Saturday, July 19, 2025
Homeಅಂತಾರಾಷ್ಟ್ರೀಯ | Internationalಕೆನಡಾದ ಸಚಿವೆಯಾಗಿ ಭಗವದ್ ಗೀತೆ ಮೇಲೆ ಕೈಯಿಟ್ಟು ಪ್ರಮಾಣವಚನ ಸ್ವೀಕರಿಸಿದ ಭಾರತೀಯ ಸಂಜಾತೆ ಅನಿತಾ ಆನಂದ್‌

ಕೆನಡಾದ ಸಚಿವೆಯಾಗಿ ಭಗವದ್ ಗೀತೆ ಮೇಲೆ ಕೈಯಿಟ್ಟು ಪ್ರಮಾಣವಚನ ಸ್ವೀಕರಿಸಿದ ಭಾರತೀಯ ಸಂಜಾತೆ ಅನಿತಾ ಆನಂದ್‌

Indian-origin Anita Anand takes oath as Canada's foreign minister, with her hands on Bhagavad Gita

ಒಟ್ಟಾವಾ,ಮೇ.14- ಭಾರತೀಯ ಸಂಜಾತೆ ಅನಿತಾ ಆನಂದ್‌, ಕೆನಡಾದ ಮಾರ್ಕ್‌ ಕಾರ್ನಿ ಸಂಪುಟದಲ್ಲಿ ವಿದೇಶಾಂಗ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.ಜಸ್ಟಿನ್‌ ಟ್ರುಡೊ ಅವರ ಅಧಿಕಾರಾವಧಿಯಲ್ಲಿ ಹುಟ್ಟಿಕೊಂಡ ಹಳಸಿದ ಸಂಬಂಧಗಳನ್ನು ಮಾರ್ಕ್‌ ಕಾರ್ನಿ ಮತ್ತು ಅನಿತಾ ಆನಂದ್‌ ಸರಿಪಡಿಸುತ್ತಾರೆಯೇ? ಎಂಬ ಪ್ರಶ್ನೆ ಉದ್ಭವಿಸಿದೆ. ಅನಿತಾ ಆನಂದ್‌ ಕೆನಡಾದ ಮೊದಲ ಹಿಂದೂ ಮಹಿಳಾ ಸಂಸದೆ ಮತ್ತು ಕ್ಯಾಬಿನೆಟ್‌ ಮಂತ್ರಿ. ಅವರು ಗೀತೆಯ ಮೇಲೆ ಕೈಯಿಟ್ಟು ಪ್ರಮಾಣ ವಚನ ಸ್ವೀಕರಿಸಿದರು.

ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿ ಅವರ ಕೈಯಲ್ಲಿದ್ದ ಭಗವದ್ಗೀತೆಯ ಗ್ರಂಥ ಎಲ್ಲರ ಗಮನ ಸೆಳೆದಿದೆ. ಅನಿತಾ ಭಗವದ್ಗೀತೆ ಮೇಲೆ ಕೈ ಇಟ್ಟು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ಜಸ್ಟಿನ್‌ ಟ್ರುಡೊ ಅವರನ್ನು ಮಾರ್ಕ್‌ ಕಾರ್ನಿ ಪ್ರಧಾನಿಯಾಗಿ ನೇಮಿಸಿದರು. ಕಳೆದ ತಿಂಗಳಷ್ಟೇ, ಅವರ ನಾಯಕತ್ವದಲ್ಲಿ ನಡೆದ ಚುನಾವಣೆಯಲ್ಲಿ ಅವರ ಪಕ್ಷ ಲಿಬರಲ್‌ ಗೆದ್ದಿತು. ಭಾರತೀಯ ಮೂಲದ ಅನಿತಾ ಆನಂದ್‌ ಅವರು ಟ್ರುಡೊ ಸರ್ಕಾರದಲ್ಲಿ ಸಚಿವೆಯೂ ಆಗಿದ್ದರು.

