ಮುಂಬೈ.- ಜಾಗತಿಕ ಮಟ್ಟದ, ಅತ್ಯುತ್ತಮ ಸುರಕ್ಷತಾ ವಿಧಾನಗಳು ಮತ್ತು ತಂತ್ರಜ್ಞಾನಗಳಿಂದ ಕೂಡಿದ ಟಾಟಾ ಮೋಟಾರ್ಸ್ ನ ಅಲ್ಟ್ರೋಜ್ ಮಧ್ಯಮ ವರ್ಗದ SUV ಕಾರನ್ನು ಎಂದು ಮಾರುಕಟ್ಟೆಗೆ ಪರಿಚಯಿಸಲಾಗಿದೆ.
ಪ್ರಯಾಣ ಸುರಕ್ಷತೆಗೆ ಮೊದಲ ಆದ್ಯತೆ ನೀಡಿ, ಆಧುನಿಕ ತಂತ್ರಜ್ಞಾನಗಳನ್ನ ಅಳವಡಿಸಿ ಭಾರತೀಯ ಮಾರುಕಟ್ಟೆಗೆಂದೆ ವಿಶೇಷವಾಗಿ ತಯಾರಿಸುವಂತಹ ಈ ಪೆಟ್ರೋಲ್ ಡೀಸೆಲ್, ಸಿ ಎನ್ ಜಿ ಮಾದರಿಗಳಲ್ಲಿ ಮಾರುಕಟ್ಟೆಗೆ ಬಂದಿದೆ ಎಂದು ಟಾಟಾ ಮೋಟಾರ್ಸ್ನ ವಿವೇಕ್ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು. 6.89 ಲಕ್ಷದಿಂದ ಪ್ರಾರಂಭವಾಗಿ 11. 29 ಹೊರಗಿನದ್ ಬೆಲೆಯಲ್ಲಿ ಈ ಕಾರುಗಳು ಲಭ್ಯವಿದೆ
ಈಗಾಗಲೇ ತಮ್ಮ ಟಾಟಾ ಎಸ್ ಯು ವಿ ಕಾರುಗಳು ಮಾರಾಟ ಹೊಸ ಮೈಲಿಗಲ್ಲು ಸಾಧಿಸಿದೆ ಇದರಲ್ಲಿ ಟಾಟಾ ಪಂಚ್ ಎರಡು ವರ್ಷದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಗ್ರಾಹಕರು ಖರೀದಿಸಿದ್ದು ಹೊಸ ದಾಖಲೆ ಸೃಷ್ಟಿಸಿದೆ ಎಂದು ಹೇಳಿದರು.
ನಮ್ಮ ವಿನ್ಯಾಸ ಕೇಂದ್ರಗಳು ಪುಣೆ, ಇಟಲಿ, ಯುಕೆ ನಲ್ಲಿದ್ದು, ಇಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಮತ್ತು ಆರಾಮದಾಯಕ ತಂತ್ರಜ್ಞಾನ ಹಾಗೂ ಸಲಕರಣೆಗಳ ಬಳಕೆ ಫೈವ್ ಸ್ಟಾರ್ ರೇಟಿಂಗ್ ಪಡೆದಿದೆ ಎಂದು ಟಾಟಾ ಮೋಟಾರ್ಸ್ನನ ತಿಳಿಸಿದರು.
ವಿದ್ಯುತ್ ಕಾರುಗಳ ಕ್ಷೇತ್ರದಲ್ಲಿ ಕ್ರಾಂತಿ ಸೃಷ್ಟಿಯಾಗುತ್ತಿದ್ದು ಇದರಲ್ಲಿ ನಮ್ಮ ಟಾಟಾ ಕಾರುಗಳು ಗಮನ ಸೆಳೆದಿದೆ. ಬೆಲೆ,ಗುಣಮಟ್ಟ ಮತ್ತು ಜನರ ಭಾವನೆಗಳಾಗಿ ನಾವು ಮುಕ್ತವಾಗಿ, ಸಂಪೂರ್ಣ ತಂಡ ಕೆಲಸ ಮಾಡಿ ಈ ಹೊಸ ಆಲ್ಟ್ರೊಜ್ ಕಾರನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ ಎಂದು ಹೇಳಿದರು
ಕಾರಿನ ವಿಶೇಷತೆಗಳಲ್ಲಿ 360 ಡಿಗ್ರಿ ಹೊರಾಂಗಣ ವೀಕ್ಷಣೆ, 90 ಡಿಗ್ರಿ ಬಾಗಿಲುಗಳ ತೆರೆವಿಕೆ. ವೇಗದ,ಮೊಬೈಲ್ ಚಾರ್ಜಿಂಗ್, ದೊಡ್ಡ led ಪರದೆ, ಆರಾಮದಾಯಕ ಹಾಸನದ ಆಸನಗಳು ಮತ್ತು ಆಕರ್ಷಕ ವಿನ್ಯಾಸ ಎಲ್ಲರ ಗಮನ ಸೆಳೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.