Thursday, September 11, 2025
Homeಮನರಂಜನೆಡ್ಯೂಪ್ಲೆಕ್ಸ್ ಮನೆಯಲ್ಲಿಯೇ ಕಾಡುವ `ನೀತಿ’

ಡ್ಯೂಪ್ಲೆಕ್ಸ್ ಮನೆಯಲ್ಲಿಯೇ ಕಾಡುವ `ನೀತಿ’

ಗೌತಮ್ ಮಣಿವಣ್ಣನ್ ನಿರ್ಮಾಣ ಮಾಡಿರುವ ರಾಜ್ ಗೋಪಾಲ್ ನಿರ್ದೇಶನ ಮಾಡಿರುವ ಸಿನಿಮಾ ನೀತಿ ಬಿಡುಗಡೆಯಾಗಿದೆ. ಈ ಸಿನಿಮಾ ಸಸ್ಪೆನ್ಸ್ ಥ್ರಿಲ್ಲರ್ ಜಾನರ್ ನದ್ದು. ಕಥೆಯೊಳಗೆ ಕಥೆ ಬೆರೆಸಿರುವ ರಾಜ್ ಗೋಪಾಲ್ ಸೆಕೆಂಡ್ ವರ್ಷನ್ ನಲ್ಲಿ ಪ್ರೇಕ್ಷಕರ ತಲೆಗೇನೆ ಹುಳ ಬಿಟ್ಟಿದ್ದಾರೆ. ಆರಂಭದಲ್ಲಿ ನಿರ್ದೇಶಕ ಹೇಳುವ ಕಥೆಯನ್ನೇ ನಂಬಿಕೊಂಡು ಕೂರುವ ಪ್ರೇಕ್ಷಕ, ಹೌದಾ..? ಅಯ್ಯೋ ಪಾಪ ಅಂತ ನಾಯಕಿ ಮೇಲೆ ಸಿಂಪತಿ ತೋರಿಸುವ ಪ್ರೇಕ್ಷಕ, ಕಥೆ ತನ್ನ ಮಗ್ಗಲು ಬದಲಿಸುತ್ತಿದ್ದಂತೆ ಹಿಂಗಾಗೋಯ್ತಾ ಎಂಬ ಶಾಕಿಂಗ್ ರಿಯಾಕ್ಷನ್ ನೀಡುತ್ತಾನೆ.

ಸಿನಿಮಾದ ಕಥೆಯನ್ನ ಬಹಳ ಸೀಮಿತ ಪ್ರದೇಶದಲ್ಲಿ ಚಿತ್ರೀಕರಣ ಮಾಡಲಾಗಿದೆ. ಕಳ್ಳತನಕ್ಕೆಂದು ಬರುವ ಪ್ರತಾಪ್ ಗೆ ನೀತಿ ಸಿಕ್ಕಿ ಬೀಳುತ್ತಾಳೆ. ಆಕೆಯ ಕ್ರಿಮಿನಲ್ ಐಡಿಯಾ ನೋಡುಗರಿಗೆ ಆರಂಭದಲ್ಲಿ ಅರ್ಥವೇ ಆಗುವುದಿಲ್ಲ. ಬಂದ ಪ್ರತಾಪ್ ನಿಜವಾದ ಕಳ್ಳ ಅಲ್ಲ ಅಂತಾನು ಅನ್ನಿಸುವುದಿಲ್ಲ. ಒಳ್ಳೆ ಟ್ವಿಸ್ಟ್ ಅಂಡ್ ಟರ್ನಿಂಗ್ ಇಟ್ಟಿರುವ ರಾಜ್ ಗೋಪಾಲ್ ನಿರ್ದೇಶನದ ನೀತಿ ಖಂಡಿತ ಸಸ್ಪೆನ್ಸ್, ಥ್ರಿಲ್ಲರ್ ಜಾನರ್ ಅವರಿಗೆ ಇಷ್ಟವಾಗುತ್ತದೆ.

ಇವರೆಲ್ಲಾ ಎರಡು ಶೇಡ್ ನಲ್ಲಿ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಅನ್ನೋದನ್ನ ಥಿಯೇಟರ್ನಲ್ಲಿ ಕೂತು ನೋಡಬೇಕು. ಆಗ ಮಜಾ ಸಿಗಲಿದೆ. ಖುಷಿ ರವಿ ಹಾಗೂ ಸಂಪತ್ ಮೈತ್ರೇಯ ಇಬ್ಬರ ಜರ್ನಿಯೇ ಕುತೂಹಲಕಾರಿಯಾಗಿದೆ. ಪ್ರವೀಣ್ ಅಥರ್ವ ತಮ್ಮ ಪಾತ್ರವನ್ನ ಚೆನ್ನಾಗಿ ನಿಭಾಯಿಸಿದ್ದಾರೆ.

RELATED ARTICLES

Latest News