Saturday, May 17, 2025
Homeಅಂತಾರಾಷ್ಟ್ರೀಯ | Internationalಬ್ರಹ್ಮೋಸ್ ದಾಳಿ ಒಪ್ಪಿಕೊಂಡ ಪಾಕ್‌ನ ನಿವೃತ್ತ ಏರ್ ಮಾರ್ಷಲ್

ಬ್ರಹ್ಮೋಸ್ ದಾಳಿ ಒಪ್ಪಿಕೊಂಡ ಪಾಕ್‌ನ ನಿವೃತ್ತ ಏರ್ ಮಾರ್ಷಲ್

Pakistan’s AWACS Aircraft Lost In BrahMos Strikes At Bholari Air Base

ಇಸ್ಲಾಮಾಬಾದ್, ಮೇ 16- ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ ಪಾಕಿಸ್ತಾನದ ಮೇಲೆ ಭಾರತ ಬ್ರಹ್ಮಸ್ ದಾಳಿ ಮಾಡಿದೆ. ಆದರೆ, ಪಾಕಿಸ್ತಾನ ಸೇನಾ ಮುಖ್ಯಸ್ಥ ಮುನೀರ್ ಇದನ್ನು ಒಪ್ಪಿಕೊಳ್ಳುತ್ತಿಲ್ಲ ಎಂದು ಪಾಕ್ ನಿವೃತ್ತ ಏರ್ ಮಾರ್ಷಲ್ ಮಸೂದ್ ಅಕ್ತರ್ ತಿಳಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಭಾರತ ನಡೆಸಿದ ಆಪರೇಷನ್ ಸಿಂಧೂರದ ಅಡಿಯಲ್ಲಿ ಪಾಕ್‌ನ 9 ಉಗ್ರರ ನೆಲೆಗಳು ಸೇರಿದಂತೆ ಕರಾಚಿ ಬಳಿಯಿರುವ ಭೋಲಾರಿಯ ವಾಯುನೆಲೆ ಮೇಲೆ ಬ್ರಹ್ಮಸ್ ಕ್ಷಿಪಣಿ ದಾಳಿಯಾಗಿದೆ. ಮೊದಲು ಇದೇ ಜಾಗವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ. ವಾಯುನೆಲೆಯ: ಹ್ಯಾಂಗರ್‌ಗೂ ಹಾನಿಯಾಗಿದೆ.

ಜೊತೆಗೆ ವಾಯುಪಡೆ ಎಚ್ಚರಿಕೆ ಮತ್ತು ನಿಯಂತ್ರಣ ವ್ಯವಸ್ಥೆಯ ವಿಮಾನವು ಕೂಡ ಇದೇ ಸಮಯದಲ್ಲಿ ಪತನಗೊಂಡಿದೆ ಎಂದು ಅವರು ಒಪ್ಪಿಕೊಂಡಿದ್ದಾರೆ. ದಾಳಿಯ ಬಗ್ಗೆ ಮಾಹಿತಿ ಬಿಚ್ಚಿಟ್ಟ ಅವರು, ಪಾಕಿಸ್ತಾನದ ವಾಯುನೆಲೆಗಳ ಪೈಕಿ ಭೋಲಾರಿಯು ಒಂದು. ಇದು ಭಾರತ-ಪಾಕಿಸ್ತಾನ ಅಂತರರಾಷ್ಟ್ರೀಯ ಗಡಿಯಿಂದ 270 ಕಿ.ಮೀ ದೂರದಲ್ಲಿದೆ.

