ತುಮಕೂರು, ಜೂ.21– ಮುಂದಿನ ದಿನಗಳಲ್ಲಿ ನನಗೆ ಯಾವ ಅಧಿಕಾರವೂ ಬೇಡ, ಐಶ್ವರ್ಯವೂ ಬೇಡ. ಜನ ನನ್ನ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸ ಉಳಿಸಿಕೊಂಡು ಹೋದರೆ ಸಾಕು ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಇಂದಿಲ್ಲಿ ಹೇಳಿದರು. ಎಲ್ಲ ವರ್ಗದ ಜನರು, ಎಲ್ಲ ಪಕ್ಷದವರು ಸೇರಿ ಅಮೃತಮಹೋತ್ಸವ ಹಾಗೂ ಅಭಿನಂದನಾ ಗ್ರಂಥ ಲೋಕಾರ್ಪಣೆ ಸಮಾರಂಭದ ಯಶಸ್ಸಿಗೆ ಕೆಲಸ ಮಾಡುತ್ತಿದ್ದಾರೆ ಎಂದು ಕೇಳಿದ್ದೇನೆ. ಇದರಿಂದ ನನಗೆ ತುಂಬಾ ಸಂತೋಷವಾಗುತ್ತಿದೆ. ಮುಂದಿನ ದಿನಗಳಲ್ಲಿ ನನಗೆ ಯಾವ ಅಧಿಕಾರ, ಐಶ್ವರ್ಯ ಬೇಡ. ಜನರು ನನ್ನ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸವನ್ನು ನಾನು ಸಾಯುವವರೆಗೂ ಉಳಿಸಿಕೊಂಡು ಹೋದರೆ ಸಾಕು. ಮುಂದಿನ ಆಶಯ ಏನೂ ಇಲ್ಲ ಎಂದು ತಿಳಿಸಿದರು.
ಕ್ಯಾತ್ಸಂದ್ರದ ಚಂದ್ರಮೌಳೀಶ್ವರ ದೇವಾಲಯಕ್ಕೆ ಕುಟುಂಬ ಸಮೇತ ಭೇಟಿ ನೀಡಿ ಪೂಜೆ ಸಲ್ಲಿಸಿ ಮಾತನಾಡಿದರು. ರಾಜ್ಯಮಟ್ಟದಲ್ಲಿ ಕ್ಯಾತ್ಸಂದ್ರ ರಾಜಣ್ಣ ಎಂದು ಗುರುತಿಸುವ ಅವಕಾಶ ಕ್ಯಾತ್ಸಂದ್ರದ ಜನರಿಂದ ನನಗೆ ದೊರೆತಿದೆ. ನನ್ನ ಬೆಳವಣಿಗೆಗೆ ಕ್ಯಾತ್ಸಂದ್ರದ ಹಿರಿಯ ನಾಗರಿಕರು ಹೆಚ್ಚು ಆಶೀರ್ವಾದ ಮಾಡಿದ್ದಾರೆ. ಹಾಗಾಗಿ ನಾನು ಇಂದು ರಾಜಕೀಯ ರಂಗ, ಸಹಕಾರಿ ಕ್ಷೇತ್ರದಲ್ಲಿ ಹೆಚ್ಚು ಶ್ರಮ ವಹಿಸಿ ಕೆಲಸ ಮಾಡಲು ಸಾಧ್ಯವಾಗಿದೆ ಎಂದರು.
ನನ್ನನ್ನು ನಿಮೆ ತಂದೆ, ತಾಯಿ ಹಾಗೂ ತಾತಂದಿರು ವಿಶ್ವಾಸದಿಂದ ಬೆಳೆಸಿದ್ದಾರೋ ಅದೇ ವಿಶ್ವಾಸವನ್ನು ನೀವು ಇಟ್ಟುಕೊಂಡಿದ್ದೀರೆಂದು ಭಾವಿಸಿದ್ದೇನೆ ಎಂದು ನೆರೆದಿದ್ದ ಜನತೆಗೆ ತಿಳಿಸಿದರು.
ನನಗೆ ಕೆ.ಎನ್. ನರಸಿಂಹಯ್ಯನವರು ಸೇರಿದಂತೆ ಬಹಳಷ್ಟು ಮಂದಿ ಹಿರಿಯರು ಮಾರ್ಗದರ್ಶನ ಮಾಡಿದ್ದಾರೆ. ಅವರೆಲ್ಲರ ಹಾದಿಯಲ್ಲಿ ನಾನು ಸಹ ನಡೆದು ಬಂದಿದ್ದೇನೆ ಎಂದ ಅವರು, ರಾಜ್ಯಮಟ್ಟದಲ್ಲಿ ಕ್ಯಾತ್ಸಂದ್ರ ರಾಜಣ್ಣ ಎಂದು ಗುರುತಿಸುವ ಅವಕಾಶ ನಿಮೆಲ್ಲರಿಂದ ಒದಗಿ ಬಂದಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಲ್ಲಹಳ್ಳಿ ದೇವರಾಜು, ಪಿ. ಮೂರ್ತಿ, ಜಿ.ಆರ್. ರವಿ, ಕೆ.ಜಿ. ಆನಂದ್, ಜಯರಾಮ್, ಇನಾಯತ್ ಉಲ್ಲಾ ಸೇರಿದಂತೆ ಅಭಿಮಾನಿಗಳು ಪಾಲ್ಗೊಂಡಿದ್ದರು.
- ಹಳದಿ ಮೆಟ್ರೋಗೆ ಚಾಲನೆ ನೀಡಿ ಪ್ರಧಾನಿ ಮೋದಿ ಭಾಷಣ, ಇಲ್ಲಿದೆ ಹೈಲೈಟ್ಸ್
- ಕಣ್ಮನ ಸೆಳೆಯುತ್ತಿದೆ ಲಾಲ್ಬಾಗ್ ಫಲಪುಷ್ಪ ಪ್ರದರ್ಶನ, ಹೂವಿನ ಸೊಬಗು ಕಣ್ತುಂಬಿಕೊಂಡ ಜನರು
- ಧರ್ಮಸ್ಥಳದಲ್ಲಿ ಗಲಾಟೆ : ಆರು ಮಂದಿ ಅರೆಸ್ಟ್, ನಾಳೆಯಿಂದ ಮತ್ತೆ ಉತ್ಖನನ
- ಚುನಾವಣಾ ಆಯೋಗದ ವಿರುದ್ಧ ಅಬ್ಬರಿಸಿ ಸಾಕ್ಷಿ ನೀಡದೆ ಮೌನಕ್ಕೆ ಶರಣಾದ ಕಾಂಗ್ರೆಸ್ ನಾಯಕರು
- ಆಪರೇಷನ್ ಸಿಂಧೂರ್ ಮತ್ತು ಸೇನೆಯ ಪರಾಕ್ರಮವನ್ನು ಪ್ರಶ್ನಿಸಿ ಘನತೆ ಕೆಡಿಸಿಕೊಂಡ ರಾಹುಲ್ ಗಾಂಧಿ : ಕಿರಣ್ ರಿಜಿಜು