ವಾಷಿಂಗ್ಟನ್, ಜೂನ್ 18- ಮತ್ತೆ ಅಮೆರಿಕದ ನರಿ ಬುದ್ದಿ ಬಯಲಾಗಿದೆ.ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನದಲ್ಲಿ ಇಂದು ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರಿಗೆ ಭೋಜನ ಕೂಟ ಆಯೋಜಿಸಿದ್ದಾರೆ.
ಅಧ್ಯಕ್ಷರು ಪಾಕಿಸ್ತಾನ ಇಸ್ಲಾಮಿಕ್ ಗಣರಾಜ್ಯದ ಸೇನಾ ಮುಖ್ಯಸ್ಥರೊಂದಿಗೆ ಊಟ ಮಾಡುತ್ತಾರೆ ಎಂದು ಶ್ವೇತಭವನ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಕೂಟವು ಮಧ್ಯಾಹ್ನ 1 ಗಂಟೆಗೆ (ಸ್ಥಳೀಯ ಸಮಯ) ಶ್ವೇತಭವನದ ಕ್ಯಾಬಿನೆಟ್ ಕೊಠಡಿಯಲ್ಲಿ ನಡೆಯಲಿದೆ.
ಜಿ7 ನಾಯಕರ ಶೃಂಗಸಭೆಗಾಗಿ ಕೆನಡಾದ ಕನನಾಸ್ತಿಸ್‌ಗೆ ತಮ್ಮ ಪ್ರವಾಸವನ್ನು ಟ್ರಂಪ್ ಮೊಟಕುಗೊಳಿಸಿದ್ದರು ಮತ್ತು ಇತ್ತೀಚಿನ ಇಸ್ರೇಲ್-ಇರಾನ್ ಸಂಘರ್ಷದೊಂದಿಗೆ ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ನಿನ್ನೆ ಬೆಳಿಗ್ಗೆ ವಾಷಿಂಗ್ಟನ್‌ಗೆ ಮರಳಿದರು.
- ಡಿಸೆಂಬರ್ ತಿಂಗಳ ಒಳಗೆ 2ಲಕ್ಷ ಪೋಡಿ ವಿತರಣೆ : ಸಚಿವ ಕೃಷ್ಣಭೈರೇಗೌಡ
- ಬೀದಿನಾಯಿಗಳಿಗೆ ಬಾಡೂಟ ಹಾಕುವ ಯೋಜನೆ ಸ್ಥಗಿತ ಸಾಧ್ಯತೆ
- ಸ್ವಾತಂತ್ರ್ಯೋತ್ಸವಕ್ಕೆ ಬಿಗಿ ಬಂದೋಬಸ್ತ್, ಮಾಣಿಕ್ ಷಾ ಪರೇಡ್ ಮೈದಾನ ಪ್ರವೇಶಕ್ಕೆ ಇದೇ ಮೊದಲ ಬಾರಿಗೆ ಇ-ಪಾಸ್ ವ್ಯವಸ್ಥೆ
- ಮುಜರಾಯಿ ದೇಗುಲಗಳಲ್ಲಿ ಆ.15 ರಿಂದ ಪ್ಲಾಸ್ಟಿಕ್ ಬಳಕೆ ನಿಷೇಧ
- ರಾಜ್ಯದಲ್ಲಿ ಪ್ರತಿವರ್ಷ ರಸ್ತೆ ಅಪಘಾತದಿಂದ ಸಾವಿರಕ್ಕೂ ಹೆಚ್ಚು ಅಧಿಕ ಮಂದಿ ಸಾವು : ಸಚಿವ ರಾಮಲಿಂಗಾರೆಡ್ಡಿ