ಕರೂರ್, ಮೇ 17 (ಪಿಟಿಐ) ತಮಿಳುನಾಡಿನ ಕರೂರ್ ಜಿಲ್ಲೆಯ ಸೆಮ್ಮ ಡೈ ಬಳಿ ಓಮ್ಮಿ ಬಸ್ ಒಂದು ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿ, ಇತರ 15 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಒಮ್ಮಿ ಬಸ್ ಮೊದಲು ಮೀಡಿಯನ್‌ಗೆ ಡಿಕ್ಕಿ ಹೊಡೆದು. ವಿರುದ್ಧ ದಿಕ್ಕಿನಲ್ಲಿ ಹೋಗುತ್ತಿದ್ದ ಪ್ರವಾಸಿ ವ್ಯಾನ್‌ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರಲ್ಲಿ ವ್ಯಾನ್ ಚಾಲಕ ಕೂಡ ಸೇರಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ ಮತ್ತು ಗಾಯಾಳುಗಳನ್ನು ಚಿಕಿತ್ಸೆ ಗಾಗಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಗಳೂರಿನಿಂದ ನಾಗರಕೋಯಿಲ್‌ಗೆ ಹೋಗುತ್ತಿದ್ದ ಓಮ್ಮಿ ಬಸ್ ಕರೂರ್ ಸೇಲಂ ಹೆದ್ದಾರಿಯಲ್ಲಿ ಟ್ಯಾಕ್ಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ, ವಾಹನವು ಬಲಕ್ಕೆ ತಿರುಗಿ ಮೀಡಿಯನ್ ಅನ್ನು ಡಿಕ್ಕಿ ಹೊಡೆದು ತೂತುಕುಡಿಯಿಂದ ಬರುತ್ತಿದ್ದ ಪ್ರವಾಸಿ ವ್ಯಾನ್‌ಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಕ್ಕಿಯ ಪರಿಣಾಮ ಓಮ್ಮಿ ಬಸ್, ಟ್ರ್ಯಾಕ್ಟರ್ ಮತ್ತು ವ್ಯಾನ್‌ನ ಮುಂಭಾಗವು ಹಾನಿಗೊಳಗಾಗಿದೆ.ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆದಿದೆ.