ಬೆಂಗಳೂರು,ಮೇ 24- ಪರಪ್ಪನ ಅಗ್ರಹಾರ ಕಾರಾಗೃಹದ ಮೇಲೆ ಪೊಲೀಸರು ದಾಳಿ ಮಾಡಿ ಸತತ ಮೂರು ಗಂಟೆಗಳಿಗೂ ಹೆಚ್ಚು ಕಾಲ ಪರಿಶೀಲನೆ ನಡೆಸಿದ್ದಾರೆ.ದಾಳಿ ಸಂದರ್ಭದಲ್ಲಿ ಕೆಲವು ಬ್ಯಾರಕ್‌ಗಳಲ್ಲಿ, 1 ಮೊಬೈಲ್,ಚಾರ್ಜರ್, ಎಲೆಕ್ಟ್ರಿಕ್ ಸ್ಟೌವ್ ಹಾಗೂ 16 ಸಾವಿರ ಹಣ ಪತ್ತೆಯಾಗಿದ್ದುಘಿ, ಅವುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಬಗ್ಗೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎ್‌ಐಆರ್ ದಾಖಲಾಗಿದ್ದು, ಈ ವಸ್ತುಗಳು ಹೇಗೆ ಕಾರಾಗೃಹದೊಳಗೆ ಬಂದವು,ಯಾರು ತಂದುಕೊಟ್ಟಿದ್ದಾರೆ ಎಂಬಿತ್ಯಾದಿ ಮಾಹಿತಿಗಳನ್ನು ಪೊಲೀಸರು ಕಲೆಹಾಕುತ್ತಿದ್ದಾರೆ.
ನಿನ್ನೆ ಬೆಳಗ್ಗೆ 7 ರಿಂದ 10 ಗಂಟೆವರೆಗೂ ಕಾರಾಗೃಹದೊಳಗೆ ಪರಿಶೀಲನೆ ನಡೆಸಲಾಗಿದೆ. ಈ ದಾಳಿಯಲ್ಲಿ ಒಬ್ಬರು ಡಿಸಿಪಿ,ಒಬ್ಬರು ಎಸಿಪಿ, ಐದು ಮಂದಿ ಇನ್‌್ಸಪೆಕ್ಟರ್‌ಗಳು ಸೇರಿದಂತೆ ಒಟ್ಟು 175 ಸಿಬ್ಬಂದಿ ಪಾಲ್ಗೊಂಡಿದ್ದರು.ಕಾರಾಗೃಹದಲ್ಲಿ ಮೊಬೈಲ್ ಬಳಕೆ ಸೇರಿದಂತೆ ವಿವಿಧ ಚಟುವಟಿಗಳು ನಡೆಯುತ್ತಿವೆ ಎಂಬ ದೂರಿನ ಆಧಾರದ ಮೇಲೆ ಈ ದಾಳಿ ನಡೆದಿದೆ.