Friday, June 6, 2025
Homeಇದೀಗ ಬಂದ ಸುದ್ದಿಕಾಶ್ಮೀರದಲ್ಲಿ ಮತ್ತಿಬ್ಬರು ಉಗ್ರರು ಫಿನಿಷ್

ಕಾಶ್ಮೀರದಲ್ಲಿ ಮತ್ತಿಬ್ಬರು ಉಗ್ರರು ಫಿನಿಷ್

Two more terrorists killed in Kashmir

ಶ್ರೀನಗರ,ಮೇ22- ಕಣಿವೆ ರಾಜ್ಯ ಜಮು ಮತ್ತು ಕಾಶ್ಮೀರದ ಸಿಂಗ್‌ಪೋರಾ ಚತ್ರೂದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಭಯೋತ್ಪಾದಕರನ್ನು ಭಾರತೀಯ ಸೇನಾ ಪಡೆ ಹೊಡೆದುರುಳಿಸಿದೆ. ಈ ಪ್ರದೇಶದಲ್ಲಿ ಇನ್ನೂ ಕೆಲವು ಉಗ್ರರು ಅಡಗಿರಬಹುದೆಂಬ ಶಂಕೆಯ ಹಿನ್ನೆಲೆಯಲ್ಲಿ ಶೋಧ ಕಾರ್ಯವನ್ನು ಮೂಂದುವರೆಸಲಾಗಿದೆ.

ಕಿಶಾ್ತ್ವರ್‌ ಜಿಲ್ಲೆಯ ಚತ್ರೂವಿನ ಸಿಂಗ್‌ಪೋರಾ ಪ್ರದೇಶದಲ್ಲಿ ಭದ್ರತಾ ಪಡೆ ಮತ್ತು ಭಯೋತ್ಪಾದಕರ ನಡುವೆ ನಡೆದ ಎನ್‌ಕೌಂಟರ್‌ ವೇಳೆ ಇಬ್ಬರನ್ನು ಹತ್ಯೆಗೈಯ್ಯುವಲ್ಲಿ ಸೇನಾ ಪಡೆ ಯಶಸ್ವಿಯಾಗಿದೆ.

ಆಪರೇಷನ್‌ ಟ್ರಾಶಿ ಎಂಬ ಹೆಸರನಡಿ ಹೊಂದಿರುವ ಈ ಜಂಟಿ ಕಾರ್ಯಾಚರಣೆಯಲ್ಲಿ ಭಯೋತ್ಪಾದಕರನ್ನು ತಟಸ್ಥಗೊಳಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಸೇನೆಯ ವೈಟ್‌ ನೈಟ್‌ ಕಾರ್ಪ್ಸ್ ಎಕ್ಸ್ ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಸಿಂಗ್‌ಪೋರಾ ಚಟ್ರುದಲ್ಲಿ ಎರಡು ಪ್ಯಾರಾ ಎಸ್‌‍ಎಫ್‌, ಸೇನೆಯ 11 ಆರ್‌ಆರ್‌, 7 ನೇ ಅಸ್ಸಾಂ ರೈಫಲ್‌್ಸ ಮತ್ತು ಎಸ್‌‍ಒಜಿ ಕಿಶಾ್ತ್ವರ್‌ ಪಡೆಗಳು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ನಂತರ ಬೆಳಿಗ್ಗೆ 7 ಗಂಟೆ ಸುಮಾರಿಗೆ ಎನ್‌ಕೌಂಟರ್‌ ಪ್ರಾರಂಭವಾಯಿತು., ಭದ್ರತಾ ಪಡೆಗಳು ಈ ಪ್ರದೇಶದಲ್ಲಿ ಮೂರರಿಂದ ನಾಲ್ಕು ಭಯೋತ್ಪಾದಕರ ಗುಂಪನ್ನು ಹಿಡಿದಿಟ್ಟುಕೊಂಡಿವೆ ಎಂದು ಹೇಳಲಾಗಿದ್ದು, ಅವರಲ್ಲಿ ಇಬ್ಬರು ಈಗ ಸಾವನ್ನಪ್ಪಿದ್ದಾರೆ.

ಒಂದು ವಾರದ ಹಿಂದೆ ಜಮು ಮತ್ತು ಕಾಶೀರದ ಪುಲ್ವಾಮಾ ಜಿಲ್ಲೆಯ ಟ್ರಾಲ್‌ ಪ್ರದೇಶದ ನಾದಿರ್‌ ಗ್ರಾಮದಲ್ಲಿ ಪ್ರತ್ಯೇಕ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ಮೂವರು ಜೈಶ್‌-ಎ-ಮೊಹಮದ್‌ ಭಯೋತ್ಪಾದಕರನ್ನು ನಿರ್ನಾಮ ಮಾಡಿದ ನಂತರ ಭದ್ರತಾ ಪಡೆಗಳ ಜಂಟಿ ತಂಡವು ಇಂದಿನ ಕಾರ್ಯಾಚರಣೆಯನ್ನು ನಡೆಸಿದೆ.

ಎನ್‌ಕೌಂಟರ್‌ನಲ್ಲಿ ಹತರಾದ ಮೂವರು ಭಯೋತ್ಪಾದಕರನ್ನು ಆಸಿಫ್‌ ಅಹದ್‌ ಶೇಖ್‌, ಅಮೀರ್‌ ನಜೀರ್‌ ವಾನಿ ಮತ್ತು ಯಾವರ್‌ ಅಹದ್‌ ಭಟ್‌ ಎಂದು ಗುರುತಿಸಲಾಗಿದ್ದು, ಎಲ್ಲರೂ ಜಮು ಮತ್ತು ಕಾಶೀರದ ಪುಲ್ವಾಮಾ ಜಿಲ್ಲೆಯ ನಿವಾಸಿಗಳು.

ಏತನಧ್ಯೆ, ಕಳೆದ ವಾರ ಮಂಗಳವಾರ ಶೋಪಿಯಾನ್‌ನ ಕೆಲ್ಲರ್‌ ಪ್ರದೇಶದಲ್ಲಿ ಮತ್ತು ಗುರುವಾರ ಪುಲ್ವಾಮಾದ ಟ್ರಾಲ್‌ನ ನಾಡರ್‌ ಪ್ರದೇಶದಲ್ಲಿ ಎನ್‌ಕೌಂಟರ್‌ಗಳು ನಡೆದಿವೆ. ಏಪ್ರಿಲ್‌ 22ರಂದು 26 ನಾಗರಿಕರ ಜೀವವನ್ನು ಬಲಿ ಪಡೆದ ಪಹಲ್ಗಾಮ್‌ ಭಯೋತ್ಪಾದಕ ದಾಳಿಯ ನಂತರ ದಕ್ಷಿಣ ಕಾಶೀರದ ಕೆಲವು ಭಾಗಗಳಲ್ಲಿ ಭದ್ರತಾ ಪ್ರಯತ್ನಗಳನ್ನು ಹೆಚ್ಚಿಸಿದ ಮಧ್ಯೆ ಈ ಕಾರ್ಯಾಚರಣೆಗಳು ನಡೆಯುತ್ತಿವೆ.

RELATED ARTICLES

Latest News