ಭಾರತದ ಪಡೆಗಳು ಒಂದರ ನಂತರ ಒಂದರಂತೆ ನಾಲ್ಕು ಬ್ರಹ್ಮಸ್ ಕ್ಷಿಪಣಿಗಳನ್ನು ಹಾರಿಸಿ ದಾಳಿ ನಡೆಸಿವೆ. ದಾಳಿಯ ವೇಳೆ ಒಂದು ಕ್ಷಿಪಣಿ ಭೋಲಾರಿ ವಾಯುನೆಲೆಯ ಹ್ಯಾಂಗರ್‌ಗೆ ಡಿಕ್ಕಿ ಹೊಡೆದಿದ್ದು, ಸಾವು-ನೋವುಗಳು ಕೂಡ ವರದಿಯಾಗಿವೆ.

ಪಾಕಿಸ್ತಾನದ ಮೂರು ವಾಯುನೆಲೆಗಳಾದ ಉತ್ತರ ವಾಯು ಕಮಾಂಡ್. ಕೇಂದ್ರ ವಾಯುನೆಲೆ ಮತ್ತು ದಕ್ಷಿಣ ವಾಯುನೆಲೆಗಳ ಅಡಿಯಲ್ಲಿರುವ ವಾಯುನೆಲೆಗಳ ಮೇಲೆ ಭಾರತ ದಾಳಿ ನಡೆಸಿದೆ. ಅಲ್ಲದೆ ಮ್ಯಾಕ್ಸ್ ರ್ ಟೆಕ್ನಾಲಜೀಸ್ ಬಿಡುಗಡೆ ಮಾಡಿದ ಸ್ಯಾಟ್‌ಲೈಟ್ ಚಿತ್ರಗಳಲ್ಲಿ ದಾಳಿಯಾಗಿರುವುದು ಸಾಬೀತಾಗಿದ್ದು, ಹಾನಿಯ ದೃಶ್ಯಗಳನ್ನು ತೋರಿಸಿದೆ. ಆದರೆ ಪಾಕಿಸ್ತಾನ ಸೇನಾ ಮುಖ್ಯಸ್ಥ ಮುನೀರ್ ಇದನ್ನು ಒಪ್ಪಿಕೊಳ್ಳುತ್ತಿಲ್ಲ ಎಂದು ಅವರು ಕಿಡಿಕಾರಿದ್ದಾರೆ.

ಮಾಹಿತಿ ಪ್ರಕಾರ, ಈ ದಾಳಿಯಿಂದಾಗಿ ಸ್ಟಾಡ್ರನ್ ಲೀಡರ್ ಉಸ್ಮಾನ್ ಯೂಸುಫ್ ಮತ್ತು ನಾಲ್ವರು ವಾಯುಪಡೆ ಸಿಬ್ಬಂದಿ ಸೇರಿದಂತೆ 50 ಜನರು ಸಾವನ್ನಪ್ಪಿದ್ದಾರೆ. ಜೊತೆಗೆ ಪಾಕಿಸ್ತಾನಿ ವಿಮಾನಗಳು ನಾಶವಾಗಿವೆ. ಅದಲ್ಲದೇ ಪಾಕ್ ವಾಯುಪಡೆಯ ಮೂಲಸೌಕರ್ಯದ ಸುಮಾರು ಶೇ.20ರಷ್ಟು ನಾಶವಾಗಿದೆ ಎಂದು ವರದಿಯಾಗಿದೆ.

ಬ್ರಹ್ಮಸ್ ಇಂಡೋ-ರಷ್ಯಾದ ಸೂಪರ್‌ಾನಿಕ್ ಕ್ರೂಸ್ ಕ್ಷಿಪಣಿಯಾಗಿದ್ದು, ಇದನ್ನು ಭೂ. ವಾಯು ಹಾಗೂ ಜಲ ಮೂರು ಸೇನೆ ಬಳಸಬಹುದಾಗಿದೆ. ಭಾರತವು -30 ಯುದ್ಧವಿಮಾನದಿಂದ ಬ್ರಹ್ಮಸ್ ಕ್ಷಿಪಣಿಯನ್ನು ಬಳಸಿದೆ ಎನ್ನಲಾಗಿದೆ.

RELATED ARTICLES

Latest News