Friday, May 23, 2025
Homeರಾಷ್ಟ್ರೀಯ | Nationalಸಿಂಧೂರ ಅಳಿಸಿದವರನ್ನು ಮಣ್ಣಲ್ಲಿ ಮುಚ್ಚಿದ್ದೇವೆ : ಪ್ರಧಾನಿ ಮೋದಿ

ಸಿಂಧೂರ ಅಳಿಸಿದವರನ್ನು ಮಣ್ಣಲ್ಲಿ ಮುಚ್ಚಿದ್ದೇವೆ : ಪ್ರಧಾನಿ ಮೋದಿ

‘OP Sindoor’ turned to barood’ burnt Pakistan: PM Modi roars in Rajasthan

ಬಿಕೆನೇರ್‌,ಮೇ22- ಜಮು ಮತ್ತು ಕಾಶೀರದ ಪಹಲ್ಗಾಮ್‌ನಲ್ಲಿ ನಡೆದ ನರಮೇಧಕ್ಕೆ ಪ್ರತೀಕಾರವಾಗಿ ಭಾರತೀಯ ಸೇನಾ ಪಡೆ ನಡೆಸಿದ ಆಪರೇಷನ್‌ ಸಿಂಧೂರ್‌ ಕಾರ್ಯಾಚರಣೆಯಲ್ಲಿ ಕೇವಲ 22 ನಿಮಿಷದಲ್ಲಿ ಸೇಡು ತೀರಿಸಿಕೊಂಡಿದ್ದೇವೆೆ ಎಂದು ಪ್ರಧಾನಿ ನರೇಂದ್ರಮೋದಿ ಕೊಂಡಾಡಿದ್ದಾರೆ.

ಪಾಕಿಸ್ತಾನ ಹಾಗೂ ಪಿಒಕೆ ಮೇಲೆ ನಡೆದ ಆಪರೇಷನ್‌ ಸಿಂಧೂರ್‌ ನಂತರ ರಾಜಸ್ಥಾನದ ಬಿಕನೇರ್‌ನಲ್ಲಿ ಮಾತನಾಡಿದ ಮೋದಿ ಅವರು, ಏ.22ರ ಪಹಲ್ಗಾಮ್‌ ಭಯೋತ್ಪಾದಕ ದಾಳಿಗೆ ಭಾರತವು 22 ನಿಮಿಷದಲ್ಲೇ ಸೇಡು ತೀರಿಸಿಕೊಂಡಿದೆ. ಇದು ನಮ ಸೇನಾ ಪಡೆಯ ತಾಕತ್ತು ಎಂದು ಬಣ್ಣಿಸಿದರು.

ಏ.22ರ ದಾಳಿಗೆ ಪ್ರತಿಯಾಗಿ ನಾವು ಭಯೋತ್ಪಾದಕರ 9 ಅಡಗುತಾಣಗಳನ್ನು 22 ನಿಮಿಷದಲ್ಲಿ ನಾಶಪಡಿಸಿದೆವು. ಸಿಂಧೂರವು ಪುಡಿಯಾಗಿ ಬದಲಾದರೆ ಏನಾಗುತ್ತದೆ ಎಂಬುದಕ್ಕೆ ವಿಶ್ವಕ್ಕೆ ಮತ್ತು ನಮ ಶತ್ರುಗಳಿಗೆ ತೋರಿಸಿದ್ದೇವೆ ಎಂದು ಸೇನಾಪಡೆಯ ಕಾರ್ಯಾಚರಣೆ ಬಗ್ಗೆ ಕೊಂಡಾಡಿದರು.

ನನ್ನ ರಕ್ತನಾಳಗಳಲ್ಲಿ ಕುದಿಯುತ್ತಿರುವುದು ರಕ್ತವಲ್ಲ. ಅದು ಸಿಂಧೂರ ಎಂದು ಮೋದಿ ಹೇಳುತ್ತಿದ್ದಂತೆ ಜನಸ್ತೋಮದಿಂದ ಮೋದಿ.. ಮೋದಿ.. ಎಂಬ ಜೈಕಾರದ ಘೋಷಣೆಗಳು ಮೊಳಗಿದವು.