ಪ್ರಧಾನಿ ಮಾರ್ಕ್‌ ಕಾರ್ನಿ ಅವರು ಮೆಲಾನಿ ಜೋಲಿ ಬದಲಿಗೆ ಅನಿತಾ ಆನಂದ್‌ ಅವರನ್ನು ವಿದೇಶಾಂಗ ಸಚಿವೆಯಾಗಿ ನೇಮಿಸಿದ್ದಾರೆ. ಜೋಲೀ ಈಗ ಕೈಗಾರಿಕಾ ಸಚಿವರಾಗಿರುತ್ತಾರೆ. ಅನಿತಾ ಆನಂದ್‌ ಅವರು ಈ ಹಿಂದೆ ರಕ್ಷಣಾ ಸಚಿವೆ ಸೇರಿದಂತೆ ಹಲವು ಪ್ರಮುಖ ಹ್ದುೆಗಳನ್ನು ಅಲಂಕರಿಸಿದ್ದಾರೆ.

ಭಾರತೀಯ ಸಂಸ್ಕೃತಿ, ಸನಾತನ ಧರ್ಮವನ್ನು ಪರಿಪಾಲಿಸಿದ್ದಾರೆ. ಇದೀಗ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ವೈರಲ್‌ ಆಗಿವೆ.ಕೆನಡಾದ ವಿದೇಶಾಂಗ ಸಚಿವರಾಗಿ ನೇಮಕಗೊಂಡಿರುವುದು ನನಗೆ ಗೌರವ ತಂದಿದೆ. ಸುರಕ್ಷಿತ, ಉತ್ತಮ ಜಗತ್ತನ್ನು ನಿರ್ಮಿಸಲು ಮತ್ತು ಕೆನಡಿಯನ್ನರಿಗೆ ತಲುಪಿಸಲು ಪ್ರಧಾನಿ ಮಾರ್ಕ್‌ ಕಾರ್ನಿ ಮತ್ತು ನಮ ತಂಡದೊಂದಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ.

ಅನಿತಾ ಆನಂದ್‌ ಯಾರು? :
ಅನಿತಾ ಆನಂದ್‌ ಭಾರತದಲ್ಲಿ ಜನಿಸಿಲ್ಲದಿರಬಹುದು. ಆದರೆ ಅವರಿಗೆ ಭಾರತದೊಂದಿಗೆ ಸಂಬಂಧವಿದೆ. ಅನಿತಾ ಅವರ ಭಾರತ ಸಂಪರ್ಕ ವಾಸ್ತವವಾಗಿ, ಅನಿತಾ ಆನಂದ್‌ ಅವರ ಪೋಷಕರು ಭಾರತದವರು. ತಂದೆ ತಮಿಳುನಾಡು ಮೂಲದವರು ಮತ್ತು ತಾಯಿ ಪಂಜಾಬ್‌ ಮೂಲದವರು. ಇಬ್ಬರೂ ಭಾರತೀಯ ವೈದ್ಯರು. ನಂತರ ಅವರು ಕೆನಡಾದಲ್ಲಿ ನೆಲೆಸಿದರು. ಅನಿತಾರ ಅಜ್ಜ ಭಾರತದ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು.

ಅನಿತಾ ಆನಂದ್‌ ನೋವಾ ಸ್ಕಾಟಿಯಾದ ಕೆಂಟ್ವಿಲ್ಲೆಯಲ್ಲಿ ಜನಿಸಿದರು.ಅನಿತಾ ಆನಂದ್‌ ಅವರಿಗೆ ಇಬ್ಬರು ಸಹೋದರಿಯರು – ಟೊರೊಂಟೊದಲ್ಲಿ ವಕೀಲರಾಗಿರುವ ಗೀತಾ ಆನಂದ್‌ ಮತ್ತು ಮೆಕಾಸ್ಟರ್‌ ವಿಶ್ವವಿದ್ಯಾಲಯದಲ್ಲಿ ವೈದ್ಯೆ ಮತ್ತು ಸಂಶೋಧಕಿಯಾಗಿರುವ ಸೋನಿಯಾ ಆನಂದ್‌. ಕೌಟುಂಬಿಕ ಹಿನ್ನೆಲೆ ಅನಿತಾ ಆನಂದ್‌ ವೃತ್ತಿಯಲ್ಲಿ ವಕೀಲೆ, ಪ್ರಾಧ್ಯಾಪಕಿ ಮತ್ತು ಸಂಶೋಧಕಿ. ಅವರು 1985 ರಲ್ಲಿ ಒಂಟಾರಿಯೊಗೆ ತೆರಳಿದರು. ಅವರು ಮತ್ತು ಅವರ ಪತಿ ಜಾನ್‌ ತಮ ನಾಲ್ಕು ಮಕ್ಕಳನ್ನು ಓಕ್ವಿಲ್ಲೆಯಲ್ಲಿ ಬೆಳೆಸಿದರು.

