Saturday, May 24, 2025
Homeಅಂತಾರಾಷ್ಟ್ರೀಯ | Internationalಆ್ಯಪಲ್ ಕಂಪನಿ ಭಾರತಕ್ಕೆ ಹೋದರೆ ಅಮೇರಿಕಾದಲ್ಲಿ ಸುಂಕ ನೀಡಬೇಕು : ಟ್ರಂಪ್ ಬೆದರಿಕೆ

ಆ್ಯಪಲ್ ಕಂಪನಿ ಭಾರತಕ್ಕೆ ಹೋದರೆ ಅಮೇರಿಕಾದಲ್ಲಿ ಸುಂಕ ನೀಡಬೇಕು : ಟ್ರಂಪ್ ಬೆದರಿಕೆ

Trump threatens 25% tariff on Apple and Samsung phones not made in US

ನ್ಯೂಯಾರ್ಕ್/ವಾಷಿಂಗ್ಟನ್,ಮೇ 24- ಆ್ಯಪಲ್ ಕಂಪನಿ ತನ್ನ ತಯಾರಿಕಾ ಘಟಕಗಳನ್ನು ತೆರೆಯಲು ಭಾರತಕ್ಕೆ ಹೋಗಲು ಅಭ್ಯಂತರವಿಲ್ಲ. ಆದರೆ ಅದು ತನ್ನ ಉತ್ಪನ್ನಗಳನ್ನು ಅಮೆರಿಕದಲ್ಲಿ ಸುಂಕವಿಲ್ಲದೆ ಮಾರಾಟ ಮಾಡುವಂತಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಾಕೀತು ಮಾಡಿದ್ದಾರೆ.

ಓವಲ್‌ ಕಚೇರಿಯಲ್ಲಿ ಅಮೆರಿಕದ ಪರಮಾಣು ಶಕ್ತಿಯನ್ನು ವರ್ಧಿಸುವ ಸಲುವಾಗಿ ವಿವಿಧ ಕಾರ್ಯಾದೇಶಗಳಿಗೆ ಸಹಿ ಮಾಡುವಾಗ ಟ್ರಂಪ್ ಈ ಮಾತುಗಳನ್ನಾಡಿದ್ದಾರೆ. ಆದರೆ ಟಿಮ್ (ಕುಕ್) ಈ ಕೆಲಸ ಮಾಡಲಾರರು ಎಂದು ನಾನು ಭಾವಿಸಿದ್ದೇನೆ. ಅವರು ತಯಾರಿಕಾ ಘಟಕಗಳನ್ನು ಸ್ಥಾಪಿಸಲು ಭಾರತಕ್ಕೆ ಹೋಗುವುದಾಗಿ ಹೇಳಿದರು.

ಆಗ ನಾನು ನೀವು ಭಾರತಕ್ಕೆ ತೆರಳಲು ಅಡ್ಡಿ ಇಲ್ಲ. ಆದರೆ ನಿಮ್ಮ ಉತ್ಪನ್ನಗಳನ್ನು ಅಮೆರಿಕದಲ್ಲಿ ಸುಂಕ ಪಾವತಿಸದೆ ಮಾರುವಂತಿಲ್ಲ ಎಂದು ಹೇಳಿದೆ ಎಂದು ಟ್ರಂಪ್ ತಿಳಿಸಿದ್ದಾರೆ.

ನಾನು ಐಫೋನ್‌ಗಳ ಬಗ್ಗೆ ಮಾತನಾಡುತ್ತಿದ್ದೇನೆ. ಅವರು ಅವುಗಳನ್ನು ಅಮೆರಿಕದಲ್ಲಿ ಮಾರುವುದಾದರೆ ಅವು ಅಮೆರಿಕದಲ್ಲೇ ತಯಾರಾಗಿರಬೇಕು ಎಂದು ಟ್ರಂಪ್ ನುಡಿದಿದ್ದಾರೆ. ತಮ್ಮ ಈ ಸೂಚನೆ ಪಾಲಿಸದಿದ್ದರೆ ಅವರು ಆ್ಯಪಲ್ ಕಂಪನಿಯ ಉತ್ಪನ್ನಗಳಿಗೆ ಶೇ.25 ರಷ್ಟು ಸುಂಕ ವಿಧಿಸುವುದಾಗಿ ಬೆದರಿಕೆ ಹಾಕಿದ್ದಾರೆ.

RELATED ARTICLES

Latest News