Friday, May 16, 2025
Homeರಾಜ್ಯರಾಜ್ಯದ 12 ಕಡೆ ಏಕಕಾಲದಲ್ಲಿ ಲೋಕಾಯುಕ್ತ ದಾಳಿ, ಭ್ರಷ್ಟ ಅಧಿಕಾರಿಗಳಿಗೆ ಶಾಕ್

ರಾಜ್ಯದ 12 ಕಡೆ ಏಕಕಾಲದಲ್ಲಿ ಲೋಕಾಯುಕ್ತ ದಾಳಿ, ಭ್ರಷ್ಟ ಅಧಿಕಾರಿಗಳಿಗೆ ಶಾಕ್

Lokayukta raids 12 places in the state simultaneously

ಬೆಂಗಳೂರು, ಮೇ 15- ಇಂದು ಬೆಳಂಬೆಳಿಗ್ಗೆ ತಹಶೀಲ್ದಾರ್ ಸೇರಿ ಏಳು ಸರ್ಕಾರಿ ಅಧಿಕಾರಿಗಳ ಮನೆಗಳು ಮತ್ತು ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆದಿದೆ.ಅಕ್ರಮ ಆಸ್ತಿಗಳಿಕೆ ದೂರುಗಳು ಬಂದ ಹಿನ್ನೆಲೆಯಲ್ಲಿ ಸಮಗ್ರ ಪರಿಶೀಲನೆ ನಂತರ ಇಂದು ಏಕ ಕಾಲದಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ 12 ಕಡೆ ದಾಳಿ ನಡೆಸುವ ಮೂಲಕ ಭ್ರಷ್ಟ ಅಧಿಕಾರಿಗಳಿಗೆ ಶಾಕ್ ನೀಡಲಾಗಿದೆ.

ಕಲಬುರಗಿಯ ಅಕ್ಕಮಹಾದೇವಿ ಬಡಾವಣೆಯಲ್ಲಿರುವ ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ತಹಶೀಲ್ದಾರ್ ಉಮಾಕಾಂತ ಮನೆ ಕಚೇರಿ.ತೋಟದ ಮನೆ ಹಾಗು ಇತರ ಕೆಲವು ಕಡೆ ಲೋಕಾಯುಕ್ತ ದಾಳಿ ನಡೆದಿದೆ. ನಗದು ಹಣ, ಆಸ್ತಿ ದಾಖಲೆಗಳು ಸೇರಿ ಕೆಲವು ಸರ್ಕಾರಿ ದಾಖಲಾತಿಗಳು ಕೂಡ ಪತ್ತೆಯಾಗಿದ್ದು ಪರಿಶೀಲನೆ ಮಾಡಲಾಗಿದೆ.

ತುಮಕೂರಿನಲ್ಲಿ ನಿರ್ಮಿತಿ ಕೇಂದ್ರದ ಎಂಡಿ ರಾಜಶೇಖರ್ ಅವರ ನಿವಾಸ ಕಚೇರಿ ಹಾಗು ಅವರ ಸಹೋದರನ ಮನೆ ಸೇರಿ 7 ಕಡೆ ದಾಳಿ ನಡೆದಿದೆ. ಆಪಾರವ ಪ್ರಮಾಣದ ಚಿನ್ನಾಭರಣ ಆಸ್ತಿ ದಾಖಲೆ ನಗದು ಹಣ ಸೇರಿ ಹಲವು ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.ಇನ್ನು ವಿಜಯಪುರ ನಗರದ ಸೆಂಟ್ ಜೋಸೆಫ್ ಶಾಲೆಯ ಹಿಂಭಾಗದಲ್ಲಿರುವ ಡಾ. ಬಿಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕಿ ರೇಣುಕಾ ಸಾತಾಲೆರ್ ನಿವಾಸದ ಮೇಲೆ ದಾಳಿ ಮಾಡಲಾಗಿದೆ.

ವ್ಯಾಪಕವಾಗಿ ಭ್ರಷ್ಟಾಚಾರ ಆರೋಪ ಕೇಳಿಬಂದ ಹಿನ್ನಲೆಯಲ್ಲಿ ಈ ದಾಳಿ ನಡೆದಿದೆ. ಎಸ್ಪಿ ಟಿ. ಮಲ್ಲೇಶ್ ನೇತೃತ್ವದಲ್ಲಿ 6 ತಂಡ ದಾಳಿ ಮಾಡಿ ಅಕ್ರಮ ಸಂಪಾದನೆ ಬಯಲಿಗೆಳೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಬೋದನ ಹೊಸಹಳ್ಳಿಯಲ್ಲಿರುವ ಎಸ್‌ಡಿಎ ಅನಂತ್ ಅವರ ಮನೆ ಮೇಲೆ ಲೋಕಾಯುಕ್ತ ದಾಳಿ ಮಾಡಿದೆ. ದೇವನಹಳ್ಳಿ ಹಾಗೂ ಹೊಸಕೋಟೆಯಲ್ಲಿ ಭೂ ಮಂಜೂರಾತಿ ವಿಭಾಗದಲ್ಲಿ ಕೆಲಸ ಮಾಡಿದ್ದ ಅನಂತ್, ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪ ಹಿನ್ನೆಲೆ ಲೋಕಾ ದಾಳಿ ನಡೆಸಲಾಗಿದೆ.