ಏ.22ರಂದು ನಮ ಸಹೋದರಿಯರ ಧರ್ಮವನ್ನು ಕೇಳಿ ಭಯೋತ್ಪಾದಕರು ಅಮಾನುಷವಾಗಿ ಪ್ರವಾಸಿಗರನ್ನು ಕೊಂದು ಹಾಕಿದರು. ಅವರ ಹಣೆಯಲ್ಲಿದ್ದ ಸಿಂಧೂರವನ್ನು ಅಳಿಸಿ ಹಾಕಿದ್ದಕ್ಕೆ 140 ಕೋಟಿ ಭಾರತೀಯರು ಕಣ್ಣೀರು ಹಾಕಿದರು. ನಾವು ಅದೇ ಸಿಂಧೂರದ ಮೂಲಕವೇ ಭಯೋತ್ಪಾದಕರಿಗೆ ಮುಟ್ಟಿ ನೋಡಿಕೊಳ್ಳುವಂತೆ ಮಾಡಿದ್ದೇವೆ. ಭಾರತದ ತಂಟೆಗೆ ಬರುವ ಮುನ್ನ ನೂರು ಬಾರಿ ಯೋಚಿಸಿ ಎಂದು ಪಾಕ್‌ಗೆ ಎಚ್ಚರಿಕೆ ಕೊಟ್ಟರು.

ವಾಯುಸೇನೆ, ನೌಕಾಸೇನೆ ಮತ್ತು ಭೂಸೇನೆಗಳಿಗೆ ನಾವು ಮುಕ್ತ ಸ್ವಾತಂತ್ರ್ಯ ನೀಡಿದ್ದೇವೆ. ಸಿಂಧೂರವನ್ನು ಅಳಿಸಿ ಹಾಕಿದ ಪಾತಕಿಗಳನ್ನು ನೆಲದಲ್ಲೇ ಹೂತುಹಾಕಿ ಎಂದು ಹೇಳಿದ್ದೆವು. ಅದರಂತೆ ಸಶಸ್ತ್ರ ಪಡೆಗಳು ಅದೇ ಕೆಲಸವನ್ನು ಮಾಡಿವೆ ಎಂದು ಪ್ರಸಂಶಿಸಿದರು.

ಸಿಂಧೂರವನ್ನು ಅಳಿಸಲು ಹೊರಟವರಿಗೆ ಸೇನಾಪಡೆ ತಕ್ಕ ಶಾಸ್ತಿ ಮಾಡಿದೆ. ಭಾರತದಲ್ಲಿ ರಕ್ತ ಚೆಲ್ಲುವವರ ಆಟ ಮುಗಿದಿದೆ. ಭಾರತವು ನಮ ಆಟವನ್ನು ನೋಡಿ ಮೌನವಾಗಿರುತ್ತದೆ ಎಂದುಕೊಂಡವರಿಗೆ ಮುಟ್ಟಿ ನೋಡಿಕೊಳ್ಳುವ ಹಾಗೆ ಪಾಠ ಕಲಿಸಿದ್ದೇವೆ. ಇದು ನಮ ಸೇನಾಪಡೆಯ ತಾಕತ್ತು. ಇಡೀ ವಿಶ್ವವೇ ಆಪರೇಷನ್‌ ಸಿಂಧೂರವನ್ನು ಕೊಂಡಾಡುತ್ತಿದೆ ಎಂದರು.

ಭಾರತವು ಎಲ್ಲದಕ್ಕೂ ಮೌನವಾಗಿರುತ್ತದೆ ಎಂದವರಿಗೆ ಉತ್ತರ ಕೊಟ್ಟಿದ್ದೇವೆ. ತಮ ಶಸಾ್ತ್ರಸ್ತ್ರಗ ಬಗ್ಗೆಯ ಹೆಮೆ ಪಡೆದುತ್ತಿದ್ದವರು ಇಂದು ಅದರ ಅವಶೇಷಗಳಲ್ಲೇ ಹೂತುಹೋಗಿದ್ದಾರೆ. ಜನದಲ್ಲೂ ಅವರು ನಮ ಕಡೆ ಬರಲು ಹಲವು ಬಾರಿ ಯೋಚಿಸುವಂತಾಗಿದೆ.

ನಾವು ಯಾವುದೇ ರಾಷ್ಟ್ರದ ಪರಮಾಣುಗಳಿಗೆ ಹೆದರುವುದಿಲ್ಲ. ಹಾಗಂತ ಪರಿಸ್ಥಿತಿ ಕೈ ಮೀರಿದರೆ ಸುಮನೆ ಕೂರುವುದಿಲ್ಲ. ಕ್ರಿಯೆಗೆ ಪ್ರತಿಕ್ರಿಯೆ ಇರುತ್ತದೆ ಎಂದು ಮೋದಿಯವರು ಪರೋಕ್ಷವಾಗಿ ಶತ್ರು ರಾಷ್ಟ್ರಕ್ಕೆ ಎಚ್ಚರಿಕೆ ಕೊಟ್ಟರು.

RELATED ARTICLES

Latest News