ಚೆನ್ನೈ, ಮೇ 22 (ಪಿಟಿಐ) ಹನ್ನೊಂದು ಭಾರತೀಯ ಮೀನುಗಾರರನ್ನು ಶ್ರೀಲಂಕಾ ಬಿಡುಗಡೆ ಮಾಡಿದೆ. ಶ್ರೀಲಂಕಾದ ಜೈಲಿನಿಂದ ಬಿಡುಗಡೆಯಾದ ಹನ್ನೊಂದು ಭಾರತೀಯ ಮೀನುಗಾರರು ಇಂದು ತಾಯ್ಕಾಡಿಗೆ ಹಿಂತಿರುಗಿದರು.
ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಮೀನುಗಾರರನ್ನು ಸಮುದ್ರ ಉಲ್ಲಂಘನೆ ಆರೋಪದ ಮೇಲೆ ಈ ವರ್ಷದ ಜನವರಿಯಲ್ಲಿ ಶ್ರೀಲಂಕಾ ನೌಕಾಪಡೆ ಬಂಧಿಸಿತ್ತು.
ಶ್ರೀಲಂಕಾದ ನ್ಯಾಯಾಲಯವು ಇತ್ತೀಚೆಗೆ ಅವರನ್ನು ಬಿಡುಗಡೆ ಮಾಡಿತ್ತು.ಅವರು ಇಂದು ಮುಂಜಾನೆ ಕೊಲಂಬೊದಿಂದ ವಿಮಾನದ ಮೂಲಕ ಇಲ್ಲಿಗೆ ಆಗಮಿಸಿ ರಸ್ತೆ ಮೂಲಕ ತಮ್ಮ ಊರಿಗೆ ತೆರಳಿದರು.