ಹಲವೆಡೆ ನಿವೇಶನ ಕೃಷಿ ಜಮೀನು ಸೇರಿ ಹಲವು ಆಸ್ತಿ ದಾಖಲೆ ಪತ್ತೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ ಅತ್ತ ಸೊಲ್ಲಾಪುರ ನಗರದ ಕೆಹೆಚ್‌ ಬಿ ಪ್ರದೇಶದಲ್ಲಿರುವ ನಿವಾಸದ ಮೇಲೂ ಡಿವೈಎಸ್‌ಪಿ ಸುರೇಶ ರೆಡ್ಡಿ ನೇತೃತ್ವದಲ್ಲಿ ದಾಳಿ ಮಾಡಲಾಗಿದ್ದು, ಮನೆಯಲ್ಲಿರುವ ದಾಖಲೆಗಳನ್ನು ಪರಿಶೀಲನೆ ಮಾಡಲಾಗಿದೆ.

ಮಂಗಳೂರಿನ ಬಿಜೈನಲ್ಲಿರುವ ಕಂದಾಯ ಇಲಾಖೆ ಸರ್ವೆ ಮೇಲ್ವಿಚಾರಕ ಮಂಜುನಾಥ್ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ ದಕ್ಷಿಣ ಕನ್ನಡ ಲೋಕಾಯುಕ್ತ ಎಸ್‌ಪಿ ಕುಮಾರಚಂದ್ರ ನೇತೃತ್ವದಲ್ಲಿ ನಡೆಸಲಾಗುತ್ತಿದ್ದು ಹಲವು ಚರಚರ ಆಸ್ತಿ ದಾಖಲೆ ವಶಪಡಿಸಿಕೊಳ್ಳಲಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ 8ಕ್ಕೂ ಹೆಚ್ಚು ಕಡೆ ಲೋಕ ದಾಳಿ ನಡೆದಿದೆ. ಕಾನೂನು ಮಾಪನಶಾಸ್ತ್ರದ ಅಧೀಕ್ಷಕ ಹೆಚ್ಆರ್ ನಟರಾಜ್ ಅವರ ಮನೆ ಕಚೇರಿ ಮೇಲೆ ದಾಳಿ ನಡೆದಿದೆ. ಹಲವೆಡೆ ವಾಣಿಜ್ಯ ಸಂಕಿರ್ಣ, ಕೈಗಾರಿಕಾ ಶಡ್ ಸೇರಿ ಹಲವು ಆಸ್ತಿ ಪತ್ರ ಪತ್ತೆಯಾಗಿದೆ. ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶನಾಲಯ, ಹೆಚ್ಚುವರಿ ನಿರ್ದೇಶಕರು ಟಿ.ವಿ ಮುರಳಿ ಅವರಿಗೆ ಲೋಕಾ ಶಾಕ್ ನೀಡಿದೆ.ಬೆಂಗಳೂರಿನಲ್ಲರುವ ಮನೆ ಸೇರಿ ಅವರ ಸಂಬಂಧಿಕರು ಮನೆ ಮೇಲೂ ದಾಳಿ ನಡೆದಿದೆ.ವಶಕ್ಕೆ ಪಡೆದು ವಸ್ತುಗಳ ಹಾಗು ಬೆಲೆ ಬಾಳುವ ವಸ್ತು ಬಗ್ಗೆ ಲೆಕ್ಕ ಹಾಕಲಾಗುತ್ತಿದೆ.

ಯಾರ ಮೇಲೆ ದಾಳಿ?
ಉಮಾಕಾಂತ್ -ತಹಶೀಲ್ದಾರ್ ಶಹಾಪುರ ತಾಲೂಕು ಕಚೇರಿ ಯಾದಗಿರಿ.
ರಾಜಶೇಖರ್-ಯೋಜನಾ ನಿರ್ದೇಶಕರು ನಿರ್ಮಿತಿ ಕೇಂದ್ರ ತುಮಕೂರು,
ಮಂಜುನಾಥ್-ಸರ್ವೆ ಸೂಪರ್ವೈಸರ್, ಮಂಗಳೂರು.

ರೇಣುಕಾ ಡಾ.ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ಅಧಿಕಾರಿ ವಿಜಯಪುರ.
ಮುರಳಿ ಟಿವಿ-ಹೆಚ್ಚುವರಿ ನಿರ್ದೇಶಕರು, ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶನಾಲಯ, ಬೆಂಗಳೂರು, ಹೆಚ್‌ಆರ್ ನಟರಾಜ್ – ಇನ್ಸ್‌ಪೆಕ್ಟರ್ ಕಾನೂನು ಮಾಪನಶಾಸ್ತ್ರ ಬೆಂಗಳೂರು, ಆನಂತ್ ಕುಮಾರ್ -ಹೊಸಕೋಟೆ ತಾಲೂಕು ಕಛೇರಿ ಬೆಂಗಳೂರು ಗ್ರಾಮಾಂತರ.

RELATED ARTICLES

Latest News