ಬೆಂಗಳೂರು,ಮೇ 22-ಎದುರಿಗೆ ಸಿಕ್ಕಾಗಲೆಲ್ಲಾ ವಿನಾಕಾರಣ ನಿಂದಿಸುತ್ತಿದ್ದ ಆಟೋಚಾಲಕನನ್ನು ತಳ್ಳಿ ಮತ್ತೊಬ್ಬ ಆಟೋಚಾಲಕ ಕೊಲೆ ಮಾಡಿರುವ ಘಟನೆ ರಾಜಗೋಪಾಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬಸಪ್ಪನ ಕಟ್ಟೆ ನಿವಾಸಿ ರಂಗಸ್ವಾಮಿ (55) ಕೊಲೆಯಾದ ಆಟೋಚಾಲಕ.
ರಂಗಸ್ವಾಮಿ ಹಾಗೂ ಆರೋಪಿ ವಿನಯ್ ವೃತ್ತಿಯಲ್ಲಿ ಆಟೋಚಾಲಕರು. ಇವರಿಬ್ಬರೂ ಒಂದೇ ಏರಿಯಾದವರು.
ವಿನಯ್ ಎದುರಿಗೆ ಸಿಕ್ಕಾಗಲೆಲ್ಲಾ ರಂಗಸ್ವಾಮಿ ವಿನಾಕಾರಣ ಆತನಿಗೆ ಬೈಯುತ್ತಿದ್ದನು.ಮೊನ್ನೆ ರಾತ್ರಿ 9.30 ರ ಸುಮಾರಿನಲ್ಲಿ ರಂಗಸ್ವಾಮಿ ಬಾರ್‌ವೊಂದರಲ್ಲಿ ಕುಡಿದು ಹೊರಗೆ ಬರುತ್ತಿದ್ದಾಗ ಎದುರಿಗೆ ಸಿಕ್ಕಿದ ವಿನಯ್‌ಗೆ ಬೈದಿದ್ದಾನೆ. ಏಕೆ ಸುಮ್ಮನೆ ಬೈಯುತ್ತೀಯಾ ಎಂದು ವಿನಯ್ ಕೇಳಿದಾಗ ಅವರಿಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದಿದೆ.
ಆ ವೇಳೆ ರಂಗಸ್ವಾಮಿಯನ್ನು ವಿನಯ್ ತಳ್ಳಿದ್ದಾನೆ. ಕೆಳಗೆ ಬಿದ್ದ ರಂಗಸ್ವಾಮಿ ತಲೆಗೆ ಗಂಭೀರ ಪೆಟ್ಟಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಲಿಸದೆ ನಿನ್ನೆ ರಾತ್ರಿ ಮೃತಪಟ್ಟಿದ್ದಾರೆ. ಈ ಬಗ್ಗೆ ರಾಜಗೋಪಾಲನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿನಯ್‌ನನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.