Friday, October 31, 2025
Homeರಾಷ್ಟ್ರೀಯ | Nationalಚಾರ್ಜಿಂಗ್ ಸ್ಟೇಷನ್‌ನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಇಬ್ಬರು ಸಾವು

ಚಾರ್ಜಿಂಗ್ ಸ್ಟೇಷನ್‌ನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಇಬ್ಬರು ಸಾವು

Two dead in fire at Delhi’s Dilshad Garden, e-rickshaw charging suspected as cause

ನವದೆಹಲಿ, ಜೂನ್.9-ಪೂರ್ವ ದೆಹಲಿಯ ದಿಲ್ಯಾದ್ ಗಾರ್ಡನ್ ಪ್ರದೇಶದ ಇ-ರಿಕ್ಷಾ ಚಾರ್ಜಿಂಗ್ ಸ್ಟೇಷನ್‌ನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ . ಕೋಡಿ ಕಾಲೋನಿಯಿಂದ ತಡರಾತ್ರಿ ಬೆಂಕಿಯ ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ಬಂದಿದ್ದು, ನಂತರ ನಾಲ್ಕು ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂಧಿಸುವ ಕಾರ್ಯ ಕೈಗೊಳ್ಳಲಾಯಿತು ಎಂದು ಅವರು ಆಗ್ನಿ ಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.

ಇ-ರಿಕ್ಷಾ ಚಾರ್ಜ್ ಮಾಡುತ್ತಿದ್ದಾಗ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ.ಸ್ಥಳದಲ್ಲಿ ಇಬ್ಬರು ಮೃತಪಟ್ಟಿರುವುದು ಕಂಡುಬಂದಿದೆ. ಅವರನ್ನು ಶಶಿ (24) ಮತ್ತು ಬಬ್ಬು (60) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

- Advertisement -

ಯಾವುದೇ ಸ್ಫೋಟ ಸಂಭವಿಸದಂತೆ ತಡೆಯಲು ಬೆಂಕಿಯನ್ನು ನಂದಿಸಿದ ನಂತರ ತಂಪಾಗಿಸುವ ಕಾರ್ಯಾಚರಣೆಯನ್ನು ಕೈಗೊಳ್ಳಲಾಯಿತು. ಬೆಂಕಿಯ ಕಾರಣವನ್ನು ಇನ್ನೂ ಅಧಿಕೃತವಾಗಿ ದೃಢಪಡಿಸಲಾಗಿಲ್ಲ. ಘಟನೆಗಳ ನಿಖರವಾದ ಖಚಿತಪಡಿಸಿಕೊಳ್ಳಲು ಹೆಚ್ಚಿನ ತನಿಖೆ ನಡೆಯುತ್ತಿದೆ. ವಿಧಿವಿಜ್ಞಾನ ತಂಡ ಮತ್ತು ಅಪರಾಧ ತಂಡ ಸ್ಥಳಕ್ಕೆ ಭೇಟಿ ನೀಡಿತು ಪರಿಶೀಲಿಸಿದ್ದಾರೆ.

- Advertisement -
RELATED ARTICLES

Latest News