ಮುಂಬೈ,ಮೇ.23 – ಎಂಬಿಬಿಎಸ್ ವಿದ್ಯಾರ್ಥಿನಿಯ ಮೇಲೆ ಆಕೆಯ ಇಬ್ಬರು ಸಹಪಾಠಿಗಳು ಮತ್ತು ಅವರ ಸ್ನೇಹಿತ ಅತ್ಯಾಚಾರ ಎಸಗಿರು ಘಟನೆ ಸಾಂಗ್ಲಿ ಜಿಲ್ಲೆಯಲ್ಲಿ ನಡೆದಿದೆ. ಪುಣೆ, ಸೋಲಾಪುರ ಮತ್ತು ಸಾಂಗ್ಲಿಯ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ನ್ಯಾಯಾಲಯವು ಅವರನ್ನು ಮೇ 27 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಸಿದ್ದಾರೆ. 22 ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ಕಳೆದ ಮೇ 18 ರಂದು ರಾತ್ರಿ 10 ಗಂಟೆ ಸುಮಾರಿಗೆ ಚಿತ್ರಮಂದಿರದಲ್ಲಿ ಸಿನಿಮಾ ನೋಡಲು ಹೋಗಲು ಮುಂದಾಗಿದ್ದರು ಈ ವೇಲೆ ಆರೋಪಿ ಆಕೆಯನು ಫ್ಲಾಟ್ ಗೆ ಕರೆದೊಯ್ದದ್ದರು.
ಆರೋಪಿಗಳು ಮದ್ಯ ಸೇವಿಸಿ ಆಕೆಗೆ ಮದ್ಯ ಕುಡಿಸಿದಾಗ ನಂತರ ನಶೆಯಿಂದ ಕುಸಿದು ಬಿದ್ದಿದ್ದಾಳೆ ಈ ವೇಳೆ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ. ನಂತರ 20 ರಿಂದ 22 ವರ್ಷ ವಯಸ್ಸಿನ ಮೂವರು ಆಕೆಗೆ ಯಾರಿಗಾದರು ಹೇಳಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ.
ಕರ್ನಾಟಕದ ಬೆಳಗಾವಿ ಮೂಲದ ಸಂತ್ರಸ್ತೆ ನಂತರ ತನ್ನ ಪೋಷಕರಿಗೆ ಘಟನೆಯನ್ನು ವಿವರಿಸಿದರು. ನಂತರ ಅವರು ವಿಶ್ರಂಬಾಗ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.