ಕನಕಪುರ, ಜೂ.19-ಕನಕಪುರ ಡಿಪೋದಿಂದ ತಮಿಳುನಾಡಿನ ಗಡಿಭಾಗವಾದ ಕೋಟೆ ಊರಿಗೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಮಾರ್ಗಮಧ್ಯೆ ಬ್ರೇಕ್ ಫೇಲೂರ್ ಆಗಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪದಂತಾಗಿದೆ.
ಇಂದು ಬೆಳಗ್ಗೆ 7.45ರಲ್ಲಿ ಕನಕಪುರ ಡಿಪೋದಿಂದ ಪ್ರಯಾಣಿಕರನ್ನು ಕರೆದುಕೊಂಡು ತಮಿಳುನಾಡಿಗೆ ಹೋಗುತ್ತಿದ್ದು 9 ಗಂಟೆ ಸುಮಾರಿಗೆ ಈ ಬಸ್ ತಗ್ಗಟ್ಟಿ ಗ್ರಾಮದ ಬಳಿ ಬ್ರೇಕ್ ನಿಯಂತ್ರಣ ಕಳೆದುಕೊಂಡಿದೆ.ತಕ್ಷಣ ಚಾಲಕ ಬಸ್ಸನ್ನು ರಸ್ತೆ ಬದಿಯ ಮಣ್ಣಿನ ಗುಡ್ಡೆಗೆ ಗುದ್ದಿಸಿ ಬಸ್‌ನ್ನು ನಿಲ್ಲಿಸುವ ಮೂಲಕ ಪ್ರಯಾಣಿಕರ ಪ್ರಾಣ ಉಳಿಸಿದ್ದಾರೆ.
ಈ ಸುದ್ದಿ ತಿಳಿಯುತ್ತಿದ್ದಂತೆ ಕನಕಪುರದ ಕೆಲವು ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಡಿಭಾಗಗಳಿಗೆ ಹೋಗಲು ಗುಜರಿ ಬಸ್‌ನ್ನು ಬಿಡುತ್ತಾರೆ. ಈ ಕೂಡಲೇ ಹಾಳಾಗಿರುವ ಬಸ್‌ನ್ನು ನಿಲ್ಲಿಸಬೇಕು. ಜನರ ಪ್ರಾಣ ಹೋದರೆ ಯಾರು ಹೊಣೆ ಎಂದು ಪ್ರಶಾಂತ್ ಹೊಸದುರ್ಗೆ ಎಂಬುವರು ಪ್ರಶ್ನಿಸಿದ್ದಾರೆ.
ಗುಜರಿ ಬಸ್,ತಾಂತ್ರಿಕ ದೋಷವಿರುವ ಬಸ್‌ನ್ನು ರಸ್ತೆಗಿಳಿಸಬಾರದೆಂದು ಹೈಕೋರ್ಟ್ ತಾಕೀತು ಮಾಡಿದ್ದರೂ ಸಹ ನಿಯಮ ಉಲ್ಲಂಘಿಸಿ ರಸ್ತೆಗಿಳಿಸುತ್ತಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಡಿಪೋ ಮ್ಯಾನೇಜರ್ ನರಸಿಂಹ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ಗುಜರಿ ಬಸ್‌ಗಳನ್ನು ಓಡಿಸುತ್ತಿಲ್ಲ. ಬಸ್‌ಗಳನ್ನು ರಸ್ತೆಗಿಳಿಸುವ ಮುನ್ನ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸುತ್ತೇವೆ.
ಕಲವೊಂದು ಬಾರಿ ಆಕಸ್ಮಿಕವಾಗಿ, ಏಕಾಏಕಿ ಬಸ್‌ಗಳಲ್ಲಿ ತಾಂತ್ರಿಕ ದೋಷದಿಂದ ಬ್ರೇಕ್ ಫೇಲೂರು ಆಗುವ ಸಾಧ್ಯತೆಗಳಿರುತ್ತವೆ. ಮುಂದೆ ಈ ರೀತಿ ಆಗದಂತೆ ಕ್ರಮವಹಿಸುತ್ತೇವೆ ಎಂದು ತಿಳಿಸಿದ್ದಾರೆ.
- ಡಿಸೆಂಬರ್ ತಿಂಗಳ ಒಳಗೆ 2ಲಕ್ಷ ಪೋಡಿ ವಿತರಣೆ : ಸಚಿವ ಕೃಷ್ಣಭೈರೇಗೌಡ
- ಬೀದಿನಾಯಿಗಳಿಗೆ ಬಾಡೂಟ ಹಾಕುವ ಯೋಜನೆ ಸ್ಥಗಿತ ಸಾಧ್ಯತೆ
- ಸ್ವಾತಂತ್ರ್ಯೋತ್ಸವಕ್ಕೆ ಬಿಗಿ ಬಂದೋಬಸ್ತ್, ಮಾಣಿಕ್ ಷಾ ಪರೇಡ್ ಮೈದಾನ ಪ್ರವೇಶಕ್ಕೆ ಇದೇ ಮೊದಲ ಬಾರಿಗೆ ಇ-ಪಾಸ್ ವ್ಯವಸ್ಥೆ
- ಮುಜರಾಯಿ ದೇಗುಲಗಳಲ್ಲಿ ಆ.15 ರಿಂದ ಪ್ಲಾಸ್ಟಿಕ್ ಬಳಕೆ ನಿಷೇಧ
- ರಾಜ್ಯದಲ್ಲಿ ಪ್ರತಿವರ್ಷ ರಸ್ತೆ ಅಪಘಾತದಿಂದ ಸಾವಿರಕ್ಕೂ ಹೆಚ್ಚು ಅಧಿಕ ಮಂದಿ ಸಾವು : ಸಚಿವ ರಾಮಲಿಂಗಾರೆಡ್ಡಿ