Homeರಾಜ್ಯಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಮೆರಿಕಾ ಮಹಿಳೆಯ ಚಿನ್ನಾಭರಣ ಕಳ್ಳತನ

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಮೆರಿಕಾ ಮಹಿಳೆಯ ಚಿನ್ನಾಭರಣ ಕಳ್ಳತನ

American woman's gold jewellery stolen at Bengaluru airport

ಬೆಂಗಳೂರು, ಫೆ.6-ದಿನೇ ದಿನೇ ಚಿನ್ನದ ಬೆಲೆ ಗಗನಕ್ಕೇರುತ್ತಿದ್ದು, ಕಳ್ಳರ ಹಾವಳಿ ಜೋರಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರ ಚಿನ್ನ ಮತ್ತು ವಜ್ರಾಭರಣ ಕಳ್ಳತನವಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಬೆಂಗಳೂರಿನಿಂದ ದುಬೈಗೆ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಬ್ಯಾಗ್‌ನಲ್ಲಿದ್ದ 790 ಗ್ರಾಂ ಚಿನ್ನ ಮತ್ತು 8 ಲಕ್ಷ ರೂ. ಮೌಲ್ಯದ ವಜ್ರಾ ಕಳುವಾಗಿದೆ ಎಂದು ತಿಳಿದು ಬಂದಿದೆ.ಅಮೆರಿಕಾದಲ್ಲಿ ನೆಲೆಸಿರುವ ಮಹಿಳೆ ಆಗಾಗ್ಗೆ ಹುಬ್ಬಳಿಗೆ ಬಂದು ಹೋಗುತ್ತಿದ್ದರು.

ಕಳೆದ ವರ್ಷ ನ.15 ರಂದು ಹುಬ್ಬಳಿಗೆ ಬಂದು ನಂತರ ಅಮೆರಿಕಾಗೆ ಹೋಗಲು ಬೆಂಗಳೂರು ಇಂಟರ್‌ನ್ಯಾಷಿನಲ್‌ ಏರ್‌ಪೋರ್ಟ್‌ಗೆ ಬಂದಿದ್ದು, ಈ ವೇಳೆ ಲೆಗೇಜ್‌ ಬ್ಯಾಗ್‌ನಲ್ಲಿ 790 ಗ್ರಾಂ ತೂಕದ ಚಿನ್ನಾಭರಣ, 8 ಲಕ್ಷ ಮೌಲ್ಯದ ವಜ್ರಾಭರಣ, 20 ಸಾವಿರ ಬೆಲೆ ಬಾಳುವ ಔಷಧಿ,ಯುಎಸ್‌‍ಡಿ 200 ಕ್ಯಾಸ್‌‍ ಇದ್ದುದ್ದು ಚೆಕಿಂಗ್‌ ಮಾಡಿಸಿ, ಟ್ಯಾಗ್‌ ಮಾಡಿಸಿ ಭದ್ರತಾ ಸಿಬ್ಬಂದಿಯವರು ಕ್ಲೀಯರಿಂಗ್‌್ಸ ಮಾಡಿದ ಮೂಲಕ ಅಬುದಾಬಿಗೆ ಪ್ರಯಾಣ ಬೆಳೆಸಿದ್ದಾರೆ.

ವಿಮಾನ ಇಳಿದು ಬ್ಯಾಗನ್ನು ಪರೀಕ್ಷಿಸಿದಾಗ ಕಳುವಾಗಿರುವುದು ಕಂಡು ಬಂದಿದೆ. ಕೂಡಲೇ ಅಬುದಾಬಿ ಏರ್‌ಪೋರ್ಟ್‌ನ ಅಥರಿಟಿಯಲ್ಲಿ ದೂರು ನೀಡಿ ವಿಚಾರಿಸಿದರು.ಆದರೆ ಯಾವುದೇ ಮಾಹಿತಿ ಲಭ್ಯವಾಗಲಿಲ್ಲ. ನಂತರ ಪ್ರಯಾಣ ಮಾಡಿದ ವಿಮಾನದ ಕಸ್ಟಮರ್‌ ಸರ್ವಿಸ್‌‍ನಲ್ಲೂ ವಿಚಾರ ಮಾಡಿದ್ದು, ಕಳುವಾಗಿರುವ ವಸ್ತುಗಳು ಪತ್ತೆ ಮಾಡಿಕೊಟ್ಟಿರಲಿಲ್ಲ.

ಈ ಹಿನ್ನೆಲೆಯಲ್ಲಿ ಜ.7 ರಂದು ಬೆಂಗಳೂರಿಗೆ ವಾಪಸ್‌‍ ಬಂದು ಸಂಬಂಧಿಕರು, ಹಿತೈಷಿಗಳಿಗೆ ವಿಚಾರ ತಿಳಿಸಿದ್ದು, ನಂತರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಿಸಿ ಟಿವಿ ಪರಿಶೀಲಿಸಿ ಕಳುವಾಗಿರುವ ವಸ್ತುಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.

RELATED ARTICLES
spot_img

Latest News