ಹುಬ್ಬಳ್ಳಿ,ಮೇ 14- ಆನ್‌ಲೈನ್ ಆ್ಯಪ್‌ಗಳಲ್ಲಿ ಹಣ ಹೂಡಿಕೆ ಮಾಡಿದರೆ ಅಽಕ ಹಣ ಗಳಿಸಬಹುದೆಂದು ನಂಬಿಸಿ ಧಾರವಾಡದ ಇಬ್ಬರು ವ್ಯಕ್ತಿಗಳಿಗೆ 40.15 ಲಕ್ಷ ರೂ.ವಂಚಿಸಿರುವ ಎರಡು ಪ್ರತ್ಯೇಕ ಪ್ರಕರಣಗಳು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ. ಆ್ಯಪ್‌ವೊಂದರಲ್ಲಿ ಹಣ ಹೂಡಿಕೆ ಮಾಡಿದರೆ ಅಽಕ ಹಣ ಗಳಿಸಬಹುದೆಂದು ನಂಬಿಸಿ ಧಾರವಾಡ ನಿವಾಸಿ ನಂದೀಶ ಎಂಬುವವರಿಗೆ 28 ಲಕ್ಷ ರೂ. ವಂಚಿಸಿರುವುದು ಬೆಳಕಿಗೆ ಬಂದಿದೆ.
ನಂದೀಶ ಅವರು ಆನ್‌ಲೈನ್ ನಲ್ಲಿ ಹೂಡಿಕೆಯ ಆ್ಯಪ್ ಗಮನಿಸಿ ಬ್ಯಾಂಕ್ ಖಾತೆಯಿಂದ 30 ಲಕ್ಷ ರೂ. ವರ್ಗಾಹಿಸಿದ್ದಾರೆ. ತದ ನಂತರದಲ್ಲಿ 2 ಲಕ್ಷ ರೂ. ಗಳು ಮಾತ್ರ ಹಿಂದಿರುಗಿಸಿ ಉಳಿದ ಹಣ ನೀಡದೆ ವಂಚಿಸಲಾಗಿದೆ ಎಂದು ಅವರು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
12.15 ಲಕ್ಷ ರೂ. ವಂಚನೆ:
ಧಾರವಾಡ ನಿವಾಸಿ ಮದನ್ ಎಂಬುವವರಿಗೆ ಸೈಬರ್ ವಂಚಕರು ವಾಟ್‌್ಸ ಆ್ಯಪ್ ಮೂಲಕ ಲಿಂಕ್ ಕಳುಹಿಸಿ ಮೊದಲು 150 ರೂ. ಹೂಡಿಕೆ ಮಾಡಿದರೆ ಅದಕ್ಕೆ ಪ್ರತಿಯಾಗಿ 1300 ರೂ. ನೀಡುವುದಾಗಿ ಹೇಳಿ ಅದರಂತೆ ಆ ಹಣವನ್ನು ಸಹ ನೀಡಿ ನಂಬಿಕೆ ಗಳಿಸಿದ್ದಾರೆ.
ಮದನ್ ಅವರಿಂದ ಮತ್ತೆ 12.15 ಲಕ್ಷ ರೂ. ವರ್ಗಾಯಿಸಿಕೊಂಡ ವಂಚಕರು ಯಾವುದೇ ಹಣ ನೀಡದೆ ಮೋಸ ಮಾಡಿದ್ದು, ಇದೀಗ ಅವರು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.