ಬೆಂಗಳೂರು, ಜೂ. 20– ಮರದ ಕೊಂಬೆ ಬಿದ್ದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಯುವಕ ಅಕ್ಷಯ್ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಅಧಿಕಾರಿಯೊಬ್ಬರ ತಲೆದಂಡವಾಗಿದೆ.
ಬಿಬಿಎಂಪಿ ಆರಣ್ಯ ವಿಭಾಗದಲ್ಲಿ ಡಿಸಿಎಫ್ ಆಗಿದ್ದ ಬಿಎಲ್‌ಜಿ ಸ್ವಾಮಿ ಅವರನ್ನು ಸರ್ಕಾರ ಎತ್ತಂಗಡಿ ಮಾಡಿ ಅವರ ಜಾಗಕ್ಕೆ ಚಿಕ್ಕಮಗಳೂರಿನ ಅಧಿಕಾರಿ ಸುದರ್ಶನ್ ಅವರನ್ನು ನೇಮಕ ಮಾಡಿದೆ.
ಆದರೆ ಎತ್ತಂಗಡಿ ಆಗಿರುವ ಸ್ವಾಮಿ ಅವರಿಗೆ ಯಾವುದೇ ಹುದ್ದೆ ತೋರಿಸಿಲ್ಲ. ಹೀಗಾಗಿ ಅವರಿಗೆ ಫನಿಷೆಂಟ್ ವರ್ಗಾವಣೆ ಮಾಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.ಹೆಚ್ಚಾಯ್ತು ನಕಲಿ ಅರ್ಜಿಗಳ ಹಾವಳಿ: ಅಕ್ಷಯ್ ಕುಟುಂಬದವರಿಗೆ ಬಿಬಿಎಂಪಿ ಐದು ಲಕ್ಷ ರೂ.ಗಳ ಪರಿಹಾರ ಘೋಷಿಸುತ್ತಿದ್ದಂತೆ ಪಾಲಿಕೆಗೆ ಬರುವ ನಕಲಿ ಅರ್ಜಿಗಳ ಸಂಖ್ಯೆ ಹೆಚ್ಚಾಗತೊಡಗಿದ.
ರಸ್ತೆ ಬದಿ ಮರ ಬಿದ್ದು ಸಾವು-ನೋವು ಸಂಭವಿಸಿದರೆ ಪಾಲಿಕೆಯಿಂದ ಪರಿಹಾರ ಸಿಗುತ್ತದೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಬೇರೆ ರೀತಿಯಲ್ಲಿ ಗಾಯ ಮಾಡಿಕೊಂಡವರು ನಮ ಮೇಲೆ ಮರದ ರೆಂಬೆ, ಕೊಂಬೆ ಬಿದ್ದು ಗಾಯವಾಗಿದೆ ಪರಿಹಾರ ನೀಡಿ ಎಂದು ಅರ್ಜಿ ಸಲ್ಲಿಸತೊಡಗಿದ್ದಾರೆ.ಕಳೆದ ಒಂದು ವಾರದಲ್ಲಿ ಪರಿಹಾರಕ್ಕಾಗಿ ಇಂತಹ ನೂರಾರು ನಕಲಿ ಅರ್ಜಿಗಳು ಬಂದಿವೆ.
ಮೆಗಾ ಪ್ಲಾನ್: ಇಂತಹ ನಕಲಿ ಅರ್ಜಿಗಳ ಹಾವಳಿಯಿಂದ ತಪ್ಪಿಸಿಕೊಳ್ಳಲು ಬಿಬಿಎಂಪಿ ಹೊಸ ಪ್ಲಾನ್ ಕಂಡುಕೊಂಡಿದೆ.
ಇನ್ನು ಮುಂದೆ ಮರದ ಕೊಂಬೆ, ರಂಬೆ ಮುರಿದು ಬಿದ್ದು ಸಾವಾದರೆ ಅಂತಹವರಿಗೆ ಇನ್ಶೂರೆನ್‌್ಸ ಮಾಡಿಸಲು ಬಿಬಿಎಂಪಿ ತೀರ್ಮಾನಿಸಿದೆ.ಇನ್ಶೂರೆನ್ಸ್ ಕಂಪೆನಿಗೆ ಶಾಶ್ವತ ಮೊತ್ತ ಪಾವತಿಸಿ ಭವಿಷ್ಯದಲ್ಲಿ ಮರ ಬಿದ್ದು ಸಾವನ್ನಪ್ಪಿದ್ದವರಿಗೆ ವಿಮಾ ಸಂಸ್ಥೆಯಿಂದಲೇ ಪರಿಹಾರ ಕೊಡಿಸುವ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಮರಗಣತಿ ಆರಂಭ:
ಇದರ ನಡುವೆಯೇ ನಗರದಲ್ಲಿ ಮರ ಗಣತಿ ಕಾರ್ಯ ಅರಂಭವಾಗಿದೆ. ಇದುವರೆಗೆ 7 ಲಕ್ಷ ಮರಗಳ ಗಣತಿ ಮುಗಿದಿದೆ. ಮರಗಣತಿ ವೇಳೆ ಮತ್ತಷ್ಟು ಮರಗಳಿಗೆ ಆಯುಷ್ಯ ಮುಗಿಯುವ ಸೂಚನೆಗಳು ಸಿಕ್ಕಿವೆ. ಮರ ಗಣತಿಯಲ್ಲಿ ಶೇ. 5 ರಷ್ಟು ಮರಗಳು ಡೇಂಜರ್ ಎನ್ನುವುದು ಗೊತ್ತಾಗಿದೆ. ಈಗಾಗಲೇ 70-80 ವರ್ಷ ಹಳೆಯ ದಾಗಿರೋ ಸುಮಾರು 35 ಸಾವಿರ ಮರಗಳನ್ನು ತೆರವು ಮಾಡಲು ಪಾಲಿಕೆ ಸಿದ್ಧತೆ ನಡೆಸಿದೆ.
- ಪಾಕ್ ಪ್ರವಾಹದಲ್ಲಿ 220 ಜನ ಬಲಿ
- ಇಂಡೋನೇಷ್ಯಾದ ಸುಲಾವೆಸಿ ದ್ವೀಪದಲ್ಲಿ 5.8 ತೀವ್ರತೆಯ ಭೂಕಂಪ
- ಪೀಣ್ಯ ಫ್ಲೈ ಓವರ್ ಮೇಲೆ ಅಪಘಾತ, ಗ್ಯಾಸ್ ಸಿಲಿಂಡರ್ ಡೆಲಿವರಿ ಬಾಯ್ ಸಾವು
- ಧರ್ಮಸ್ಥಳದ ಅಪಪ್ರಚಾರ ಪಿತೂರಿ ಮಾಡಿದವರ ವಿರುದ್ಧ ತನಿಖೆಗೆ ಬಿವೈವಿ ಆಗ್ರಹ
- ನಗರ್ತಪೇಟೆ ಅಗ್ನಿ ಅವಘಡ, ಇಬ್ಬರ ಬಂಧನ