Saturday, June 7, 2025
Homeರಾಷ್ಟ್ರೀಯ | Nationalಸತತ ಮೂರನೇ ಬಾರಿ ರೆಪೋ ದರ ಕಡಿತ

ಸತತ ಮೂರನೇ ಬಾರಿ ರೆಪೋ ದರ ಕಡಿತ

Repo rate cut for the third time in a row

ನವದೆಹಲಿ,ಜೂ. 6– ಆರ್‌ಬಿಐ ಸತತ ಮೂರನೇ ಬಾರಿ ರೆಪೋ ದರ ಕಡಿತಗೊಳಿಸಿದೆ. ನಿರೀಕ್ಷೆಯಂತೆ ಈ ಬಾರಿ ಬಡ್ಡಿದರವನ್ನು 50 ಮೂಲಾಂಕಗಳಷ್ಟು ಇಳಿಕೆ ಮಾಡಿದೆ. ಇದರೊಂದಿಗೆ ಶೇ. 6ರಷ್ಟಿರುವ ಬಡ್ಡಿದರ ಈಗ ಶೇ. 5.50ಕ್ಕೆ ಇಳಿಕೆಯಾಗಿದೆ ಎಂದು ಆರ್‌ಬಿಐ ಗವರ್ನರ್‌ ಸಂಜಯ್‌ ಮಲ್ಹೋತ್ರಾ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದ್ದಾರೆ.

ಎಂಪಿಸಿ ಸಭೆಯ ನಿರ್ಧಾರದಂತೆ ರೆಪೋ ದರವನ್ನು ಸತತ ಮೂರನೇ ಬಾರಿ ಇಳಿಕೆ ಮಾಡಲಾಗಿದೆ. ಈ ವರ್ಷದ ಆರಂಭದಲ್ಲಿ ರೆಪೋ ದರ ಶೇ. 6.50ರಷ್ಟಿತ್ತು. ಆರು ತಿಂಗಳ ಅವಧಿಯಲ್ಲಿ ಶೇ. 1ರಷ್ಟು ದರ ಇಳಿದಂತಾಗಿದೆ ಎಂದು ಅವರು ಹೇಳಿದರು.

ಈ ಹೊಸ ದರವು ತತ್‌ಕ್ಷಣದಿಂದಲೇ ಜಾರಿಗೆ ಬರಲಿದೆ. ಬಡ್ಡಿದರ ಇಳಿಸಲು ಇದು ಪ್ರಮುಖ ಕಾರಣವಾಗಿದೆ ಎಂದು ಆರ್‌ಬಿಐ ಗವರ್ನರ್‌ ಸಂಜಯ್‌ ಮಲ್ಹೋತ್ರಾ ಸ್ಪಷ್ಟಪಡಿಸಿದರು. ಹಣದುಬ್ಬರ ನಿಯಂತ್ರಣದಲ್ಲಿರುವುದರಿಂದ ಆರ್‌ಬಿಐಗೆ ಈ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಿದೆ. ಜಾಗತಿಕ ಅನಿಶ್ಚಿತ ವಾತಾವರಣದಿಂದ ಹಿನ್ನಡೆಯಲ್ಲಿರುವ ಆರ್ಥಿಕತೆಗೆ ರೆಪೋ ದರ ಇಳಿಕೆಯು ಪುಷ್ಟಿ ಕೊಡುವ ನಿರೀಕ್ಷೆ ಇದೆ.

ಆರ್‌ಬಿಐ ಹಣಕಾಸು ನಿಲುವು ನ್ಯೂಟ್ರಲ್‌ಗೆ ಬದಲಾವಣೆ ಮತ್ತೊಂದು ಪ್ರಮುಖ ನಿರ್ಧಾರದಲ್ಲಿ ಆರ್‌ಬಿಐ ತನ್ನ ಮಾನಿಟರಿ ಪಾಲಿಸಿ ಸ್ಟ್ಯಾನ್‌್ಸ ಅಥವಾ ಹಣಕಾಸು ನೀತಿ ನಿಲುವನ್ನು ಬದಲಾಯಿಸಿದೆ. ಅಕಾಮೊಡೇಟಿವ್‌ ಎಂದಿದ್ದ ನಿಲುವನ್ನು ನ್ಯೂಟ್ರಲ್‌ಗೆ ಬದಲಾಯಿಸಲಾಗಿದೆ. ಕಳೆದ ಬಾರಿಯ ಎಂಪಿಸಿ ಸಭೆಯಲ್ಲಿ ನೀತಿ ನಿಲುವನ್ನು ನ್ಯೂಟ್ರಲ್‌ನಿಂದ ಅಕಾಮೊಡೇಟಿವ್‌ಗೆ ಬದಲಾಯಿಸಲಾಗಿತ್ತು. ಈಗ ವಾಪಸ್‌‍ ನ್ಯೂಟ್ರಲ್‌ ನಿಲುವಿಗೆ ಬರಲಾಗಿದೆ.

ಹಾಗೆಯೇ, ಕ್ಯಾಷ್‌ ರಿಸರ್ವ್‌ ರೇಶಿಯೋವನ್ನು 100 ಮೂಲಾಂಕಗಳಷ್ಟು ಇಳಿಕೆ ಮಾಡಲಾಗಿದೆ. ಇದರೊಂದಿಗೆ ಬ್ಯಾಂಕಿಂಗ್‌ ವ್ಯವಸ್ಥೆಗೆ 2.5 ಲಕ್ಷ ಕೋಟಿ ರೂ ಮೊತ್ತದ ಹಣದ ಹರಿವು ಆಗಲು ಸಾಧ್ಯವಾಗಲಿದೆ. ಇದರಿಂದ ಭಾರತದ ಆರ್ಥಿಕತೆ ಈ ವರ್ಷ (2025-26) ಶೇ. 6.5ರಷ್ಟು ಹೆಚ್ಚಬಹುದು ಹಾಗೆಯೇ, ಹಣದುಬ್ಬರವು ಈ ವರ್ಷ ಶೇ. 3.7ರಷ್ಟು ಇರುವ ಸಾಧ್ಯತೆ ಇದೆ ಎಂದು ಅವರು ಮಾಹಿತಿ ನೀಡಿದ್ದಾರೆ.

RELATED ARTICLES

Latest News