ಕೊಪ್ಪಳ,ಮೇ.18- ದುಡ್ದು ಕೊಡಲಿಲ್ಲ ಎಂದು ಮೊಮ್ಮಗ ರುಬ್ಬುವ ಕಲ್ಲು ಎತ್ತಿಹಾಕಿದ್ದ ಅಜ್ಜಿಯನ್ನೇ ಕೊಲೆ ಮಾಡಿರುವ ಘಟನೆ ಕೊಪ್ಪಳದ ಕನಕಗಿರಿ ಪಟ್ಟಣದಲ್ಲಿ ನಡೆದಿದೆ. ಕನಕಮ್ಮ ನಾಗಪ್ಪ ಬೊಕ್ಕಸದ(82) ಕೊಲೆಯಾದ ವೃದ್ಧಿಯಾಗಿದ್ದು ಚೇತನ್ ಕುಮಾರ್ ಕೊಲೆ ಮಾಡಿರುವ ದುಷ್ಟ ಮೊಮ್ಮಗ.
ಕೆಲಸಕ್ಕೆ ಹೋಗದೆ ಸ್ನೇಹಿತರ ಜೊತೆ ತಿರುಗಾಡುತ್ತಿದ್ದ ಚೇತನ್ ಪ್ರತಿ ದಿನ ಹಣ ನೀಡುವಂತೆ ತಂದೆ, ತಾಯಿ ಬಳಿ ಜಗಳವಾಡುತ್ತಿದ್ದ ಹಾಗೂ ಅಜ್ಜಿ ಸಮಾಧನ ಮಾಡಿ ಹಣ ಕುಡುತ್ತಿದ್ದರು. ನಿನ್ನೆ ರಾತ್ರಿ 100 ರುಪಾಯಿ ಕೊಡುವಂತೆ ಅಜ್ಜಿ ಕನಕಮ್ಮನ ಬಳಿ ಪರಿಪರಿಯಾಗಿ ಬೇಡಿದ್ದ ಆದರೆ ಹಣ ನೀಡಲು ನಿರಾಕರಿಸಿದ್ದಾರೆ.
ಇದರಿಂದ ಕೋಪಗೊಂಡ ಚೇತನ್ ಅಡುಗೆ ಮನೆಗೆ ಹೋಗಿನ ರುಬ್ಬುವ ಕಲ್ಲು ತಂದು ಕನಕಮ್ಮಳ ತಲೆ ಮೇಲೆ ಎತ್ತಿಹಾಕಿದ್ದ, ತೀವ್ರ ರಕ್ತಸ್ರಾವದಿಂದ ಮನೆಯಲ್ಲಿಯೇ ಅಜ್ಜಿ ಮೃತಪಟ್ಟಿದ್ದಾರೆ.ಪೋಷಕರು ಮಗನ ರಾಕ್ಷಸಿ ಕೃತ್ಯ ಕಂಡ ಆತಂಕಗೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ್, ಪಿಐ ಎಂ.ಡಿ ಫೈಜುಲ್ಲಾ ಭೇಟಿ ನೀಡಿ, ಪರಿಶೀಲಿಸಿದರು. ಚೇತನ್ ತಂದೆ ವೆಂಕಟೇಶ್ ದೂರು ನೀಡಿದ್ದು ಕನಕಗಿರಿ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ. ಆರೋಪಿ ಚೇತನ್‌ಕುಮಾರ್‌ನನ್ನು ಪೊಲೀಸರು ಬಂಧಿಸಿದ್ದಾರೆ.