ಬೆಂಗಳೂರು,ಸೆ.27- ಆಂತರಿಕ ಭದ್ರತೆ, ಸಂಶೋಧನೆ ಹಾಗೂ ನಾವಿನ್ಯ ಸವಾಲುಗಳನ್ನು ಎದುರಿಸಲು ಪೂರಕವಾಗಿ ಬೆಂಗಳೂರಿನಲ್ಲಿ ಸೈಬರ್ ಸ್ಪೇರ್ ಸೆಂಟರ್ ಆಫ್ ಎಕ್ಸಲೆನ್ಸಿ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ನಗರದಲ್ಲಿಂದು ಟೆಕ್ ಪ್ಯೂಶನ್ ಸನ್ ರೈಸ್ ಸಮ್ಮಿಟ್ 2023 ಅಂಗವಾಗಿ ಐಟಿ ಸಂಸ್ಥೆಗಳ ಜೊತೆ ಸಂವಾದ ನಡೆಸಿದ ಅವರು, ಆಧುನಿಕ ತಂತ್ರಜ್ಞಾನದಲ್ಲಿ ಎದುರಾಗುತ್ತಿರುವ ಸೈಬರ್ ಸವಾಲುಗಳನ್ನು ನಿಭಾಯಿಸಲು ಗೃಹ ಇಲಾಖೆ ಮತ್ತು ಮಾಹಿತಿ ತಂತ್ರಜ್ಞಾನ ಕಂಪನಿಗಳ ಸಹಭಾಗಿತ್ವದಲ್ಲಿ ಬೆಂಗಳೂರು ಸೈಬರ್ ಸ್ಪೇರ್ ಜೇಷ್ಠತಾ ಕೇಂದ್ರ ಸ್ಥಾಪಿಸಲಾಗುತ್ತಿದೆ ಎಂದು ಹೇಳಿದರು.
ನಮ್ಮ ಬಳಿ ಇರುವ ಜ್ಞಾನ ಹಾಗೂ ಐಟಿಬಿಟಿ ಕಂಪನಿಗಳ ತಂತ್ರಜ್ಞಾನ ಬಳಸಿಕೊಂಡು ಖಾಸಗಿ ಸಹಭಾಗಿತ್ವದಲ್ಲಿ ಸೈಬರ್ ಅಪರಾಧಗಳನ್ನು ತಡೆಯಲು ಹಾಗೂ ಪತ್ತೆ ಹಚ್ಚಲು ಸಾಧ್ಯವಾಗಲಿದೆ. ಈಗಾಗಲೇ ಠಾಣೆಗಳಲ್ಲಿ ಎಫ್‍ಐಆರ್ ದಾಖಲು ಸೇರಿದಂತೆ ಅನೇಕ ತಂತ್ರಜ್ಞಾನವನ್ನು ಬಳಸುತ್ತಿದ್ದೇವೆ, ಜೇಷ್ಠತಾ ಕೇಂದ್ರದಿಂದ ಮುಂದಿನ 5 ವರ್ಷಗಳಲ್ಲಿ ಇಲಾಖೆಯ ಎಲ್ಲಾ ಸಿಬ್ಬಂದಿಗಳಿಗೂ ಅಗತ್ಯ ತರಬೇತಿ ಕೊಡಿಸುವುದಾಗಿ ಹೇಳಿದರು.
ಸಂವಾದದಲ್ಲಿ ಸುಮಾರು 50ಕ್ಕೂ ಹೆಚ್ಚು ಐಟಿಬಿಟಿ ಕಂಪೆನಿಗಳು ಭಾಗವಹಿಸಿದ್ದವು. ಎಲ್ಲರ ಸಲಹೆ, ಸೂಚನೆಗಳನ್ನು ಪಡೆಯಲಾಗಿದೆ. ಟ್ರಾಫಿಕ್ ಸಮಸ್ಯೆ, ಭದ್ರತೆ ಕುರಿತಂತೆ ಸ್ಥಳೀಯ ಮಟ್ಟದಲ್ಲಿ ಸಭೆಗಳನ್ನು ನಡೆಸಲಾಗುವುದು.
ಆತಂಕ ಸೃಷ್ಟಿಸಿದ ಬೆಂಗಳೂರು ವಿಮಾನ ನಿಲ್ದಾಣದ ಬಳಿ ಡ್ರೋಣ್ ಹಾರಾಟ
ಸೈಬರ್ ಸಂಶೋಧನಾ ಪ್ರಯೋಗಾಲಯ ಸ್ಥಾಪನೆ, ಕಾನೂನು ಜಾರಿ ಮತ್ತು ಸಾರ್ವಜನಿಕ ಸುರಕ್ಷತೆಗಾಗಿ ಕೊನೆ ಹಂತಕ್ಕೆ ತಂತ್ರಜ್ಞಾನದ ಸೌಲಭ್ಯ ಕಲ್ಪಿಸುವುದು, ಜ್ಞಾನದ ವಿನಿಮಯ, ಕೌಶಲ್ಯಾಭಿವೃದ್ಧಿ, ಸಮುದಾಯದ ಸಹಭಾಗಿತ್ವ, ಸೈಬರ್ ಸುರಕ್ಷತೆಗೆ ತಾಂತ್ರಿಕ ಸಂಶೋಧನೆ, ಸಾಮಾಜಿಕ ಜಾಲತಾಣಗಳ ಮೇಲೆ ನಿಗಾವಣೆ ಸೇರಿದಂತೆ ಅನೇಕ ಉದ್ದೇಶಗಳಿಗೆ ಈ ಕೇಂದ್ರ ನೆರವು ನೀಡಲಿದೆ ಎಂದರು.
