ಬೆಂಗಳೂರು, ಮೇ 20- ರಾಜ್ಯದ ಪೊಲೀಸ್ ಮಹಾ ನಿರ್ದೇಶಕರಾದ ಅಲೋಕ್ ಮೋಹನ್ ರವರು ಸೇವೆಯಿಂದ ನಿವೃತ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ನಾಳೆ ಅವರಿಗೆ ಬೀಳ್ಕೊಡುಗೆ ಕವಾಯತು ಏರ್ಪಡಿಸಲಾಗಿದೆ.ನಗರದ ಕೋರಮಂಗಲದ ಕೆಎಸ್‌ಆರ್‌ಪಿ ಕವಾಯತು ಮೈದಾನದಲ್ಲಿ ನಾಳೆ ಬೆಳಗ್ಗೆ 8 ಗಂಟೆಗೆ ಈ ಕವಾಯಿತು ನಡೆಯಲಿದೆ.
ಪೊಲೀಸ್ ಸೇವೆಯಿಂದ ನಿವೃತ್ತಿಯಾಗುತ್ತಿರುವ ಅಲೋಕ್ ಮೋಹನ್ ಅವರು ಕವಾಯತಿನ ವಂದನೆ ಸ್ವೀಕರಿಸಲಿದ್ದಾರೆ.ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ಅವರ ನಾಯಕತ್ವದಲ್ಲಿ ಈ ಕವಾಯತು ನಡೆಯಲಿದೆ.
ರಾಜ್ಯದ ಡಿಜಿಪಿ ಆಗಿದ್ದ ಪ್ರವೀಣ್‌ಸೂದ್ ಅವರು ಸಿಬಿಐ ನಿರ್ದೇಶಕರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಅಲೋಕ್‌ಮೋಹನ್ ರವರು ಡಿಜಿಪಿಯಾಗಿ ಅಧಿಕಾರ ವಹಿಸಿಕೊಂಡರು. ನಾಳೆ ಅವರು ಸೇವೆಯಿಂದ ನಿವೃತ್ತಿಯಾಗಲಿದ್ದಾರೆ.