Saturday, June 21, 2025
Homeರಾಷ್ಟ್ರೀಯ | Nationalತಾಂತ್ರಿಕ ದೋಷ , ಮಧುರೈಗೆ ಹೋಗುತ್ತಿದ್ದ ವಿಮಾನ ಚೆನ್ನೈನಲ್ಲಿ ಸೇಫ್‌ ಲ್ಯಾಂಡಿಂಗ್

ತಾಂತ್ರಿಕ ದೋಷ , ಮಧುರೈಗೆ ಹೋಗುತ್ತಿದ್ದ ವಿಮಾನ ಚೆನ್ನೈನಲ್ಲಿ ಸೇಫ್‌ ಲ್ಯಾಂಡಿಂಗ್

Chennai-Madurai IndiGo flight makes emergency landing after mid-air engine snag

ಚೆನ್ನೈ, ಜೂ. 20 (ಪಿಟಿಐ)- ಮಧುರೈಗೆ ಹೋಗುತ್ತಿದ್ದ ಖಾಸಗಿ ವಿಮಾನವೊಂದು ಆಕಾಶದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮತ್ತೆ ಚೆನ್ನೈ ನಿಲ್ದಾಣಕ್ಕೆ ವಾಪಸ್ಸಾಗಿದೆ.
ಮಧುರೈಗೆ ಪ್ರಯಾಣಿಸುತ್ತಿದ್ದ ಖಾಸಗಿ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣಕ್ಕೆ ಸುರಕ್ಷಿತವಾಗಿ ಮರಳಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ಸುಮಾರು ಅರ್ಧ ಗಂಟೆ ಹಾರಾಟ ನಡೆಸಿದ ನಂತರ, ಪೈಲಟ್‌ ಆ ದೋಷವನ್ನು ಪತ್ತೆಹಚ್ಚಿದರು ಮತ್ತು ಚೆನ್ನೈಗೆ ಹಿಂತಿರುಗಿ ಇಳಿಯಲು ಅನುಮತಿ ಕೋರಿದರು ಎಂದು ಅವರು ಹೇಳಿದರು. ಸುಮಾರು 68 ಪ್ರಯಾಣಿಕರನ್ನು ಹೊತ್ತೊಯ್ಯು ತ್ತಿದ್ದ ವಿಮಾನವು ನಂತರ ಇಲ್ಲಿ ಸುರಕ್ಷಿತವಾಗಿ ಇಳಿಯಿತು ಮತ್ತು ಎಲ್ಲಾ ಪ್ರಯಾಣಿಕರನ್ನು ಕೆಳಗಿಳಿಸಲಾಯಿತು ಎಂದು ಅವರು ಹೇಳಿದರು.

RELATED ARTICLES

Latest News