುವ ಕೆಲಸ ಮಾಡಿಲ್ಲ. ನಮ ದೇಶದ ಆಂತರಿಕ ವಿಚಾರದಲ್ಲಿ ಮೂರನೇಯವರು ಹಸ್ತಕ್ಷೇಪ ಖಂಡನೀಯ ಅಮೆರಿಕಾ ಅಧ್ಯಕ್ಷ ಟ್ರಂಪ್ ಭಾರತವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.ಕಾಶೀರ ವಿಷಯ ಬಗ್ಗೆ ಮೂರನೇಯವರು ಮೂಗು ತೂರಿಸುವ ಪರಿಸ್ಥಿತಿ ನಿರ್ಮಾಣವುವಾಗಬಾರದು. ಈ ಸಂಬಂಧ ಟ್ರಂಪ್ ಹೇಳಿಕೆಯನ್ನ ಬಹಿರಂಗವಾಗಿ ಖಂಡಿಸಬೇಕು ಎಂದು ಹೇಳಿದರು.
ಭಾರತದ ತಂಟೆಗೆ ಬಂದವರಿಗೆ ತಕ್ಕ ಪಾಠ ಕಲಿಸಿದ್ದು ಇಂದಿರಾಗಾಂಧಿ
ಭಾರತದ ತಂಟೆಗೆ ಬಂದವರಿಗೆ ತಕ್ಕ ಪಾಠ ಕಲಿಸಿದ್ದು ಇಂದಿರಾಗಾಂಧಿ ಅವರ ಮಾರ್ಗಗಳನ್ನು ಅನುಸರಿಸಿ ಶತ್ರುಗಳಿಗೆ ಸ್ಪಷ್ಟ ಉತ್ತರ ನೀಡಬೇಕು ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧುಬಂಗಾರಪ್ಪ ಸಲಹೆ ನೀಡಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕದನ ವಿರಾಮ ಘೋಷಣೆಗೆ ಅಮೆರಿಕದ ಅಧ್ಯಕ್ಷ ಡೊನಾಲ್‌್ಡ ಟ್ರಂಪ್ ಸೂಚಿಸಿದ್ದರು ಎಂಬುದು ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಕದನ ವಿರಾಮದ ಸಂದೇಶದಲ್ಲಿ ಸಾಮಾನ್ಯಜ್ಞಾನ ಎಂಬ ಒಂದು ಪದ ಇದೆ. ಅದು ಇಡೀ ದೇಶಕ್ಕೆ ಅನ್ವಯವಾಗುತ್ತದೆ. ಹೀಗಾಗಿ ಕೇಂದ್ರ ಸರ್ಕಾರ ತಕ್ಕ ಉತ್ತರ ಕೊಡಲೇಬೇಕು ಎಂದು ಆಗ್ರಹಿಸಿದರು.
ದೇಶದ ಭದ್ರತೆ ವಿಚಾರವಾಗಿ ರಾಜಕೀಯ ಹೇಳಿಕೆಗಳನ್ನು ನೀಡಬಾರದು ಎಂಬ ಕಾರಣಕ್ಕೆ ನಾವು ಹೆಚ್ಚು ಮಾತನಾಡಲು ಬಯಸುವುದಿಲ್ಲ. ಭಾರತೀಯರಿಗೆ ಸಾಮಾನ್ಯಜ್ಞಾನ ಇದೆಯೋ, ಇಲ್ಲವೋ ಎಂಬುದನ್ನು ಜಗತ್ತಿಗೇ ಗೊತ್ತಿದೆ. ಆದರೆ ಈ ರೀತಿಯ ಪದಬಳಕೆ ಮಾಡುವುದು ಸರಿಯಲ್ಲ. ಪಾಕಿಸ್ತಾನಕ್ಕೆ ಸಾಮಾನ್ಯ ಜ್ಞಾನ ಇಲ್ಲ. ಎರಡೂ ದೇಶಗಳು ಸಾಮಾನ್ಯಜ್ಞಾನದಿಂದ ನಡೆದುಕೊಳ್ಳಬೇಕು ಎಂದು ಮೋದಿ ಹೇಳುವ ಮೂಲಕ ಪಾಕಿಸ್ತಾನದ ಜೊತೆಗೆ ನಮನ್ನು ಹೋಲಿಕೆ ಮಾಡಿದ್ದಾರೆ. ಇದು ಸರಿಯಲ್ಲ ಎಂದರು.
