ಬೆಂಗಳೂರು,ಮೇ 24– ಕೊಡಿಗೇಹಳ್ಳಿ ಫ್ಲೈಓವರ್ ಮೇಲೆ ಇಂದು ಮುಂಜಾನೆ ಮೂರು ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿದ ಪರಿಣಾಮ ಕಸದ ಲಾರಿ ಚಾಲಕ ಮೃತಪಟ್ಟಿರುವ ಘಟನೆ ಹೆಬ್ಬಾಳ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬಿಹಾರ ಮೂಲದ ಬಿಬಿಎಂಪಿ ಕಸದ ಲಾರಿ ಚಾಲಕ ೈಜಾನ್ ಅಹದ್ (25) ಮೃತಪಟ್ಟವರು. ಸರಣಿ ಅಪಘಾತದಲ್ಲಿ ಗಾಯಗೊಂಡಿರುವ ಕ್ಲಿನರ್ ಮರ್ಘೂಬ್ ರೇಜಾ (23) ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಹಾಗೂ ಲಾರಿ ಚಾಲಕ ಹರೀಶ್ (36) ಯಲಹಂಕ ಕೆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಿಬಿ ರಸ್ತೆಯ ಕೊಡಿಗೇಹಳ್ಳಿ ್ಲೖೆಓವರ್ ಮೇಲೆ ಬ್ರಿಗೇಡ್ ಮ್ಯಾಗ್ನಮ್ ಹತ್ತಿರ ಬಿಬಿಎಂಪಿ ಕಸದ ಲಾರಿಯೊಂದು ಮುಂಜಾನೆ ಕೆಟ್ಟು ನಿಂತಿದ್ದರಿಂದ ಚಾಲಕ ಫೈಜಾನ್ ಅಹದ್ ಹಾಗೂ ಕ್ಲಿನರ್ ಮರ್ಘೂಬ್ ರೇಜಾ ಎಂಬುವವರು ರಿಪೇರಿ ಮಾಡುತ್ತಿದ್ದರು.
ಇದೇ ಮಾರ್ಗವಾಗಿ ಇಂದು ಮುಂಜಾನೆ 1.40 ರ ಸುಮಾರಿನಲ್ಲಿ ಕ್ವಾರೇ ಕಲ್ಲನ್ನು ತುಂಬಿದ್ದ ಬಾರೀ ಲಾರಿಯೊಂದು ಹೋಗುತ್ತಿದ್ದಾಗ ಚಾಲಕನ ಅತೀ ವೇಗ ಹಾಗೂ ಅಜಾಗರೂಕತೆಯಿಂದಾಗಿ ಲಾರಿ ನಿಯಂತ್ರಣ ತಪ್ಪಿ ರಸ್ತೆಯ ಬಲ ಭಾಗದಲ್ಲಿ ಕೆಟ್ಟು ನಿಂತಿದ್ದ ಬಿಬಿಎಂಪಿ ಕಸದ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದು ರಸ್ತೆಯ ಎಡಕ್ಕೆ ಚಲಿಸಿ ಹಿಂದೆ ಬರುತ್ತಿದ್ದ ಎರಟಿಗಾ ಕಾರಿಗೆ ಡಿಕ್ಕಿ ಹೊಡೆದು ್ಲೖೆಓವರ್ ತಡೆ ಗೋಡೆಗೆ ಅಪ್ಪಳಿಸಿ ನಿಂತಿದೆ.
ಎರಟಿಗಾ ಕಾರಿನಲ್ಲಿ ಏರ್‌ಪೋರ್ಟ್‌ನಿಂದ ಪ್ರಯಾಣಿಕರನ್ನು ಕರೆದುಕೊಂಡು ಕಾರು ಚಾಲಕ ಸರ್ಜಾಪುರಕ್ಕೆ ಇದೇ ್ಲೖೆಓವರ್ ಮೇಲೆ ಹೋಗುತ್ತಿದ್ದಾಗ ಈ ಸರಣಿ ಅಪಘಾತ ನಡೆದಿದೆ.
ಅಪಘಾತದಿಂದಾಗಿ ಬಿಬಿಎಂಪಿ ಕಸದ ಲಾರಿಯು ಪಲ್ಟಿಯಾಗಿ ಚಾಲಕ ಅವರ ತಲೆಗೆ ಗಂಭೀರ ಪೆಟ್ಟಾಗಿದೆ. ನಂತರ ಸಾರ್ವಜನಿಕರ ಸಹಾಯದಿಂದ ಆಂಬ್ಯುಲೇನ್‌್ಸನಲ್ಲಿಆತನನ್ನು ಚಿಕಿತ್ಸೆಗಾಗಿ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ಪರೀಕ್ಷಿಸಿ ಮಾರ್ಗಮಧ್ಯೆಯೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ಜಖಂ ಗೊಂಡಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಸುದ್ದಿ ತಿಳಿದು ಹೆಬ್ಬಾಳ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಮುಂಜಾನೆಯೇ ಫ್ಲೈಓವರ್ ಮೇಲೆ ಅಪಘಾತದಿಂದ ಜಖಂಗೊಂಡಿದ್ದಂತಹ ವಾಹನಗಳನ್ನು ತೆರವುಗೊಳಿಸಿದ್ದರಿಂದ ಇಂದು ಬೆಳಗ್ಗೆ ಈ ಮಾರ್ಗದಲ್ಲಿ ಎಂದಿನಂತೆ ವಾಹನಗಳು ಸಂಚರಿಸುತ್ತಿರುವುದು ಕಂಡು ಬಂದಿತು.
ಲಾರಿಯ ಡಿಕ್ಕಿಯ ರಭಸಕ್ಕೆ ಬೃಹತ್ ಗಾತ್ರದ ಕ್ವಾರೇ ಕಲ್ಲುಗಳು ರಸ್ತೆಗೆ ಉರುಳಿವೆ. ಈ ದೃಶ್ಯ ನೋಡಿದರೆ ಮೈ ಜುಂ ಎನ್ನುತ್ತದೆ. ಒಂದು ವೇಳೆ ಈ ಅಪಘಾತ ಬೆಳಗ್ಗೆ ಏನಾದರೂ ಸಂಭವಿಸಿದ್ದರೇ ಭಾರಿ ಪ್ರಮಾಣದಲ್ಲಿ ಸಾವು ನೋವುಗಳಾಗುತ್ತಿದ್ದವು. ಕಲ್ಲು ತುಂಬಿದ್ದ ಲಾರಿ ಚಾಲಕನ ಅತೀ ವೇಗ ಹಾಗೂ ಅಜಾಗರೂಕತೆ ಚಾಲನೆಯಿಂದಾಗಿ ಈ ಅಪಘಾತ ಸಂಭವಿಸಿರುವುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.