ಭಾರತ ಮತ್ತು ಕೆನಡಾ ನಡುವಿನ ಸಂಬಂಧಗಳಲ್ಲಿ ನಡೆಯುತ್ತಿರುವ ಕಹಿಯನ್ನು ತೆಗೆದುಹಾಕುವಲ್ಲಿ ಅವರ ಪಾತ್ರ ಮಹತ್ವದ್ದಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ.ಇನ್ನು ಆನಂದ್‌ ಕೆನಡಾದ ವಕೀಲ ಮತ್ತು ವ್ಯವಹಾರ ಕಾರ್ಯನಿರ್ವಾಹಕ ಜಾನ್‌ ನೋಲ್ಟನ್‌ ಅವರನ್ನು ವಿವಾಹವಾದರು. ಇವರಿಗೆ ನಾಲ್ಕು ಮಕ್ಕಳಿದ್ದಾರೆ.

ಮಾರ್ಕ್‌ ಕಾರ್ನಿ ಅವರ ಚೊಚ್ಚಲ ಸಚಿವ ಸಂಪುಟವು 28 ಸಚಿವರು ಮತ್ತು 10 ವಿದೇಶಾಂಗ ಕಾರ್ಯದರ್ಶಿಗಳನ್ನು ಒಳಗೊಂಡಿದೆ. ಶಫ್ಕತ್‌ ಅಲಿ, ಜಿಲ್‌ ಮೆಕ್ನೈಟ್‌‍, ಟಿಮ್‌ ಹಾಡ್‌್ಗಸನ್‌, ಎಲೀರ್ನ ಓಲ್ಸ್ಜೆವ್ಸ್ಕಿ, ಮ್ಯಾಂಡಿ ಗುಲ್‌‍-ಮಾಸ್ಟಿ, ಜೋಯಲ್‌ ಲೈಟ್ಬೌಂಡ್‌, ಗ್ರೆಗರ್‌ ರಾಬರ್ಟ್‌ಸನ್‌, ಇವಾನ್‌ ಸೊಲೊಮನ್‌, ವೇಯ್ನ್‌‍ ಲಾಂಗ್‌ ಮತ್ತು ನಥಾಲಿ ಪೊವೊಸ್ಟ್‌ ಸೇರಿದಂತೆ 24 ಸದಸ್ಯರು ಹೊಸದಾಗಿ ಸಂಪುಟ ಸೇರಿದ ಸದಸ್ಯರು.

ಫ್ರಾಂಕೋಯಿಸ್‌‍-ಫಿಲಿಪ್‌ ಷಾಂಪೇನ್‌, ಕ್ರಿಸ್ಟಿಯಾ ಫ್ರೀಲ್ಯಾಂಡ್‌ ಮತ್ತು ಡೊಮಿನಿಕ್‌ ಲೆಬ್ಲ್ಯಾಂಕ್‌ ತಮ ಹಿಂದಿನ ಸ್ಥಾನಗಳಲ್ಲಿ ಮುಂದುವರಿಯಲಿದೆ.ಕೆನಡಾದಲ್ಲಿ, ಪ್ರಧಾನಿ ಮಾರ್ಕ್‌ ಕಾರ್ನಿ ತಮ ಸಚಿವ ಸಂಪುಟದ ಫೋಟೋ ಜಗತ್ತಿಗೆ ತೋರಿಸಿದರು. ಕೆನಡಾದ ಪ್ರಧಾನಿ ಮಾರ್ಕ್‌ ಕಾರ್ನಿ ನಿನ್ನೆ ತಮ ಸಚಿವ ಸಂಪುಟದಲ್ಲಿ ಪ್ರಮುಖ ಪುನಾರಚನೆ ಮಾಡಿದ್ದಾರೆ. ಇದರ ಅಡಿಯಲ್ಲಿ, ಭಾರತೀಯ ಮೂಲದ ಅನಿತಾ ಆನಂದ್‌ ಅವರನ್ನು ಕೆನಡಾದ ವಿದೇಶಾಂಗ ಸಚಿವರನ್ನಾಗಿ ಮಾಡಲಾಗಿದೆ.

RELATED ARTICLES

Latest News