Thursday, May 29, 2025
Homeಅಂತಾರಾಷ್ಟ್ರೀಯ | Internationalಭಾರತದೊಂದಿಗೆ ಮಾತುಕತೆಗೆ ಸಿದ್ಧ : ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್‌

ಭಾರತದೊಂದಿಗೆ ಮಾತುಕತೆಗೆ ಸಿದ್ಧ : ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್‌

Want to resolve all disputes: In Iran, Pak PM says ready to hold talks with India

ಟೆಹರಾನ್‌,ಮೇ 27- ಕಾಶೀರ, ಭಯೋತ್ಪಾದನೆ, ನೀರು ಹಂಚಿಕೆ ಮತ್ತು ವ್ಯಾಪಾರ ಸೇರಿದಂತೆ ಎರಡು ನೆರೆಯ ರಾಷ್ಟ್ರಗಳ ನಡುವಿನ ಎಲ್ಲಾ ಬಾಕಿ ಇರುವ ಸಮಸ್ಯೆಗಳನ್ನು ಪರಿಹರಿಸಲು ಭಾರತದೊಂದಿಗೆ ಮಾತುಕತೆ ನಡೆಸಲು ಪಾಕಿಸ್ತಾನ ಸಿದ್ಧವಿದೆ ಎಂಬ ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್‌ ಅಚ್ವರಿಯ ಹೇಳಿಕೆ ನೀಡಿದ್ದಾರೆ.

ಟರ್ಕಿಯ ನಂತರ ಷರೀಫ್‌ ಈಗ ಎರಡು ದಿನಗಳ ಭೇಟಿಗಾಗಿ ಇರಾನ್‌ಗೆ ಆಗಮಿಸಿರುವ ವೇಳೆ ಟೆಹರಾನ್‌ನಲ್ಲಿ ಮಾತನಾಡಿದ ಅವರು, ಕಾಶೀರ ಸಮಸ್ಯೆ, ಭಯೋತ್ಪಾದನೆ, ನೀರು ಹಂಚಿಕೆ ಮತ್ತು ವ್ಯಾಪಾರ ಸೇರಿದಂತೆ ಎರಡು ನೆರೆಯ ರಾಷ್ಟ್ರಗಳ ನಡುವಿನ ಎಲ್ಲಾ ಬಾಕಿ ಇರುವ ಸಮಸ್ಯೆಗಳನ್ನ ಮಾತುಕತೆ ಮೂಲಕ ಇತ್ಯರ್ಥಪಡಿಸಿಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಕಾಶೀರ ಸಮಸ್ಯೆ ಮತ್ತು ನೀರಿನ ಸಮಸ್ಯೆ ಸೇರಿದಂತೆ ಎಲ್ಲಾ ವಿವಾದಗಳನ್ನು ಮಾತುಕತೆಗಳ ಮೂಲಕ ಪರಿಹರಿಸಲು ನಾವು ಬಯಸುತ್ತೇವೆ. ವ್ಯಾಪಾರ ಮತ್ತು ಭಯೋತ್ಪಾದನೆ ನಿಗ್ರಹದ ಬಗ್ಗೆ ನಮ ನೆರೆಹೊರೆಯವರೊಂದಿಗೆ ಮಾತನಾಡಲು ಸಹ ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.
ಆಪರೇಷನ್‌ ಸಿಂದೂರದ ಮೂಲಕ ನಡೆಸಿದ ಮಿಲಿಟರಿ ದಾಳಿ ಬಳಿಕ ಪಾಕಿಸ್ತಾನ ಬೆಚ್ಚಿ ಬಿದ್ದಿದೆ. ಪ್ರಧಾನಿ ಮೋದಿ ಪಾಕಿಸ್ತಾನದೊಂದಿಗಿನ ಯಾವುದೇ ಮಾತುಕತೆ ಸಾಧ್ಯವಿಲ್ಲ ಎಂದು ಹೇಳಿದ್ದರು. ಪಾಕ್‌ ಆಕ್ರಮಿತ ಕಾಶೀರ ನಮಗೆ ಮರಳಿಸುವವರೆಗೂ ನಾವು ಯಾವುದೇ ರೀತಿಯಲ್ಲಿಯೂ ಸಂಧಾನಕ್ಕೆ ಬರುವುದಿಲ್ಲ ಎಂದು ಸರ್ಕಾರ ಹೇಳಿತ್ತು.

ಭಯೋತ್ಪಾದನೆ ಮತ್ತು ಮಾತುಕತೆ ಒಂದೇ ಸಮಯದಲ್ಲಿ ನಡೆಯಲು ಸಾಧ್ಯವಿಲ್ಲ. ಭಯೋತ್ಪಾದನೆ ಮತ್ತು ವ್ಯಾಪಾರ ನಡೆಯಲು ಸಾಧ್ಯವಿಲ್ಲ. ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ. ಭಾರತ ಮತ್ತು ಪಾಕಿಸ್ತಾನದ ನಡುವೆ ಮಾತುಕತೆ ನಡೆದರೆ, ಅದು ಭಯೋತ್ಪಾದನೆ ಮತ್ತು ಪಿಒಕೆ ಬಗ್ಗೆ ಮಾತ್ರ ಎಂದು ನಾನು ಅಂತರರಾಷ್ಟ್ರೀಯ ಸಮುದಾಯಕ್ಕೆ ಹೇಳಲು ಬಯಸುತ್ತೇನೆ ಎಂದು ಮೋದಿ ಹೇಳಿದ್ದರು.

ಇದೀಗ ಪಾಕಿಸ್ತಾನ ಪ್ರಧಾನಿ ಇರಾನ್‌ ಅಧ್ಯಕ್ಷ ಮಸೌದ್‌ ಪೆಜೆಶ್ಕಿಯಾನ್‌ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುವಾಗ ಭಾರತದ ಜೊತೆಗೆ ಮಾತುಕತೆಗೆ ತಯಾರಿದೆ ಎಂದು ಹೇಳಿದ್ದಾರೆ. ನಾವು ಶಾಂತಿಯನ್ನು ಬಯಸುತ್ತೇವೆ ಎಂದು ಅವರು ಹೇಳಿದ್ದಾರೆ.

RELATED ARTICLES

Latest News