Thursday, May 29, 2025
Homeಅಂತಾರಾಷ್ಟ್ರೀಯ | Internationalಪಾಕ್‌ ಸೇನಾ ಮುಖ್ಯಸ್ಥ ಒಬ್ಬ ಜೋಕರ್‌ : ಓವೈಸಿ

ಪಾಕ್‌ ಸೇನಾ ಮುಖ್ಯಸ್ಥ ಒಬ್ಬ ಜೋಕರ್‌ : ಓವೈಸಿ

‘Joker’: Owaisi slams Shahid Afridi for pointing fingers at Indian Army over Pahalgam attack

ಕುವೈತ್‌,ಮೇ27- ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್‌ ಮುನೀರ್‌ ಅವರನ್ನು ಒಬ್ಬ ಜೋಕರ್‌ ( ವಿದೂಷಕ ) ಎಂದು ಸಂಸದ ಅಸಾದುದ್ದೀನ್‌ ಓವೈಸಿ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದು, ಸರಿಯಾಗಿ ನಕಲನ್ನೇ ಮಾಡಲು ಬಾರದಿರುವವರು ಭಾರತದ ಜೊತೆ ಸ್ಪರ್ಧೆಗಿಳಿಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಕುವೈತ್‌ನಲ್ಲಿರುವ ಭಾರತೀಯ ವಲಸಿಗರೊಂದಿಗೆ ನಡೆದ ಸಂವಾದದದಲ್ಲಿ, ಅಸಾದುದ್ದೀನ್‌ ಓವೈಸಿ ಅವರು ಪಾಕಿಸ್ತಾನದ ನಕಲಿ ಅಜೆಂಡಾಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಪಾಕಿಸ್ತಾನದ ಭೂಸೇನಾ ಮುಖ್ಯಸ್ಥ ಜನರಲ್‌ ಅಸೀಮ್‌ ಮುನೀರ್‌ ಅವರು, ಪಾಕಿಸ್ತಾನ ಪ್ರಧಾನಮಂತ್ರಿ ಶೆಹಬಾಜ್‌ ಷರೀಫ್‌ ಅವರಿಗೆ, ಆಪರೇಷನ್‌ ಬನ್ಯಾನ್‌ ನಕಲಿ ಫೋಟೋ ಉಡುಗೊರೆ ನೀಡಿದ ಪ್ರಸಂಗವನ್ನು ಅಸಾದುದ್ದೀನ್‌ ಓವೈಸಿ ವ್ಯಂಗ್ಯವಾಡಿದರು.

ಪಾಕಿಸ್ತಾನಿ ಸೇನಾ ಮುಖ್ಯಸ್ಥರು ಪಾಕಿಸ್ತಾನಿ ಪ್ರಧಾನಿ ಶೆಹಬಾಜ್‌ ಷರೀಫ್‌ ಅವರಿಗೆ ಒಂದು ಫೋಟೋವನ್ನು ಉಡುಗೊರೆಯಾಗಿ ನೀಡಿದ್ದಾರೆ.ಈ ಮೂರ್ಖ ಜೋಕರ್‌ಗಳು ಭಾರತದೊಂದಿಗೆ ಸ್ಪರ್ಧಿಸಲು ಬಯಸುತ್ತಾರೆ, ಅವರು 2019ರ ಚೀನಾದ ಸೇನಾ ಕವಾಯತಿನ ಛಾಯಾಚಿತ್ರವನ್ನು ನೀಡಿ ಅದು ಭಾರತದ ವಿರುದ್ಧದ ವಿಜಯ ಎಂದು ಹೇಳಿಕೊಂಡಿದ್ದಾರೆ. ಅವರಿಗೆ ಸರಿಯಾದ ಛಾಯಾಚಿತ್ರವನ್ನು ಸಹ ನೀಡಲು ಸಾಧ್ಯವಿಲ್ಲ. ನಕಲ್‌ ಕರ್ನೆ ಕೆ ಲಿಯೇ ಅಕಲ್‌ ಚಾಹಿಯೇ, ಇಂಕೆ ಪಾಸ್‌‍ ಅಕಲ್‌ ಭೀ ನಹೀ ಹೈ ( ಇದು ನಕಲಿಸಲು ಮಿದುಳುಗಳನ್ನು ತೆಗೆದುಕೊಳ್ಳುತ್ತದೆ, ಮತ್ತು ಅವರು ಅದನ್ನು ಹೊಂದಿಲ್ಲ) ಎಂದು ಕುಹಕವಾಡಿದರು.

