ಚೆನ್ನೈ,ಮೇ22- ತಮಿಳು ನಟ ಜಯಂ ರವಿ ದಂಪತಿ ವಿಚ್ಛೇದನ ಬಯಸಿ ನ್ಯಾಯಾಲಯದ ಮೆಟ್ಟಿಲೇರಿರುವುದು ಗೊತ್ತಿರುವ ಸಂಗತಿಯೇ. ಇದೀಗ ಪತ್ನಿ ಆರತಿ ಅವರು ತಿಂಗಳಿಗೆ ಬರೋಬ್ಬರಿ 40 ಲಕ್ಷ ರೂ. ಜೀವನಾಂಶ ಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ಈಗಾಗಲೇ ಇವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯದಿಂದ ಶೀಘ್ರದಲ್ಲೇ ಡಿವೋರ್ಸ್ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಿರುವಾಗಲೇ ಆರತಿ ಅವರು ತಿಂಗಳಿಗೆ 40 ಲಕ್ಷ ರೂಪಾಯಿ ಜೀವನಾಂಶವನ್ನು ಜಯಂ ರವಿ ಅವರಿಂದ ಕೊಡಿಸಬೇಕೆಂದು ಕೋರಿದ್ದಾರೆ.
ಚೆನ್ನೈನಲ್ಲಿರುವ 3ನೇ ಹೆಚ್ಚುವರಿ ಕುಟುಂಬ ಕಲ್ಯಾಣ ನ್ಯಾಯಾಲಯಕ್ಕೆ ಹಾಜರಾಗಿದ್ದ ಜಯಂ ರವಿ ಹಾಗೂ ಆರತಿ ಅವರ ವಿಚ್ಚೇಧನ ಅರ್ಜಿಯನ್ನು ನ್ಯಾಯಾಧೀಶರಾದ ಥೆನೋಳಿ ವಿಚಾರಣೆ ನಡೆಸಿದ್ದಾರೆ.
ಇನ್ನು ಮತ್ತೆ ಒಂದಾಗಿ ಬಾಳಲು ಒಮತ ಸೂಚಿಸದ ಕಾರಣ ಇಬ್ಬರು ಕೂಡ ಲಿಖಿತ ರೂಪದಲ್ಲಿ ಪ್ರತಿಕ್ರಿಯೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ನಿರ್ದೇಶನ ನೀಡಲಾಗಿದೆ. ಇನ್ನು ಈ ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಜೂನ್ 12ಕ್ಕೆ ಮುಂದೂಡಿಕೆ ಮಾಡಿದೆ.
ವಿಚ್ಚೇಧನ ಅರ್ಜಿ ವಿಚಾರಣೆಯಲ್ಲಿ ಆರತಿ ಅವರು ತನ್ನ ಗಂಡನಿಂದ ತಿಂಗಳು 40 ಲಕ್ಷ ರೂ. ಜೀವನಾಂಶವನ್ನು ಕೇಳಿದ್ದಾರೆ. ಎಂದರೆ ವರ್ಷಕ್ಕೆ 4.8 ಕೋಟಿ ರೂಗಳನ್ನು ಜಯಂ ರವಿ ಅವರು ನೀಡಬೇಕಾಗುತ್ತದೆ ಎನ್ನಲಾಗಿದೆ.
ಗಂಡನಿಂದ ಬೇರೆಯಾಗತ್ತಿರು ವುದರಿಂದ ಕುಟುಂಬ ನಿರ್ವಹಣೆಗಾಗಿ ಹಣ ಬೇಕಾಗುತ್ತದೆ. ಜೊತೆಗೆ ಮಕ್ಕಳು ಕೂಡ ಇದ್ದಾರೆ ಎಂದು ನ್ಯಾಯಾಧೀಶರಲ್ಲಿ ಆರತಿ ಮನವಿ ಮಾಡಿದ್ದಾರೆ ಎಂದು ಹೇಳಲಾಗಿದೆ. ಜಯಂ ರವಿ ಅವರು ಗಾಯಕಿ ಕೆನಿಶಾ ಫ್ರಾನ್ಸಿಸ್ ಜೊತೆ ಡೇಟಿಂಗ್‌ನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.