Saturday, May 17, 2025
Homeಜಿಲ್ಲಾ ಸುದ್ದಿಗಳು | District Newsಮಾದಪ್ಪನ ಹುಂಡಿ ಹಣ ಎಣಿಕೆ, 29 ದಿನಗಳಲ್ಲಿ 2.54 ಕೋಟಿ ರೂ ಕಾಣಿಕೆ ಸಂಗ್ರಹ

ಮಾದಪ್ಪನ ಹುಂಡಿ ಹಣ ಎಣಿಕೆ, 29 ದಿನಗಳಲ್ಲಿ 2.54 ಕೋಟಿ ರೂ ಕಾಣಿಕೆ ಸಂಗ್ರಹ

Rs 2.54 crore donation collected in 29 days in male mahadeshwara temple

ಹನೂರು, ಮೇ.16-ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟ ಮಾದಪ್ಪನ ದೇಗುಲದಲ್ಲಿ ಹುಂಡಿ ಹಣ ಎಣಿಕೆ ನಡೆದಿದ್ದು ಕಳೆದ 29 ದಿನಗಳಲ್ಲಿ 2.54 ಕೋಟಿ ರೂ ಸಂಗ್ರಹವಾಗಿದೆ. ಮಾದಪ್ಪ ಮತ್ತೆ ಕೋಟ್ಯಾಧಿಪತಿ ಆಗಿರುವುದಲ್ಲದೆ ವಿದೇಶಿ ಹಣ ಕೂಡ ಹರಿದು ಬಂದಿದೆ.

ಸಾಲೂರು ಬೃಹನ ಠಾಧ್ಯಕ್ಷರಾದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ರವರ ಉಪಸ್ಥಿತಿಯಲ್ಲಿ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಘು ರವರ ನೇತೃತ್ವದಲ್ಲಿ ಬೆಳಿಗ್ಗೆ 7:00 ಗಂಟೆಯಿಂದಹುಂಡಿ ಹಣ ಎಣಿಕೆಕಾರ್ಯ ನಡೆದಿದ್ದು 29 ದಿನಗಳಲ್ಲಿ 2,54,27,263 /= ಕೋಟಿ ರೂ. ನಗದು (ಹುಂಡಿ ಮತ್ತು ಇ-ಹುಂಡಿ ಸೇರಿ) ಹಾಗೂ ಚಿನ್ನ
69ಗ್ರಾಂ ಬೆಳ್ಳಿ 02.770 ಕೆಜಿ 06 ವಿದೇಶಿ ನೋಟು 02 ಸಾವಿರ ಮುಖ ಬೆಲೆ 06 ನೋಟುಗಳು ಹುಂಡಿಯಲ್ಲಿ ದೊರೆತಿದೆ.

ಈ ಬಾರಿಯೂ ಭಕ್ತರಿಂದ ಹರಕೆ ರೂಪದಲ್ಲಿ ಇಷ್ಟೊಂದು ದೊಡ್ಡ ಮೊತ್ತದ ಕಾಣಿಕೆ ಸಂಧಿರುವುದು ಶಕ್ತಿ ಯೋಜನೆಯಡಿ ಮಹಿಳೆಯರ ಉಚಿತ ಪ್ರಯಾಣ ರಜಾ ದಿನಗಳು ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಶ್ರೀ ಕ್ಷೇತ್ರಕ್ಕೆ ಬೇಟಿ ನೀಡಿದ್ದರಿಂದ ಹೆಚ್ಚುಹಣಸಂಗ್ರಹವಾಗಿದೆ.

ಮ. ಬೆಟ್ಟ ಬಸ್ ನಿಲ್ದಾಣದ ವಾಣಿಜ್ಯ ಕಟ್ಟಡದಲ್ಲಿ ಸಿಸಿ ಕ್ಯಾಮರಗಳ ಕಣ್ಣಾವಲಿನಲ್ಲಿ ಹಾಗೂ ಮ. ಬೆಟ್ಟ ಠಾಣೆ ಪೊಲೀಸ್ ಬಂದೋಬಸ್ತಿನಲ್ಲಿ ಪ್ರಾಧಿಕಾರದ ಸಿಬ್ಬಂಧಿಗಳು ಹಾಗೂ ಕೊಳ್ಳೇಗಾಲ ಬ್ಯಾಂಕ್ ಆಫ್ ಬರೋಡ ಸ್ಥಳೀಯ ಶಾಖೆ ಸಿಬ್ಬಂಧಿಗಳುಹುಂಡಿ ಎಣಿಕೆಕಾರ್ಯದಲ್ಲಿ ತೊಡಗಿದ್ದರು.

ಹುಂಡಿ ಎಣಿಕೆಕಾರ್ಯದಲ್ಲಿ ಪ್ರಾಧಿಕಾರದ ಉಪ ಕಾರ್ಯದರ್ಶಿ ಚಂದ್ರಶೇಖರ.ಜಿ.ಎಲ್, ಹಣಕಾಸು ಮತ್ತು ಲೆಕ್ಕಾಧೀಕ್ಷಕ ಸಿ. ಮಹದೇವು ಚಾ.ನಗರ ಜಿಲ್ಲಾಡಳಿತ ಕಛೇರಿ ಭಾರತಿ ಪ್ರಾಧಿಕಾರದ ಸಿಬ್ಬಂದಿಗಳು ಮ.ಬೆಟ್ಟ ಪೊಲೀಸ್ ಅಧಿಕಾರಿಗಳು ಮತ್ತು ಸರಗೂರು ಮಹದೇವಸ್ವಾಮಿ ಸೇರಿದಂತೆ ಇನ್ನಿತರ ಸಿಬ್ಬಂದಿಗಳು ಕೊಳ್ಳೇಗಾಲ ಬ್ಯಾಂಕ್ ಆಪ್ ಬರೋಡ ಮುಖ್ಯ ವ್ಯವಸ್ಥಾಪಕರು ಸಿಬ್ಬಂದಿಗಳು ಹಾಜರಿದ್ದರು.

RELATED ARTICLES

Latest News