ನವದೆಹಲಿ, ಜೂ. 19 (ಪಿಟಿಐ) ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
78 ವರ್ಷದ ಕಾಂಗ್ರೆಸ್ ನಾಯಕಿಯನ್ನು ಜೂನ್ 15 ರಂದು ಸರ್ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆಸ್ಪತ್ರೆಯ ಅಧ್ಯಕ್ಷ ಡಾ.ಅಜಯ್ ಸ್ವರೂಪ್ ಅವರ ಪ್ರಕಾರ, ಗಾಂಧಿ ಚಿಕಿತ್ಸೆ ಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ.
ಅವರ ಆರೋಗ್ಯ ಸ್ಥಿರವಾಗಿದೆ ಮತ್ತು ಅವರ ನಿರಂತರ ಆರೈಕೆಯ ಭಾಗವಾಗಿ ಇಂದು ನಿರ್ದಿಷ್ಟ ಆಹಾರ ಯೋಜನೆಯನ್ನು ಪರಿಚಯಿಸಲಾಗಿದೆ. ಅವರು ನಿಕಟ ನಿಗಾದಲ್ಲಿದ್ದಾರೆ ಎಂದು ಅವರು ಇಂದು ಬೆಳಿಗ್ಗೆ ಬಿಡುಗಡೆ ಮಾಡಿದ ಆರೋಗ್ಯ ಮಾಹಿತಿಯಲ್ಲಿ ತಿಳಿಸಿದ್ದಾರೆ.
ಅವರ ಚೇತರಿಕೆ ಸ್ಥಿರವಾಗಿ ಪ್ರಗತಿಯಲ್ಲಿದ್ದರೂ, ಆಸ್ಪತ್ರೆ ಇನ್ನೂ ಡಿಸ್ಟಾರ್ಜ್ ದಿನಾಂಕವನ್ನು ನಿರ್ಧರಿಸಿಲ್ಲ. ಅವರ ಒಟ್ಟಾರೆ ಚೇತರಿಕೆಯ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.ಹಿರಿಯ ವೈದ್ಯರ ತಂಡವು ಅವರ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಹೇಳಿಕೆ ತಿಳಿಸಿದೆ.
- ರಾಜ್ಯದಲ್ಲಿ ಮತ್ತೆ ಮಳೆ ಹೆಚ್ಚಾಗುವ ಮುನ್ಸೂಚನೆ
- ಮಂಗಳೂರು ಎಂಆರ್ಪಿಎಲ್ನಲ್ಲಿ ಅನಿಲ ಸೋರಿಕೆ : ಇಬ್ಬರು ಸಿಬ್ಬಂದಿ ಸಾವು
- ಪೊಲೀಸರು ಉತ್ತಮವಾಗಿ ಕರ್ತವ್ಯ ನಿರ್ವಹಿಸಲು ಸಾರ್ವಜನಿಕರ ಸಹಕಾರ ಅತ್ಯಗತ್ಯ : ಸೀಮಂತ್ಕುಮಾರ್ ಸಿಂಗ್
- ಈಶಾನ್ಯ ದೆಹಲಿಯಲ್ಲಿ ಕಟ್ಟಡ ಕುಸಿತ, ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ
- ಏರ್ ಇಂಡಿಯಾ ವಿಮಾನ ದುರಂತದ ಪ್ರಾಥಮಿಕ ವರದಿ ಕುರಿತು ಆತುರದ ತೀರ್ಮಾನ ಬೇಡ