ಈ ಧಾರಾವಾಹಿಯ ನಾಯಕ ನಾಯಕಿಯಾಗಿ ಕರ್ಣ ಮತ್ತು ಸಾಹಿತ್ಯಾ ಜೋಡಿ ಜನರ ಮನಸ್ಸನ್ನ ಗೆಲ್ಲುತ್ತಾ ಬಂದಿದೆ. ಕುಟುಂಬದ ಸದಸ್ಯರೆಲ್ಲ ಮೆಚ್ಚಿ ನೋಡುವ ಈ ಧಾರಾವಾಹಿಯಲ್ಲಿ ‘ಬ್ಲಾಕ್ ರೋಜ್’ ಯಾರು ಎನ್ನುವುದನ್ನು ಈಗಾಗಲೇ ಪ್ರೇಕ್ಷಕರಿಗೆ ರಿವೀಲ್ ಮಾಡಲಾಗಿದೆ.
ಕರ್ಣನ ತಾಯಿ ಅರುಂಧತಿಯೇ ‘ಬ್ಲಾಕ್ ರೋಜ್’ ಎನ್ನುವ ರಹಸ್ಯ ನೋಡುಗರಿಗೇನೋ ಗೊತ್ತಾಯ್ತು. ಆದರೆ, ಸಾಹಿತ್ಯಾಗೆ ಮಾತ್ರ ಇದರ ಸುಳಿವಿರೋದಿಲ್ಲ. ಇಂಥ ಸಂಧರ್ಭದಲ್ಲಿ ಸದ್ಯದಲ್ಲಿಯೇ ಸಾಹಿತ್ಯಾಗೂ ಕೂಡಾ ತನ್ನ ಕುಟುಂಬದ ಸದಸ್ಯರಲ್ಲಿ ಇರುವ ಒಬ್ಬರೇ ‘ಬ್ಲಾಕ್ ರೋಜ್’ ಎನ್ನುವ ಸತ್ಯ ಗೊತ್ತಾಗಲಿದ್ದು, ಇದರಿಂದ ಕರ್ಣ ಮತ್ತು ಸಾಹಿತ್ಯಾ ರ ಜೀವನದಲ್ಲಿ, ಸಂಬಂಧಗಳಲ್ಲಿ ಏನೆಲ್ಲಾ ಬದಲಾವಣೆಗಳು ಆಗಲಿವೆ ಎನ್ನುವುದು ಆಸಕ್ತಿಕರ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ವಾರದ ಏಳೂ ದಿವಸ ಪ್ರತಿ ಸಂಜೆ 6ಕ್ಕೆ ಪ್ರಸಾರವಾಗುವ ‘ಕರಿಮಣಿ’ ಅತ್ಯಂತ ಕುತೂಹಲದಿಂದ ಸಾಗುವಲ್ಲಿ ಯಶಸ್ವಿಯಾಗಿದೆ. ಕರ್ಣ ಹಾಗೂ ಸಾಹಿತ್ಯ ಜೋಡಿಗೂ ವೀಕ್ಷಕರು ಫಿದಾ ಆಗಿದ್ದಾರೆ.