Thursday, October 30, 2025
Homeಇದೀಗ ಬಂದ ಸುದ್ದಿSRH ತಂಡದ ಮಾಲಕಿ ಕಾವ್ಯಾ ಮದುವೆ, ಸ್ಪಷ್ಟನೆ ಕೊಟ್ಟ ಅನಿರುದ್ದ್

SRH ತಂಡದ ಮಾಲಕಿ ಕಾವ್ಯಾ ಮದುವೆ, ಸ್ಪಷ್ಟನೆ ಕೊಟ್ಟ ಅನಿರುದ್ದ್

ಬೆಂಗಳೂರು, ಜೂ. 15- ತಮಿಳು ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಮತ್ತು ಸನ್‌ನೆಟ್‌ವರ್ಕ್‌ ನ ಕಾರ್ಯಕಾರಿ ನಿರ್ದೇಶಕಿ ಹಾಗೂ ಸನ್‌ ರೈಸರ್ಸ್‌ ಹೈದ್ರಾಬಾದ್‌ ತಂಡದ ಮಾಲಕಿ ಕಾವ್ಯ ಮಾರನ್‌ ಅವರ ವಿವಾಹ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಜೋರು ಸದ್ದು ಮಾಡುತ್ತಿರುವಾಗಲೇ ಸ್ವತಃ ಅನಿರುದ್‌್ಧ ಅವರೇ ಈ ಸುದ್ದಿಯನ್ನು ಅಲ್ಲಗಳೆದಿದ್ದಾರೆ.

ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಸಂಗೀತ ನಿರ್ದೇಶಕ ಅನಿರುದ್‌್ಧ ಅವರು , `ಏನು ನನ್ನ ಮದುವೆನಾ? ದಯವಿಟ್ಟು ಈ ರೀತಿ ಸುಳ್ಳು ಹರಡುವುದನ್ನು ನಿಲ್ಲಿಸಿ’ ಎಂದು ಹೇಳಿದ್ದಾರೆ.
ಇತ್ತೀಚೆಗೆ ಅನಿರುದ್‌್ಧ ಹಾಗೂ ಕಾವ್ಯಮಾರನ್‌ ಅವರು ಪರಸ್ಪರ ಹಂಚಿಕೊಂಡಿರುವ ಕೆಲವು ಪೋಸ್ಟ್‌ ಗಳು ಇವರು ಸಪ್ತಪದಿ ತುಳಿಯಲಿದ್ದಾರೆ ಎಂಬ ಅನುಮಾನಗಳು ಮೂಡಿಸಿದ್ದವು.

- Advertisement -

ಅನಿರುದ್‌್ಧ ಹಾಗೂ ಕಾವ್ಯಮಾರನ್‌ ಅವರ ನಡುವೆ ಕೇವಲ ಸ್ನೇಹ ಸಂಬಂಧವಿಲ್ಲ ಬದಲಿಗೆ ಅವರು ವಿವಾಹವಾಗಲು ಮುಂದಾಗಿದ್ದಾರೆ. ಅಲ್ಲದೆ ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರು ಕಾವ್ಯ ಅವರ ತಂದೆ ಹಾಗೂ ಸನ್‌ ಗ್ರೂಪ್‌ ನ ಅಧ್ಯಕ್ಷ ಕಲಾನಿಧಿ ಮಾರನ್‌ ಅವರೊಂದಿಗೆ ಇವರಿಬ್ಬರ ವಿವಾಹದ ಬಗ್ಗೆಯೂ ಚರ್ಚಿಸಿದ್ದಾರೆ ಎಂಬ ಸುದ್ದಿಗಳು ಹರದಾಡಿದ್ದವು. ಕಾವ್ಯ ಮಾರನ್‌ ಹಾಗೂ ಅನಿರುದ್‌್ಧ ಅವರು ಈ ಹಿಂದೆಯೂ ಅನೇಕ ಸಮಾರಂಭಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರಿಂದ ಇವರಿಬ್ಬರು ವಿವಾಹವಾಗುತ್ತಾರೆ ಎಂಬ ಸುದ್ದಿಯು ಹರಿದಾಡಿತ್ತು. ಆದರೆ ಇದೆಲ್ಲ ಸುಳ್ಳು ಸುದ್ದಿ ಎಂದು ಈಗ ಸ್ವತಃ ಅನಿರುದ್‌್ಧ ಅವರೇ ಸ್ಪಷ್ಟಪಡಿಸಿದ್ದಾರೆ.

- Advertisement -
RELATED ARTICLES

Latest News