Saturday, May 17, 2025
Homeರಾಷ್ಟ್ರೀಯ | Nationalಪಾಕಿಸ್ತಾನದಲ್ಲಿ ಧೂಳೆಬ್ಬಿಸಿದ ಭಾರತದ ಬ್ರಹ್ಮೋಸ್ ಕ್ಷಿಪಣಿಗೆ ಭಾರಿ ಡಿಮ್ಯಾಂಡ್..!

ಪಾಕಿಸ್ತಾನದಲ್ಲಿ ಧೂಳೆಬ್ಬಿಸಿದ ಭಾರತದ ಬ್ರಹ್ಮೋಸ್ ಕ್ಷಿಪಣಿಗೆ ಭಾರಿ ಡಿಮ್ಯಾಂಡ್..!

India's BrahMos in High Demand: From Asia to Middle East, Nations Eye BrahMos Post-Op Sindoor

ಬೆಂಗಳೂರು, ಮೇ.17– ಭಾರತವು ಅಪರೇಷನ್ ಸಿಂಧೂರ್‌ನಲ್ಲಿ ಪಡೆದ ಯಶಸ್ಸಿಗೆ ಶಬ್ದಾತೀತವೇಗದ ಬ್ರಹ್ಮೋಸ್ ಕ್ಷಿಪಣಿ ಬಳಕೆ ಮಾಡಿದ್ದೇ ಕಾರಣ ಎಂದು ಹೇಳಲಾಗುತ್ತಿದೆ. ಇದು ಈಗ ಜಗತ್ತಿನ ಗಮನ ಸೆಳೆದಿದೆ. ಏಷ್ಯಾ, ಮಧ್ಯಪ್ರಾಚ್ಯ ಮತ್ತು ಲ್ಯಾಟಿನ್ ಅಮೆರಿಕದಾದ್ಯಂತದ ದೇಶಗಳು ಈಗ ಈ ಶಕ್ತಿಶಾಲಿ ಕ್ಷಿಪಣಿ ಖರೀದಿಸಲು ಆಸಕ್ತಿ ತಳೆದಿವೆ.

ಬ್ರಹ್ಮಸ್ ಕ್ಷಿಪಣಿ ಎಂದರೇನು ?
ಬ್ರಹ್ಮೋಸ್ ಒಂದು ದೀರ್ಘ ವ್ಯಾಪ್ತಿಯ ಶಬ್ದಾತೀತ ವೇಗದ ಸಮರ ಕ್ಷಿಪಣಿಯಾಗಿದ್ದು ಇದನ್ನು ಭಾರತದ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ) ಮತ್ತು ರಷ್ಯಾದ ಎನ್‌ಪಿಓಎಂ ಜಂಟಿಯಾಗಿ ಅಭಿವೃದ್ಧಿಪಡಿಸಿವೆ. ಇದನ್ನು ನೆಲದಿಂದ, ಗಾಳಿಯಲ್ಲಿ, ಸಮುದ್ರದಿಂದ ಅಥವಾ ಜಲಾಂತರ್ಗಾಮಿಯಿಂದ ಹೇಗೆ ಬೇಕಾದರೂ ಉಡಾವಣೆ ಮಾಡಬಹುದಾಗಿದೆ. ಮಾರ್ಚ್ 3 ರವರೆಗಿನ ವೇಗದಲ್ಲಿ ಇದು ಪಯಣಿಸಬಲ್ಲದು. ಇದು ಫೈರ್ ಆ್ಯಂಡ್ ಫರ್ಗೆಟ್ ಮಾದರಿಯನ್ನು ಹೈ ಪ್ರಿಸಿಷನ್‌ನೊಂದಿಗೆ ಅನುಸರಿಸುತ್ತದೆ.

ಬ್ರಹ್ಮೋಸ್ ಕೆಲಸ ಮಾಡುವ ವಿಧಾನ
ಈ ಕ್ಷಿಪಣಿ ಎರಡು ಹಂತಗಳಲ್ಲಿ ಚಲಿಸುತ್ತದೆ. ಉಡಾವಣೆಗೆ ಘನ ಬೂಸ್ಟರ್ ಅನ್ನು ಮತ್ತು ಅತಿವೇಗದ ಚಲನೆಗೆ ದ್ರವ ಲ್ಯಾಮ್‌ಜೆಟ್ ಅನ್ನು ಇದು ಬಳಕೆ ಮಾಡುತ್ತದೆ. 15 ಕಿ.ಮೀ. ಎತ್ತರದಲ್ಲಿ ಹಾರುವ ಇದು ನೆಲದಿಂದ ಕೇವಲ 10 ಮೀಟರ್ ಎತ್ತರದಲ್ಲೂ ಹಾರುವ ಸಾಮರ್ಥ್ಯ ಹೊಂದಿದೆ. ಇದನ್ನು ಪತ್ತೆ ಮಾಡುವುದು ಕಷ್ಟಕರ. ತಡೆಯುವುದು ಇನ್ನೂ ಕಷ್ಟಸಾಧ್ಯ.

ಫಿಲಿಪ್ಪಿನ್ಸ್
ಮಾಧ್ಯಮ ವರದಿಗಳ ಪ್ರಕಾರ ಭಾರತವು 2025 ರ ಏಪ್ರಿಲ್‌ನಲ್ಲಿ ಫಿಲಿಫೀನ್ಸ್‌ಗೆ 375 ದಶಲಕ್ಷ ಡಾಲರ್‌ಗಳ ಒಪ್ಪಂದದಡಿ ಬ್ರಹ್ಮಸ್ ಕ್ಷಿಪಣಿಯ ಎರಡನೇ ತಂಡವನ್ನು ಕಳುಹಿಸಿಕೊಟ್ಟಿದೆ. ಇದು ಭಾರತವನ್ನು ಪ್ರಥಮ ಪ್ರಮುಖ ಕ್ಷಿಪಣಿ ರಫ್ತುದಾರ ದೇಶವನ್ನಾಗಿ ಮಾಡಿದೆ ಮತ್ತು ಈ ವಿಶ್ವಾಸಾರ್ಹ ದೀರ್ಘ ಶ್ರೇಣಿಯ ಶಸ್ತ್ರಾಸ್ತ್ರಕ್ಕೆ ಜಾಗತಿಕ ಖರೀದಿದಾರರಿಗೆ ಬಾಗಿಲು ತೆರೆದಿದೆ.

ವಿಯೆಟ್ನಾಂ
ವಿಯೆಟ್ನಾಂ ತನ್ನ ನೌಕಾಪಡೆ ಬಲವರ್ಧನೆಗಾಗಿ ಬ್ರಹ್ಮಸ್ ಕ್ಷಿಪಣಿಯನ್ನು 700 ದಶಲಕ್ಷ ಡಾಲರ್ ಒಪ್ಪಂದದಡಿ ಖರೀದಿಸಲಿದೆ. ಮಲೇಶಿಯಾ ತನ್ನ ಸು-30 ಜೆಟ್‌ಗಳು ಮತ್ತು ಕೆಡಾಹ್ ವರ್ಗದ ಸಮರ ನೌಕೆಗಳನ್ನು ಬ್ರಹ್ಮಸ್‌ನಿಂದ ಬಲಪಡಿಸಲು ಮುಂದಾಗುವ ಸಾಧ್ಯತೆಗಳಿವೆ. ಎರಡೂ ದೇಶಗಳು ದಕ್ಷಿಣ ಚೀನಾ ಸಮುದ್ರದಲ್ಲಿ ವ್ಯಕ್ತವಾಗುವ ಬೆದರಿಕೆಗಳನ್ನು ಎದುರಿಸಲು ಬ್ರಹ್ಮಸ್‌ನಿಂದ ಸಜ್ಜಾಗುವ ಗುರಿ ಹೊಂದಿವೆ.

ಮಧ್ಯಪ್ರಾಚ್ಯ ಮತ್ತು ದಕ್ಷಿಣ ಅಮೆರಿಕ ಕ್ಯೂನಲ್ಲಿ
ಈಜಿಪ್ಟ್, ಯುಎಇ, ಸೌದಿ ಅರೇಬಿಯಾ, ಖತಾರ್, ಓಮಾನ್ ಮತ್ತು ಚಿಲಿ, ಬ್ರೆಜಿಲ್, ಅರ್ಜೆಂಟೀನಾ, ವೆನಿಜುವೆಲಾದಂತಹ ದೇಶಗಳು ಬ್ರಹ್ಮಸ್‌ನ ಕರಾವಳಿ ಮತ್ತು ನೌಕಾ ಆವೃತ್ತಿಗಳನ್ನು ಖರೀದಿಸಲು ಆಸಕ್ತಿ ತೋರಿವೆ. ಈ ನಿಟ್ಟಿನಲ್ಲಿ ಈಗಾಗಲೇ ಮಾತುಕತೆಗಳು ಪ್ರಗತಿಯಲ್ಲಿವೆ. ಭಾರತದ ಬ್ರಹ್ಮಸ್ ಅನ್ನು ಈಗ ಜಾಗತಿಕ ಗೇಮ್‌ ಚೇಂಜರ್ ಆಗಿ ಭಾವಿಸಲಾಗುತ್ತಿದೆ. ಆಪರೇಷನ್ ಸಿಂಧೂರದಲ್ಲಿ ಇದರ ಬಳಕೆಯಿಂದ ವಿಶ್ವದಾದ್ಯಂತ ಬ್ರಹ್ಮಸ್ ಕ್ಷಿಪಣಿಗೆ ವ್ಯಕ್ತವಾಗಿರುವ ಬೇಡಿಕೆ ಭಾರತದ ರಕ್ಷಣಾ ಉತ್ಪನ್ನಗಳ ರಪ್ತಿನ ಹೆಚ್ಚಳ, ಸ್ವಾವಲಂಬನೆ ಮತ್ತು ಕಾರ್ಯತಂತ್ರಾತ್ಮಕ ಪ್ರಭಾವವನ್ನು ಬಿಂಬಿಸುತ್ತದೆ.

ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಭಾರತವು ಪಾಕಿಸ್ತಾನದ 3 ಉಗ್ರನೆಲೆಗಳ ಮೇಲೆ ದಾಳಿ ನಡೆಸಿತು. ಕಾರ್ಯಾಚರಣೆ ನಂತರ ಇಡೀ ಜಗತ್ತು ಭಾರತದ ಮಿಲಿಟರಿ ಶಕ್ತಿಯನ್ನು ಕಂಡಿತು. ಆಪರೇಷನ್ ಸಿಂಧೂರ್‌ನ ಯಶಸ್ಸಿನ ನಂತರ ಭಾರತೀಯ ಮಿಲಿಟರಿ ಶಸ್ತ್ರಾಸ್ತ್ರಗಳು, ಕ್ಷಿಪಣಿಗಳು, ಡೋನ್‌ಗಳು ಮತ್ತು ಯುದ್ಧ ವಿಮಾನಗಳು ನಿರಂತರವಾಗಿ ಸುದ್ದಿಯಲ್ಲಿವೆ.
ಈ ಸಂಘರ್ಷದಲ್ಲಿ ಪಾಕಿಸ್ತಾನಕ್ಕೆ ಕಠಿಣ ಸಮಯವನ್ನು ನೀಡಿದ ಭಾರತದ ಸೂಪರ್‌ಸಾನಿಕ್ ಕ್ಷಿಪಣಿ ಬ್ರಹ್ಮಸ್ ಆಪರೇಷನ್ ಆಪರೇಷನ್ ಸಿಂಧೂರ್‌ನ ನಂತರ ಅಂತರರಾಷ್ಟ್ರೀಯ ಮಟ್ಟದಲ್ಲಿ ಬ್ರಹ್ಮಸ್ ಕ್ಷಿಪಣಿಗೆ ಬೇಡಿಕೆ ಹಠಾತ್ತನೆ ಹೆಚ್ಚಾಗಿದೆ. ಸಿಂಧೂರ್‌ನ ಸೂಪರ್ ಹೀರೋ ಆಗಿ ಹೊರಹೊಮ್ಮಿದೆ.

RELATED ARTICLES

Latest News