Saturday, May 24, 2025
Homeರಾಷ್ಟ್ರೀಯ | Nationalದೆಹಲಿ : ಕಾರ್ಖಾನೆಯಲ್ಲಿ ಸ್ಪೋಟ, ಬಹುಮಹಡಿ ಕಟ್ಟಡ ಕುಸಿತ

ದೆಹಲಿ : ಕಾರ್ಖಾನೆಯಲ್ಲಿ ಸ್ಪೋಟ, ಬಹುಮಹಡಿ ಕಟ್ಟಡ ಕುಸಿತ

Building Collapses After Fire At Factory Triggers Blast In Delhi

ನವದೆಹಲಿ, ಮೇ.24-ಇಲ್ಲಿನ ದೆಹಲಿಯ ಬವಾನಾ ಕೈಗಾರಿಕಾ ಪ್ರದೇಶದ ಕಾರ್ಖಾನೆಯೊಂದರಲ್ಲಿ ಇಂದು ಮುಂಜಾನೆ ಭಾರಿ ಬೆಂಕಿ ಕಾಣಿಸಿಕೊಂಡು ಒಳಗಿದ್ದ ವಸ್ತುಗಳು ಸ್ಫೋಟ ಸಂಭವಿಸಿ ಕಟ್ಟಡ ಕುಸಿದಿದೆ.

ಪ್ಲಾಸ್ಟಿಕ್ ಬಾಟಲಿಗಳನ್ನು ತಯಾರಿಸುವ ಕಾರ್ಖಾನೆಯಲ್ಲಿ ಮುಂಜಾನೆ 4.40 ಕ್ಕೆ ಬೆಂಕಿ ಕಾಣಿಸಿಕೊಂಡಿದೆ. ನಂತರ 17 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದಾವಿಸಿ ಬೆಂಕಿ ನಂದಿಸಿದೆ ಎಂದು ಡಿಎಫ್‌ಎಸ್ ಮುಖ್ಯಸ್ಥ ಅತುಲ್ ಗರ್ಗ್ ಹೇಳಿದ್ದಾರೆ.

ಸ್ಫೋಟದ ನಂತರ ಕುಸಿದ ಬಹುಮಹಡಿ ಕಟ್ಟಡದಿಂದ ದಟ್ಟವಾದ ಕಪ್ಪುಹೊಗೆ ಇಡೀ ಪ್ರದೇಶ ಆವರಿಸಿದೆ ಇಲ್ಲಿಯವರೆಗೆ ಯಾವುದೇ ಗಾಯಗಳು ಅಥವಾ ಸಾವು ನೋವುಗಳು ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯಿಂದ ಪ್ರದೇಶಗಳಲ್ಲಿನ ನಿವಾಸಿಗಳನ್ನು ಬೆಚ್ಚಿಬೀಳಿಸಿದೆ, ಹಲವಾರು ಸ್ಥಳೀಯರು ತಮ್ಮ ಮನೆಗಳಿಂದ ಹೊರಗೆ ಓಡಿಬಂದ ನೋಡಿದಾಗ ಮತ್ತಷ್ಟು ಸ್ಫೋಟಗಳು ಸಂಭವಿಸುವ ಭಯ ಆವರಿಸಿತ್ತು.

ಸುತ್ತಲೂ ಭಗ್ನಾವಶೇಷಗಳು ಹರಡಿಕೊಂಡಿದ್ದರಿಂದ ರಕ್ಷಣಾ ಮತ್ತು ನಿಯಂತ್ರಣ ಕಾರ್ಯಾಚರಣೆಗಳು ಕಷ್ಟಕರವಾಗಿದ್ದವು ಎಂದು ಅವರು ಪೊಲೀಸರು ತಿಳಿಸಿದ್ದಾರೆ. ಬೆಂಕಿ ಮತ್ತು ನಂತರದ ಸ್ತೋಟಕ್ಕೆ ಕಾರಣವೇನು ಎಂಬುದನ್ನು ಕಂಡುಹಿಡಿಯಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.

RELATED ARTICLES

Latest News