ಈ ಪದವನ್ನು ಯಾರೂ ಒಪ್ಪಿಕೊಳ್ಳಲಾಗುವುದಿಲ್ಲ. ಗಡಿಯ ಕುರಿತು ಸಂಘರ್ಷ ನಡೆಯುವಾಗ ಆಂತರಿಕವಾಗಿ ನಾವು ಭಿನ್ನ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ಪ್ರಧಾನಮಂತ್ರಿಯವರ ಜೊತೆಗೆ ದೇಶದ ಪ್ರತಿಯೊಬ್ಬರೂ ಇರುತ್ತಾರೆ ಎಂದು ಹೇಳಿದರು.ನಮ ಯೋಧರು ಶ್ರಮ ವಹಿಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸೈನಿಕರ ರಕ್ಷಣೆ ಕೂಡ ನಮ ಜವಾಬ್ದಾರಿ. ಸುರಕ್ಷತೆ ಮತ್ತು ರಕ್ಷಣೆ ವಿಚಾರವಾಗಿ ಯಾವುದೇ ವ್ಯತಿರಿಕ್ತ ಹೇಳಿಕೆಗಳನ್ನು ನೀಡುವುದಿಲ್ಲ ಎಂದರು.
ಪ್ರತಿ ಬಾರಿಯೂ ಪಾಕಿಸ್ತಾನದ ಹೆಸರನ್ನು ತೆಗೆದುಕೊಂಡು ರಾಜಕೀಯ ಮಾತನಾಡುತ್ತಾರೆ. ನಾವು ರಾಜಕೀಯ ಮಾಡುವುದಿಲ್ಲ. ಪಾಕಿಸ್ತಾನಕ್ಕೆ ಪಾಠ ಕಲಿಸಬಾರದು ಎಂದು ಯಾರೂ ಹಿಡಿದುಕೊಂಡಿಲ್ಲ. ಈ ಹಿಂದೆ ಇಂದಿರಾಗಾಂಧಿಯವರು ಸಾಕಷ್ಟು ಸಂದರ್ಭದಲ್ಲಿ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದರು. ಈಗಲೂ ಅದೇ ರೀತಿಯ ಕ್ರಮಗಳಾಗಬೇಕು ಎಂದು ಒತ್ತಾಯಿಸಿದರು.
ಇಂತಹ ವಿಚಾರಗಳಲ್ಲಿ ಚರ್ಚೆ ಬಹಳ ಮುಖ್ಯ. ನೆಲ್ಸನ್ ಮಂಡೇಲಾ, ಮಹಾತಗಾಂಧಿಯವರಂತಹ ಶಾಂತಿಧೂತರನ್ನೇ ಬ್ರಿಟೀಷರು ಬಂಧಿಸಿದ್ದರು. ನಮ ಸರ್ಕಾರ ರಾಜಕೀಯ ಲಾಭಕ್ಕಾಗಿ ಮಾತನಾಡುವ ಬದಲು ವಾಸ್ತವದಲ್ಲಿ ತಕ್ಕ ಪಾಠ ಕಲಿಸಿ, ನಮಲ್ಲಿ ಬ್ರಹೋಸ್, ಆಕಾಶ್ ಎಂಬ ಯುದ್ಧ ಸಲಕರಣೆಗಳು ಯುಪಿಎ ಅವಧಿಯಲ್ಲಿ ತಯಾರಾಗಿದ್ದವು. ರಫೇಲ್ ಯುದ್ಧ ವಿಮಾನ ತರಿಸಿದ್ದರೂ ಕೂಡ ಪಾಕಿಸ್ತಾನದೊಂದಿಗೆ ಸಂಘರ್ಷದಲ್ಲಿ ಬಳಸಿದ್ದು ದೇಶಿನಿರ್ಮಿತ ಆಕಾಶ್ ಯುದ್ಧ ವಿಮಾನವನ್ನು ಎಂದರು. ಪ್ರಧಾನಿ ನರೇಂದ್ರ ಮೋದಿಯವರು ಸೈನಿಕರನ್ನು ನೇಮಕಾತಿ ಮಾಡಿ ಸೇನೆಯ ಬಲವನ್ನು ಹೆಚ್ಚಿಸಬೇಕು. ದೇಶದ ಜನರಿಗೆ ರಕ್ಷಣೆಯ ಖಾತ್ರಿ ನೀಡಬೇಕು ಎಂದು ಆಗ್ರಹಿಸಿದರು.