Wednesday, May 21, 2025
Homeರಾಜ್ಯ200 ಪೊಲೀಸ್‌‍ ಅಧಿಕಾರಿ, ಸಿಬ್ಬಂದಿಗೆ ಡಿಜಿ, ಐಜಿಪಿ ಪ್ರಶಂಸನಾ ಸೇವಾ ಪದಕ

200 ಪೊಲೀಸ್‌‍ ಅಧಿಕಾರಿ, ಸಿಬ್ಬಂದಿಗೆ ಡಿಜಿ, ಐಜಿಪಿ ಪ್ರಶಂಸನಾ ಸೇವಾ ಪದಕ

200 police officers and personnel to be awarded DG, IGP Commendation Service Medal

ಬೆಂಗಳೂರು,ಮೇ 20-ಉತ್ತಮ ಕಾರ್ಯದಕ್ಷತೆ ತೋರಿದ ಪೊಲೀಸ್‌‍ ಅಧಿಕಾರಿ ಮತ್ತು ಸಿಬ್ಬಂದಿಗೆ ರಾಜ್ಯ ಪೊಲೀಸ್‌‍ ಮಹಾ ನಿರ್ದೇಶಕರ ಹೆಸರಿನಲ್ಲಿ ಇದೇ ಮೊದಲ ಬಾರಿಗೆ ನೀಡಲಾಗುತ್ತಿರುವ ಪ್ರಶಂಸನಾ ಸೇವಾ ಪದಕಕ್ಕೆ 200 ಮಂದಿ ಅಧಿಕಾರಿ ಹಾಗೂ ಸಿಬ್ಬಂದಿ ಆಯ್ಕೆಯಾಗಿದ್ದಾರೆ.

ಐಪಿಎಸ್‌‍ ಅಧಿಕಾರಿಗಳಾದ ಶ್ರೀಜೇಶ್‌,ಡಾ.ಸುಬ್ರಹೇಶ್ವರ ರಾವ್‌,ಲಾಬುರಾಮ್‌, ಸಂದೀಪ್‌ ಪಾಟೀಲ್‌, ರಮಣ್‌ ಗುಪ್ತಾ,ಡಾ.ಚಂದ್ರಗುಪ್ತ,ಚೇತನ್‌ ಸಿಂಗ್‌ ರಾಥೋಡ್‌,ಡಾ.ಎಂ.ಬಿ.ಬೋರಲಿಂಗಯ್ಯ, ಎಸ್‌‍.ಡಿ.ಶರಣಪ್ಪ, ಎಂ.ಎನ್‌.ಅನುಚೇತ್‌, ಬಿ.ರಮೇಶ್‌, ಸಂತೋಷ್‌ ಬಾಬು, ಎಸ್‌‍.ಗಿರೀಶ್‌,ಡಾ.ಸಂಜೀವ್‌ ಎಂ.ಪಾಟೀಲ್‌,ಜಿ.ಶಿವ ವಿಕ್ರಂ,ಹೆಚ್‌.ಶೇಖರ್‌,ಲೋಕೇಶ್‌ ಬಿ.ಜಗಲಸಾರ,ಡಾ.ಸೌಮ್ಯಲತಾ ಹಾಗೂ ಕೆ.ವಿ ಅಶೋಕ್‌ ಅವರು ಪದಕಕ್ಕೆ ಭಾಜನರಾಗಿದ್ದಾರೆ.

ಬಿ.ಎನ್‌. ನರಸಿಂಹಮೂರ್ತಿ (ಎಪಿಆರ್‌ಒ-ಡಿಜಿ ಕಚೇರಿ), ಕೆ.ಬಿ.ಗೌಡ, ಲಕ್ಷ್ಮಣ ಎಸ್‌‍.ಕೆ. ಮನೋಹರ್‌ ಕೆ.ಆರ್‌,ವೈಎಸ್‌‍ ಹುಕ್ಲಿ, .ರವಿಪ್ರಕಾಶ್‌,ಹೆಚ್‌.ಕೆ.ಕುಮಾರಸ್ವಾಮಿ,ಎಸ್‌‍.ವಿ.ಶ್ರೀನಿವಾಸ,ಶ್ರೀನಿವಾಸ ಕುಲಕರ್ಣಿ, ಕೆ.ಎಸ್‌‍.ಶಿವಸ್ವಾಮಿ,ಶ್ರೀನಿವಾಸ ರಾವ್‌ ಎನ್‌,ವೆಂಕಟಚಲಪತಿ ಎಂ,ಲೋಕೇಶ್‌ ಹೆಚ್‌.ಡಿ,ಭರತ್‌ಕುಮಾರ್‌ ಎಸ್‌‍ ಹಾಗೂ ಎಸ್‌‍.ಸೋಮಶೇಖರ್‌ ರವರು ಐಜಿಪಿ ಪ್ರಶಂಸನಾ ಪದಕ ಪಡೆಯಲಿದ್ದಾರೆ. ಡಿಜಿಪಿ ಅಲೋಕ್‌ ಮೋಹನ್‌ ಅವರು ನಾಳೆ ನಿವೃತ್ತಿಯಾಗಲಿದ್ದು, ಅಂದು ನಡೆಯುವ ಬೀಳ್ಕೊಡುಗೆ ಪರೇಡ್‌ನಲ್ಲಿ ಪದಕ ಪ್ರದಾನ ನಡೆಯಲಿದೆ.

RELATED ARTICLES

Latest News