Wednesday, July 2, 2025
Homeರಾಜ್ಯRCB ಸಂಭ್ರಮಾಚರಣೆ ದುರಂತ ಸರ್ಕಾರಿ ಪ್ರಾಯೋಜಿತ ಹತ್ಯಾಕಾಂಡ : ಆರ್‌.ಅಶೋಕ್‌

RCB ಸಂಭ್ರಮಾಚರಣೆ ದುರಂತ ಸರ್ಕಾರಿ ಪ್ರಾಯೋಜಿತ ಹತ್ಯಾಕಾಂಡ : ಆರ್‌.ಅಶೋಕ್‌

RCB Celebration tragedy, government-sponsored massacre: R. Ashok

ಬೆಂಗಳೂರು, ಜೂ. 5- ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿದ ದುರಂತದಲ್ಲಿ 11 ಮಂದಿ ಕ್ರೀಡಾಭಿಮಾನಿಗಳು ಮೃತಪಟ್ಟಿದ್ದು, ಇದು ಸರ್ಕಾರದ ಪ್ರಾಯೋಜಿಕ ಅಮಾಯಕರ ಹತ್ಯಾಕಂಡ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಕಿಡಿಕಾರಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐಪಿಎಲ್‌ ಕಪ್‌ ನಮದು ಸರಿ. ಆದರೆ ತಪ್ಪು ಯಾರದೆಂದು ಜನ ಕೇಳುತ್ತಿದ್ದಾರೆ. ಕೂಗಳತೆ ಅಂತರದಲ್ಲೇ ಎರಡು ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಏಕೆ ಎಂದು ಪ್ರಶ್ನಿಸಿದರು.

ಕಾರ್ಯಕ್ರಮ ನಡೆಸುವುದು ಐಪಿಎಲ್‌ ಅಧ್ಯಕ್ಷರೇ ಗೊತ್ತಿಲ್ಲ ಎಂದಿದ್ದಾರೆ. ಸರ್ಕಾರ ಕೇಳಿದ್ದಕ್ಕೆ ಕ್ರೀಡಾಂಗಣ ನೀಡಿದ್ದೇವೆ ಎಂದಿ ಕೆಎಸ್‌‍ಸಿಎ ಹೇಳಿದೆ. ಆರ್‌ಸಿಬಿ ಅವರು ಎರಡು ಕಿ.ಮೀ ಮೆರವಣಿಗೆ ನಡೆಸಲು ಅನುಮತಿ ಕೇಳಿದ್ದರು. ಆದರೆ ಅವರನ್ನು ವಿಧಾನಸೌಧಕ್ಕೆ ವಿಧಾನಸೌಧಕ್ಕೆ ಯಾರು ಕರೆದುಕೊಂಡು ಬಂದಿದ್ದು ಯಾರು? ಎಂದು ಅವರು ತರಾಟೆಗೆ ತೆಗೆದುಕೊಂಡರು.

ಮಂಗಳವಾರ ರಾತ್ರಿ ಕ್ರಿಕೆಟ್‌ ಪಂದ್ಯ ಮುಗಿದರೂ ಬುಧವಾರ ಬೆಳಗಿನ ಜಾವ 3 ಗಂಟೆಯವರೆಗು ಪೊಲೀಸರು ನಿದ್ದೆ ಇಲ್ಲದೆ ಕೆಲಸ ಮಾಡಿದ್ದಾರೆ. ರಾಜ್ಯಸರ್ಕಾರಕ್ಕೆ ಕನಿಷ್ಠ ಜ್ಞಾನವೇ ಇಲ್ಲ ಅದೇ ಪೊಲೀಸರನ್ನು ಬಂದೋಬಸ್ತಿಗೆ ನಿಯೋಜಿಸಿದರೆ ಹೇಗೆ ಎಂದು ಪ್ರಶ್ನಿಸಿದರು.

ಕಾರ್ಯಕ್ರಮಕ್ಕೆ ಭದ್ರತೆ ಒದಗಿಸಲು ಪೊಲೀಸರು ನಿರಾಕರಿಸಿದರು. ಬಲತ್ಕಾರದಿಂದ ಅವರ ಮೇಲೆ ಒತ್ತಡತಂದು ಕಾರ್ಯಕ್ರಮ ಮಾಡಿದ್ದಾರೆ.ಹೈಕೋಟ್‌ ವಿಧಾನಸೌಧದ ಸುತ್ತಮುತ್ತ ನಿಷೇಧಿತ ಪ್ರದೇಶವಿದ್ದರೂ ಡ್ರೋಣ್‌ ಬಳಕೆ ಮಾಡಲಾಗಿದೆ.ಹೈಕೋರ್ಟ್‌ ಕೂಡ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.

ಇಷ್ಟಾದರೂ ಇಷ್ಟೊಂದು ಜನ ಸೇರುತ್ತಾರೆ ಎಂದು ನಿರೀಕ್ಷಿಸಿರಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆಂದು ಅಶೋಕ್‌ ವಾಗ್ದಾಳಿ ನಡೆಸಿದರು.ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ಐಪಿಎಲ್‌ ಗೆದ್ದ ಖುಷಿಯಲ್ಲಿ ಸಂಭ್ರಮಿಸಬೇಕಾಗಿದ್ದ ರಾಜ್ಯದಲ್ಲಿ ಶೋಕಾಚರಣೆ ಮಾಡುವ ಪರಿಸ್ಥಿತಿ ಎದುರಾಗಿದೆ. ಕ್ರೀಡಾಂಗಣದ ಬಳಿ 11 ಮಂದಿ ಅಮಾಯಕರು ಕಾಲ್ತುಳಿತದಲ್ಲಿ ಮೃತಪಟ್ಟಿದ್ದಾರೆ. ಇದರ ಹೊಣೆಯನ್ನು ಸರ್ಕಾರ ಹೊತ್ತಿಲ್ಲ ಈ ದುರಂತದ ಹೊಣೆಯನ್ನು ಯಾರು ಹೊರೆಯಬೇಕೆಂದು ಪ್ರೆಶ್ನಿಸಿದರು.

ಐಪಿಎಲ್‌ ಅಂತಿಮ ಪಂದ್ಯಾವಳಿ ನಡೆದ ಅಹಮದಾಬಾದ್‌ನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಸೇರಿದ್ದರೂ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಆದರೆ ಬೆಂಗಳೂರಿನಲ್ಲಿ ನಡೆದ ಕಾರ್ಯ ಕ್ರಮ ತಲೆ ತಗ್ಗಿಸುವಂತದ್ದು ಎಂದರು.

ಐಪಿಎಲ್‌ ವಿಜೇತ ತಂಡವನ್ನು ಸನಾನಿಸಲು ಸರ್ಕಾರಿ ತರಾತುರಿ ಮಾಡುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದ ಅವರು ಸಾವು ನೋವು ಸಂಭವಿಸುವುದು ಗೊತ್ತಿದ್ದರೂ ಉಪಮುಖ್ಯಮಂತ್ರಿಗಳೂ ಕಪ್‌ಗೆ ಮುತ್ತು ಕೊಟ್ಟಿದ್ದಾರೆ. ಈ ದುರಂತ ಸರ್ಕಾರದ ವೈಫಲ್ಯವಾಗಿದ್ದು ನ್ಯಾಯಾಂಗ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.

RELATED ARTICLES

Latest News