ಡಿಸೆಂಬರ್‌ 2023ರಲ್ಲಿ ಭಾರತವು ವಿಶ್ವಸಂಸ್ಥೆಯ ನಿರ್ಬಂಧ ಸಮಿತಿಗೆ, ದಿ ರೆಸಿಸ್ಟನ್‌್ಸ ಫೋರ್ಸ್‌ (ಟಿಆರ್‌ಎಫ್‌) ಲಷ್ಕರ್‌-ಎ-ತೋಯ್ಬಾ (ಎಲ್‌ಇಟಿ) ಯ ಅಂಗಸಂಸ್ಥೆ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದೇವು. ಮೇ 2024ರಲ್ಲಿ ಈ ಸಂಘಟನೆ ಭಾರತದ ಮೇಲೆ ದಾಳಿ ಮಾಡಬಹುದಾದ ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಎಂದು ಸ್ಪಷ್ಟಪಡಿಸಿದ್ದೇವು. ಆದರೆ ಭದ್ರತಾ ಮಂಡಳಿಯ ಹೇಳಿಕೆಯಲ್ಲಿ ಟಿಆರೆಫ್‌ ಹೆಸರಿನ ಉಲ್ಲೇಖವಿರದಂತೆ ಪಾಕಿಸ್ತಾನ ಪ್ರಯತ್ನಪಟ್ಟಿತು ಎಂದು ಎಐಎಂಐಎಂ ಸಂಸದ ಗುಡುಗಿದರು.

ಮುಂದುವರೆದು, ಪಹಲ್ಗಾಮ್‌ ದಾಳಿಯ ಹೊಣೆ ಹೊತ್ತುಕೊಂಡಿರುವ ಟಿಆರ್‌ಎಫ್‌, 4 ಹೇಳಿಕೆಗಳನ್ನು ಬಿಡುಗಡೆ ಮಾಡಿದೆ. ಪಾಕಿಸ್ತಾನಿ ಕಂಟೋನೆಂಟ್‌ ಪ್ರದೇಶದ ಬಳಿಯೇ, ಟಿಆರ್‌ಎಫ್‌ ಸಭೆ ನಡೆಸಿರುವುದನ್ನು ನಮ ಗುಪ್ತಚರ ಸಂಸ್ಥೆಗಳು ಖಚಿತಪಡಿಸಿವೆ. ಇದು ಪಹಲ್ಗಾಮ್‌ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನದ ಸ್ಪಷ್ಟ ಒಳಗೊಳ್ಳುವಿಕೆಯನ್ನು ತೋರಿಸುತ್ತದೆ ಎಂದು ಅಸಾದುದ್ದೀನ್‌ ಓವೈಸಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಹೋಲಿಕೆ ಬೇಡ:
ಇನ್ನು ಪಾಕಿಸ್ತಾನವು ಭಾರತೀಯ ಮುಸ್ಲಿಮರ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಂದು ಹೇಳಿರುವ ಅಸಾದುದ್ದೀನ್‌ ಓವೈಸಿ, ಭಾರತೀಯ ಮುಸ್ಲಿಮರೊಂದಿಗೆ ಪಾಕಿಸ್ತಾನ ತನ್ನನ್ನು ಹೋಲಿಕೆ ಮಾಡಿಕೊಂಡರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಭಾರತೀಯ ಮುಸ್ಲಿಮರು ಪಾಕಿಸ್ತಾನದವರಿಗಿಂತ ಹೆಚ್ಚು ಪ್ರಾಮಾಣಿಕರು ಎಂದು ಎಐಎಂಐಎಂ ಸಂಸದರು ನೆರೆ ರಾಷ್ಟ್ರಕ್ಕೆ ಸೂಕ್ತ ತಿರುಗೇಟು ನೀಡಿದರು.

ಓವೈಸಿ ಅವರ ಹೇಳಿಕೆಗೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಅವರು ಅನುಮೋದನೆ ನೀಡಿದ್ದಾರೆ . ಕನಿಷ್ಠ ಪಕ್ಷ ಅಸಾದುದ್ದೀನ್‌ ಓವೈಸಿ ಅತ್ಯಂತ ನಿರ್ಣಾಯಕ ಸಮಯದಲ್ಲಿ ನಿಜವಾದ ಭಾರತೀಯನಾಗಿ ಮಾತನಾಡುತ್ತಿದ್ದಾರೆ, ಎಂದು ರಿಜಿಜು ಎಕ್‌್ಸ ನಲ್ಲಿ ಪೋಸ್ಟ್‌ ಮಾಡಿದ್ದಾರೆ.

RELATED ARTICLES

Latest News