ಟೆಹ್ರಾನ್,ಜೂ.24- ಇಸ್ರೇಲ್ ಮತ್ತು ಇರಾನ್ ನಡುವಿನ ಕದನ ವಿರಾಮ ಮತ್ತೆ ಮುರಿದುಬಿದ್ದಿದ್ದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡೆಸಿದ ಸಂಧಾನ ಕೆಲವೇ ಗಂಟೆಗಳಲ್ಲಿ ವಿಫಲವಾಗಿದೆ. ಇಸ್ರೇಲ್‌ಗೆ ತಕ್ಕ ಪಾಠ ಕಲಿಸಲೇಬೇಕೆಂದು ಪ್ರತಿಜ್ಞೆ ಮಾಡಿರುವ ಇರಾನ್ ಕದನ ವಿರಾಮ ಘೋಷಣೆಯಾದ ಒಂದೇ ಗಂಟೆಯಲ್ಲಿ ಇಸ್ರೇಲ್‌ನ ಹಲವು ಸ್ಥಳಗಳನ್ನು ಗುರಿಯಾಗಿಟ್ಟುಕೊಂಡು ಕ್ಷಿಪಣಿ ದಾಳಿ ನಡೆಸಿದೆ.
ನಾವು ಇಸ್ರೇಲ್ ಅನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಲು ನಮ ಸೇನಾಪಡೆಗಳಿಗೆ ಸೂಚಿಸಲಾಗಿದೆ. ಹೀಗಾಗಿ ಇಸ್ರೇಲ್‌ನ ಕೆಲವು ನಗರಗಳ ಮೇಲೆ ಕ್ಷಿಪಣಿ ದಾಳಿ ನಡೆದಿರುವುದನ್ನು ಇರಾನ್‌ನ ರಕ್ಷಣಾ ಸಚಿವ ಒಪ್ಪಿಕೊಂಡಿದ್ದಾರೆ. ನಮ ನಗರಗಳ ಮೇಲೆ ಇರಾನ್ ದಾಳಿ ನಡೆಸಿದೆ. ಅನೇಕ ನಗರಗಳು ಹಾನಿಗೊಳಗಾಗಿವೆ ಎಂದು ಇಸ್ರೇಲ್‌ನ ರಕ್ಷಣಾ ಸಚಿವ ಕಾಟ್ಜ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಇಸ್ರೇಲ್ ಜೊತೆಗಿನ ಕದನ ವಿರಾಮವನ್ನು ಇರಾನ್ ಉಲ್ಲಂಘಿಸಿದೆ ಎಂದು ಹೇಳಿದ್ದಕ್ಕೆ ಬಲವಾಗಿ ಪ್ರತಿಕ್ರಿಯಿಸಲು ದೇಶದ ಮಿಲಿಟರಿಗೆ ಆದೇಶಿಸಿದ್ದೇನೆ. ಮುಂದೆ ಆಗುವ ಅನಾಹುತಗಳಿಗೆ ಆ ದೇಶವೇ ಹೊಣೆಯಾಗುತ್ತದೆ ಎಂದು ಇಸ್ರೇಲ್ ಎಚ್ಚರಿಕೆ ಕೊಟ್ಟಿದೆ.
ಕಳೆದ ಹಲವು ದಿನಗಳಿಂದ ಇಡೀ ಪ್ರಪಂಚವೇ ಆತಂಕದಿಂದ ನೋಡುತ್ತಿದ್ದ ಇರಾನ್-ಇಸ್ರೇಲ್ ಸಂಘರ್ಷಕ್ಕೆ ಇಂದು ಕದನ ವಿರಾಮದ ಅಂಕಿತ ಬಿದ್ದಿದೆ ಎಂದು ಹೇಳಲಾಗಿತ್ತು.ಈ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್‌್ಡ ಟ್ರಂಪ್ ಕೂಡ ಅಧಿಕೃತ ಆದೇಶ ಹೊರಡಿಸಿದ್ದರು. ಇಸ್ರೇಲ್ ಮತ್ತು ಇರಾನ್ ನಡುವಿನ ಕದನ ವಿರಾಮ ಅಧಿಕೃತವಾಗಿ ಜಾರಿಗೆ ಬಂದಿದೆ ಎಂದು ದೃಢಪಡಿಸಿದ್ದಾರೆ.ಅಲ್ಲದೇ ಎರಡೂ ಕಡೆಯವರು ಒಪ್ಪಂದವನ್ನು ಗೌರವಿಸಬೇಕು ಮತ್ತು ಅದನ್ನು ಉಲ್ಲಂಘಿಸಬಾರದು ಎಂದು ಒತ್ತಾಯಿಸಿದ್ದರು.
ಇರಾನ್ ಇಸ್ರೇಲಿ ಪ್ರದೇಶಗಳಲ್ಲಿ ಹಲವಾರು ಕ್ಷಿಪಣಿಗಳನ್ನು ