Sunday, May 18, 2025
Homeರಾಷ್ಟ್ರೀಯ | National3ನೇ ಹಂತದಲ್ಲಿ ತಾಂತ್ರಿಕ ಸಮಸ್ಯೆಯಿಂದ ಇಸ್ರೋದ EOS-09 ಉಪಗ್ರಹ ಉಡಾವಣೆ ವಿಫಲ

3ನೇ ಹಂತದಲ್ಲಿ ತಾಂತ್ರಿಕ ಸಮಸ್ಯೆಯಿಂದ ಇಸ್ರೋದ EOS-09 ಉಪಗ್ರಹ ಉಡಾವಣೆ ವಿಫಲ

India's PSLV-C61 mission to launch EOS-09 satellite fails

ಶ್ರೀಹರಿಕೋಟಾ,ಮೇ.18– ತಾಂತ್ರಿಕ ಸಮಸ್ಯೆ ಹಿನ್ನೆಲೆ, ಯಶಸ್ವಿಯಾಗಿ ಉಡಾವಣೆಗೊಂಡಿದ್ದ ಇಸ್ರೋದ 101ನೇ ಉಪಗ್ರಹ ಕಕ್ಷೆ ಸೇರುವಲ್ಲಿ ವಿಫಲಗೊಂಡಿದೆ. ಆಂಧ್ರಪ್ರದೇಶದ ಶ್ರೀಹರಿಕೋಟದಿಂದ ಇಸ್ರೋದ ಇಒಎಸ್ -09 (ಭೂಸರ್ವೇಕ್ಷಣಾ) ಉಪಗ್ರಹ ಪಿಎಸ್‌ಎಲ್ವಿ-261 ರಾಕೆಟ್ ಹೊತ್ತು ಯಶಸ್ವಿಯಾಗಿ ಉಡಾವಣೆಗೊಂಡಿತು. ಆದರೆ, 3ನೇ ಹಂತದಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದೆ.

ಉಡಾವಣೆ ಮಾಡಿದ ಉಪಗ್ರಹದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡು ಪ್ರಯತ್ನ ವಿಫಲವಾಗಿದೆ. ಇಒಎಸ್-09 ಉಪಗ್ರಹದ ಉಡಾವಣೆಯ 3 ನೇ ಹಂತದಲ್ಲಿ ತಾಂತ್ರಿಕ ಸಮಸ್ಯೆಗಳನ್ನು ಕಂಡುಬಂದಿದ್ದು, ಇದರಿಂದಾಗಿ ಕಾರ್ಯಾಚರಣೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ ಎಂದು ಇಸ್ರೋ ಮುಖ್ಯಸ್ಥವಿ ನಾರಾಯಣನ್ ಅವರು ಹೇಳಿದ್ದಾರೆ.

ರಾಕೆಟ್ ಉಡಾವಣೆಯ ನಾಲ್ಕು ಹಂತಗಳ ಪೈಕಿ, ಮೂರನೇ ಹಂತದಲ್ಲಿ ಒತ್ತಡ ಕುಸಿತಗೊಂಡಿದ್ದು, ಕಕ್ಷೆ ಸೇರುವಲ್ಲಿ ವಿಫಲವಾಗಿದೆ ಎಂದಿದ್ದಾರೆ. ಇದು ಶ್ರೀಹರಿಕೋಟಾದಿಂದ ಇಸ್ರೋದ 101 ನೇ ಉಡಾವಣೆಯಾಗಿದೆ. ಪಿಎಸ್ಎಲ್‌ವಿ ನಾಲ್ಕು ಹಂತದ ರಾಕೆಟ್ ಆಗಿದೆ. ಮೊದಲ ಎರಡು ಹಂತಗಳು ಸಾಮಾನ್ಯವಾಗಿ ಕಾರ್ಯ ನಿರ್ವಹಿಸುತ್ತಿದ್ದವು, ಆದರೆ ಮೂರನೇ ಹಂತದ ಮೋಟಾರ್ ಅನ್ನು ಪ್ರಾರಂಭಿಸಿದ ನಂತರ, ಅದರಲ್ಲಿ ಕೆಲವು ಸಮಸ್ಯೆ ಕಂಡುಬಂದಿದೆ ಎಂದು ನಾರಾಯಣನ್ ಹೇಳಿದರು. ಈ ಕಾರಣದಿಂದಾಗಿ ಮಿಷನ್ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.

ಬೆಂಗಳೂರಿನಲ್ಲಿರುವ ಇಸ್ರೋದ ಯು ಆರ್ ರಾವ್ ಉಪಗ್ರಹ ಕೇಂದ್ರವು ಗೂಢಚಾರ ಉಪಗ್ರವನ್ನು ನಿರ್ಮಿಸಿದೆ. ಸಿ-ಬ್ಯಾಂಡ್ ಸಿಂಥೆಟಿಕ್ ಅಪರ್ಚರ್ ರೇಡಾರ್ ಅನ್ನು ಉಪಗ್ರಹ ಹೊಂದಿದ್ದು, ಇದು ಎಲ್ಲಾ ಹವಾಮಾನ ಪರಿಸ್ಥಿತಿಗಳಲ್ಲಿ ಮತ್ತು ಕಡಿಮೆ ಬೆಳಕಿನಲ್ಲೂ ಭೂಮಿಯ ಮೇಲೆಯ ಹೆಚ್ಚಿನ ರೆಸಲ್ಯೂಶನ್ ಚಿತ್ರಗಳನ್ನು ಸೆರೆಹಿಡಿಯಲು ಅನುವು ಮಾಡಿಕೊಡುತ್ತದೆ.
ಇಓಎಸ್-09 ಉಪಗ್ರಹವು 2022 ರಲ್ಲಿ ಉಡಾವಣೆಯಾದ ಇಒಎಸ್-04 ಅನ್ನು ಹೋಲುತ್ತದೆ. ವಿವಿಧ ಕ್ಷೇತ್ರಗಳಲ್ಲಿ ರಿಮೋಟ್ ಸೆನ್ಸಿಂಗ್ ಡೇಟಾವನ್ನು ಒದಗಿಸುವುದು ಇದರ ಮುಖ್ಯ ಉದ್ದೇಶವಾಗಿತ್ತು.

ಈ ಉಪಗ್ರಹವು ಸಿಂಥೆಟಿಕ್ ಅಪರ್ಜರ್ ರಾಡಾರ್ ಎಂಬ ವಿಶೇಷ ಉಪಕರಣವನ್ನು ಹೊಂದಿದ್ದು, ಇದು ಹಗಲು ರಾತ್ರಿ ಮತ್ತು ಎಲ್ಲಾ ಹವಾಮಾನ ಪರಿಸ್ಥಿತಿಗಳಲ್ಲಿ ಭೂಮಿಯ ಚಿತ್ರಗಳನ್ನು ತೆಗೆಯಬಲ್ಲದು. ಕೃಷಿ, ಅರಣ್ಯ ಮೇಲ್ವಿಚಾರಣೆ ವಿಪತ್ತು ನಿರ್ವಹಣೆ, ನಗರ ಯೋಜನೆ ಮತ್ತು ರಾಷ್ಟ್ರೀಯ ಭದ್ರತೆಯಂತಹ ಕ್ಷೇತ್ರಗಳಲ್ಲಿ ಈ ತಂತ್ರ ಜ್ಞಾನವು ಬಹಳ ಮುಖ್ಯವಾಗಿದೆ.

ಈ ಉಪಗ್ರಹವನ್ನು ಆಗಾಗ್ಗೆ ಮತ್ತು ವಿಶ್ವಾಸಾರ್ಹ ಡೇಟಾವನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಇಸ್ರೋದ ಪಿಎಸ್‌ಎಲ್‌ವಿ ರಾಕೆಟ್ ವಿಶ್ವಾಸಾರ್ಹತೆಗೆ ಹೆಸರುವಾಸಿಯಾಗಿದೆ, ಆದರೆ ಈ ಬಾರಿಯ ವೈಫಲ್ಯ ವಿಜ್ಞಾನಿಗಳಿಗೆ ಹೊಸ ಸವಾಲುಗಳನ್ನು ಒಡ್ಡಿದೆ. ಭವಿಷ್ಯದಲ್ಲಿ ಇಂತಹ ಸಮಸ್ಯೆಗಳನ್ನು ತಪ್ಪಿಸಲು ಇಸ್ರೋ ತಂಡವು ಈಗ ಈ ದೋಷದ ಕಾರಣಗಳನ್ನು ವಿಶ್ಲೇಷಿಸುತ್ತದೆ. ಬಾಹ್ಯಾಕಾಶಕ್ಕೆ ಕಸ ಸೇರದಂತೆ ಈ ಕಾರ್ಯಾಚರಣೆಯನ್ನು ಕಸ ಮುಕ್ತವಾಗಿ ವಿನ್ಯಾಸಗೊಳಿಸಲಾಗಿದೆ. ಈ ವೈಫಲ್ಯದ ಹೊರತಾಗಿಯೂ, ಇಸ್ರೋದ ಸಾಧನೆಗಳು ಮತ್ತು ಬಾಹ್ಯಾಕಾಶ ಸಂಶೋಧನೆಗೆ ಅದರ ಕೊಡುಗೆಯನ್ನು ಪ್ರಪಂಚದಾದ್ಯಂತ ಪ್ರಶಂಸಿಸಲಾಗುತ್ತದೆ. ಇಂತಹ ಸವಾಲುಗಳು ವಿಜ್ಞಾನದ ಭಾಗವಾಗಿದ್ದು, ಇಸ್ರೋ ಶೀಘ್ರದಲ್ಲೇ ಹೆಚ್ಚಿನ ಶಕ್ತಿಯೊಂದಿಗೆ ಮರಳಲಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

ಉಪಗ್ರಹದ ವಿಶೇಷತೆ ಏನು? :
ಸಾಧಾರಣವಾಗಿ ಮೋಡಗಳು, ಬಿರುಗಾಳಿ, ರಾತ್ರಿಯ ವೇಳೆ ಹೆಚ್ಚಿನ ಉಪಗ್ರಹಗಳಿಗೆ ಸರಿಯಾಗಿ ಚಿತ್ರಗಳನ್ನು ಸೆರೆ ಹಿಡಿಯಲು ಸಾಧ್ಯವಾಗುವುದಿಲ್ಲ. ಆದರೆ ಈ ಉಪಗ್ರಹ ಮೋಡಗಳು, ಮಳೆ, ಮಂಜು ಸೇರಿದಂತೆ ಎಲ್ಲಾ ರೀತಿಯ ಹವಾಮಾನದಲ್ಲೂ ಹಗಲು ಮತ್ತು ರಾತ್ರಿ ಸ್ಪಷ್ಟವಾದ ಚಿತ್ರಗಳನ್ನು ಸೆರೆ ಹಿಡಿಯವ ಸಾಮರ್ಥ್ಯ ಹೊಂದಿತ್ತು.

ಸಿ ಬ್ರಾಂಡ್‌ನಲ್ಲಿರುವ ಸಿಂಥೆಟಿಕ್ ಅಪರ್ಚರ್ ರೇಡಾರ್ ಎಷ್ಟು ಶಕ್ತಿಶಾಲಿ ಎಂದರೆ ಭೂಪ್ರದೇಶ, ಸಸ್ಯಗಳು ಮತ್ತು ಮಾನವ ನಿರ್ಮಿತ ಡೇರೆಗಳನ್ನು ಸಹ ವರ್ಗೀಕರಣ ಮಾಡಿ ಫಲಿತಾಂಶ ನೀಡುವ ಗುರಿ ಹೊಂದಿತ್ತು. ಹೀಗಾಗಿ ಇನ್ನು ಮುಂದೆ ಗಡಿಯಲ್ಲಿ ಯಾವುದೇ ಸಮಯದಲ್ಲಿ ಅನುಮಾನಾಸ್ಪದ ಚಟುವಟಿಕೆ ನಡೆದರೂ ಅದರ ಸಂಪೂರ್ಣ ಚಿತ್ರಗಳು ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಿತ್ತು.

10 ರಿಂದ 225 ಕಿ ಮೀ.ವರೆಗಿನ ವಿಶಾಲವಾದ ಜಾಗಗಳನ್ನು ಸ್ಕ್ಯಾನ್ ಹಾಗೂ ದೊಡ್ಡ ಪ್ರಮಾಣದ ವಿಪತ್ತು ನಡೆದಾಗ ಅಂದರೆ ಪ್ರವಾಹ, ಚಂಡಮಾರುತಗಳು, ಭೂಕುಸಿತ ನಡೆದಾಗ ಅದರ ನೈಜ ಚಿತ್ರಣವನ್ನು ವೀಕ್ಷಿಸಬಹುದಾಗಿತ್ತು. ಈ ಉಪಗ್ರಹ ಗಡಿಯನ್ನು ಕಾಯುತ್ತದೆ ಎಂದು ಹೇಳಿದರೂ ತಪ್ಪಾಗಲಾರದು. ಅಕ್ರಮ ಸಮುದ್ರ ಚಟುವಟಿಕೆಯನ್ನು ಮೇಲ್ವಿಚಾರಣೆ, ತೈಲ ಸೋರಿಕೆಗಳನ್ನು ಪತ್ತೆ, ಭಾರತದ 7,500 ಕಿ ಮೀ ಉದ್ದದ ಕರಾವಳಿಯಲ್ಲಿ ಹಡಗುಗಳನ್ನು ಪತ್ತೆ ಹಚ್ಚುವ ಪ್ರಮುಖ ಗುಣ ಹೊಂದಿತ್ತು.

RELATED ARTICLES

Latest News