ಖಾಸಗಿ ಕಂಪನಿಗಳು ತಮ್ಮ ಸಂಪನ್ಮೂಲ ವ್ಯಕ್ತಿಗಳನ್ನು ಇಲಾಖೆಯ ಜೊತೆ ಕೈ ಜೋಡಿಸಲು ಕಳುಹಿಸಿಕೊಡಬೇಕು, ಇದರಿಂದ ಅತ್ಯಾಧುನಿಕವಾದ ಅಪರಾಧಗಳು ಮತ್ತು ಅವುಗಳ ಬೆಳವಣಿಗೆಗಳ ಮೇಲೆ ಕಣ್ಣಿಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಭಾರತದ ಆರ್ಥಿಕತೆಗೆ ಬೆಂಗಳೂರು ತಂತ್ರಜ್ಞಾನ ಕ್ಷೇತ್ರ ಶೇ.34 ರಷ್ಟು ಪಾಲು ನೀಡಿದೆ. ವಿಶ್ವದ ಅತ್ಯಂತ ವೇಗದ ಬೆಳವಣಿಗೆಯ ನಗರಗಳಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನವಿದೆ. ಇದಕ್ಕೆ ಐಟಿಬಿಟಿ ಕ್ಷೇತ್ರದ ಕೊಡುಗೆ ಅಪಾರ ಎಂದು ಶ್ಲಾಘಿಸಿದರು.
ಕಾಂಗ್ರೆಸ್ ಬಂದ ಮೇಲೆ ಏನೇನೆಲ್ಲಾ ಹೋಯ್ತು ಎಂಬುದನ್ನು ಪಟ್ಟಿ ಮಾಡಿದ ಬಿಜೆಪಿ
ಭಾರತವು ವಿಶ್ವದ 3 ನೇ ಆರ್ಥಿಕ ಶಕ್ತಿಯಾಗಲು ಮುನ್ನುಗ್ಗುತ್ತಿದೆ. ಇದಕ್ಕೆ ಪೂರಕವಾಗಿ ಬೆಟರ್ ಬೆಂಗಳೂರು, ಬೆಟರ್ ಕರ್ನಾಟಕ, ಬೆಟರ್ ಇಂಡಿಯಾ ಎಂಬ ಧ್ಯೇಯದೊಂದಿಗೆ ಕೆಲಸ ಮಾಡಬೇಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ಉದ್ಯಮಿ ಸ್ನೇಹಿಯಾಗಿದ್ದು, ವಿಶ್ವದ ಉದ್ಯಮಿಗಳನ್ನು ಆಕರ್ಷಿಸಲು ಬಂಡವಾಳ ಹೂಡಿಕೆ ಸಮಾವೇಶಗಳನ್ನು ನಡೆಸುತ್ತಿದ್ದೇವೆ. ಬೆಂಗಳೂರು ಸೇರಿದಂತೆ ಮಂಗಳೂರು, ಬೆಳಗಾಂ, ಹುಬ್ಬಳ್ಳಿ, ಧಾರವಾಡ, ಮೈಸೂರು ಕಡೆಗಳಲ್ಲಿ ಉದ್ಯಮಿಗಳನ್ನು ಹೂಡಿಕೆ ಮಾಡುವಂತೆ ಬೆಂಬಲಿಸಲಾಗುತ್ತಿದೆ ಎಂದರು.
ಭಾರತದ ಅಭಿವೃದ್ಧಿಗೆ ಮಹಿಳೆಯರ ಪಾತ್ರ ಅತ್ಯಂತ ಪ್ರಾಮುಖ್ಯವಾದುದು. ಮಹಿಳೆಯರನ್ನು ಸ್ವಾವಲಂಬಿಗೊಳಿಸಲು ನಮ್ಮ ಸರ್ಕಾರ ಗ್ರಾಮೀಣ ಭಾಗದ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂ.ಗಳ ಯೋಜನೆಯನ್ನು ಜಾರಿಗೊಳಿಸಿದೆ. ರಾಜ್ಯಸರ್ಕಾರದ ಪಂಚಖಾತ್ರಿಗಳ ಮೂಲಕ ಪ್ರತಿ ಕುಟುಂಬಕ್ಕೆ ವಾರ್ಷಿಕ 24 ಸಾವಿರ ರೂ.ಗಳಿಗೂ ಅಕ ನೆರವು ದೊರೆಯುತ್ತಿದೆ ಎಂದು ಹೇಳಿದರು.