ಬೆಂಗಳೂರು : ಐಪಿಎಸ್ ಅಧಿಕಾರಿಯ ಶ್ರೀನಿವಾಸ ಜೋಶಿ ಅವರು ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಚಿತ್ರದುರ್ಗ ಮೂಲದ ಮಾಜಿ ಪೊಲೀಸ್ ಹೆಡ್ ಕಾನ್ಸ್ಟೇಬಲ್ ನಿಂಗಣ್ಣ ವಸೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಸಿಬ್ಬಂದಿಗಳಿಗೆ ಲಂಚ ನೀಡಿದ್ದ ಅಧಿಕಾರಿಗಳು ಹಾಗೂ ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಶಂಕಿಸಲಾದ ಸುಮಾರು 25ಕ್ಕೂ ಹೆಚ್ಚು ಸರ್ಕಾರಿ ಅಧಿಕಾರಿಗಳಿಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು.
ಲೋಕಾಯುಕ್ತದಲ್ಲಿ ಎಸ್ಪಿ ಆಗಿದ್ದ ಸದ್ಯ ಹುದ್ದೆ ತೊರೆದಿರುವ ಶ್ರೀನಿವಾಸ್ ಜೋಶಿ ಅವರು ವಿಚಾರಣೆಗೆ ಹಾಜರಾಗದೆ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಜೋಶಿ ಅವರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಕೆಲ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು.
ಮೂಲಗಳ ಪ್ರಕಾರ ಅವರನ್ನು ಬಂಧಿಸುವ ಸಾಧ್ಯತೆಯೂ ಇರುವ ಕಾರಣ ನಿರೀಕ್ಷಣ ಜಾಮೀನು ಮೊರೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ಲೋಕಾಯುಕ್ತಕ್ಕೂ ಸವಾಲಿನ ಪ್ರಕರಣವಾಗಿದ್ದು ಎಚ್ಚರಿಕೆಯಿಂದ ಹೆಜ್ಜೆ ಇಡಲಾಗುತ್ತಿದೆ.
- ಗಡಿಯಲ್ಲಿ ಒಳನುಸುಳುವಿಕೆ ಪ್ರಯತ್ನ ವಿಫಲಗೊಳಿಸಿದ ಸೇನೆ
- ರಾಜಣ್ಣ ನಿರ್ಗಮನದಿಂದ ತೆರವಾದ ಸಹಕಾರ ಸಚಿವ ಖಾತೆಗೆ ಪೈಪೋಟಿ ಶುರು, ರೇಸ್ನಲ್ಲಿ ಡಿ.ಕೆ.ಸುರೇಶ್
- ಧರ್ಮಸ್ಥಳ ಪ್ರಕರಣ : ನಾಳೆ ಎಸ್ಐಟಿ ಕೈಸೇರಲಿದೆ 13ನೇ ಸ್ಥಳದ ಜಿಪಿಆರ್ ವರದಿ
- ಒಂದೂವರೆ ತಿಂಗಳಿನಲ್ಲಿ ಬಿ-ಖಾತಾ ವಿತರಣೆ : ಸಚಿವ ಪ್ರಿಯಾಂಕ್ ಖರ್ಗೆ
- ಶಾಸಕ ಸತೀಶ್ ಸೈಲ್ ನಿವಾಸದ ಮೇಲೆ ಇಡಿ ದಾಳಿ