Saturday, June 7, 2025
Homeರಾಷ್ಟ್ರೀಯ | National'ಕೆಟ್ಟ ತಾಯಿ ಇರುವುದಿಲ್ಲ' ಎಂಬುದನ್ನು ಸುಳ್ಳಾಗಿಸಿದ ಉತ್ತರಾಖಂಡದ ಮಹಿಳೆ

‘ಕೆಟ್ಟ ತಾಯಿ ಇರುವುದಿಲ್ಲ’ ಎಂಬುದನ್ನು ಸುಳ್ಳಾಗಿಸಿದ ಉತ್ತರಾಖಂಡದ ಮಹಿಳೆ

Mother, lover held in horrific gang-rape of minor daughter in Uttarakhand

ಡೆಹ್ರಾಡೂನ್‌, ಜೂ 6- ಪ್ರಪಂಚದಲ್ಲಿ ಕೆಟ್ಟ ಮಕ್ಕಳಿರುತ್ತಾರೆ, ಆದ್ರೆ ಕೆಟ್ಟ ತಾಯಿ ಇರುವುದಿಲ್ಲ ಎಂಬ ಮಾತಿಗೆ ಅಪ ಚಾರವೆಂಬಂತೆ ವರ್ತಿಸಿದ್ದಾಳೆ ಉತ್ತರಾಖಂಡದ ಹರಿದ್ವಾರದ ಬಿಜೆಪಿ ನಾಯಕಿ.

ಹರಿದ್ವಾರದ ಬಿಜೆಪಿ ಮಹಿಳಾ ಮೋರ್ಚಾದ ಮಾಜಿ ಅಧ್ಯಕ್ಷೆ ಅನಾಮಿಕಾ ಶರ್ಮಾ ಎಂಬ ಮಹಾತಾಯಿ ತನ್ನ ಬಾಯ್‌ಫ್ರೆಂಡ್‌ ಹಾಗೂ ಆತನ ಸ್ನೇಹಿತನಿಂದಲೇ ಸ್ವಂತ ಅಪ್ರಾಪ್ತ ಮಗಳ ಮೇಲೆಯೇ ಅತ್ಯಾಚಾರ ಮಾಡಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಘಟನೆ ಸಂಬಂಧ ಅನಾಮಿಕಾ, ಆಕೆಯ ಬಾಯ್‌ಫ್ರೆಂಡ್‌‍ ಸುಮಿತ್‌ ಪತ್ವಾಲ್‌ ಮತ್ತು ಆತನ ಸ್ನೇಹಿತ ಶುಭಂನನ್ನ ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಬೆಳಕಿಗೆ ಬಂದ ಬಳಿಕ ಬಿಜೆಪಿ ಆಕೆಯನ್ನ ಪಕ್ಷದಿಂದಲೇ ವಜಾ ಮಾಡಿದೆ.

ಏನಿದು ಘಟನೆ?ಅನಾಮಿಕಾ ಶರ್ಮಾ 2024ರ ವರೆಗೆ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿದ್ದರು. ನಂತರ ಪಕ್ಷದ ಸದಸ್ಯೆ ಆಗಿ ಮುಂದುವರಿದಿದ್ದರು. ಆಕೆ ತನ್ನ ಗಂಡನಿಂದ ಬೇರ್ಪಟ್ಟಿದ್ದಳು. ಆದ್ರೆ ಮಗಳು ಅಪ್ಪನೊಂದಿಗೆ ಉಳಿದುಕೊಂಡಿದ್ದಳು. ಅಪರೂಪಕ್ಕೆ ತಾಯಿ ಬಳಿ ಬರುತ್ತಿದ್ದಳು. ಈ ವೇಳೆ ಅನಾಮಿಕಾ, ಸುಮಿತ್‌ನ ಪ್ರೇಮ ಸಂಪಾದಿಸಿ ಆತನ ಹೋಟೆಲ್‌ನಲ್ಲಿಯೇ ಉಳಿದುಕೊಂಡಿದ್ದಳು.

ಜನವರಿಯಿಂದ ಮಾರ್ಚ್‌ ವೇಳೆ ಹರಿದ್ವಾರ, ಬೃಂದಾವನ ಮತ್ತು ಆಗ್ರಾದಲ್ಲಿ ಹಲವು ಬಾರಿ ಮಗಳ ಮೇಲೆ ಸುಮಿತ್‌ ಹಾಗೂ ಆತನ ಸ್ನೇಹಿತ ಶುಭಂನಿಂದ ಅತ್ಯಾಚಾರ ಮಾಡಿಸಿದ್ದಳು. ಈ ವಿಷಯವನ್ನ ತಂದೆಗೆ ಹೇಳದಂತೆ ಬೆದರಿಕೆಯೂ ಹಾಕಿದ್ದಳು ಎಂದು ವರದಿಗಳಿಂದ ತಿಳಿದುಬಂದಿದೆ.

ತನ್ನ ತಾಯಿಯ ವರ್ತನೆಯಿಂದ ಮನನೊಂದ ಮಗಳು ಘಟನೆ ಬಗ್ಗೆ ತನ್ನ ತಂದೆಗೆ ಮಾಹಿತಿ ನೀಡಿದ್ದಳು. ಪರಿಣಾಮ ತಂದೆ ನೀಡಿದ ದೂರಿನ ಮೇರೆಗೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಪೋಕ್ಸೋ ಕಾಯ್ದೆ ಸೇರಿ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

RELATED ARTICLES

Latest News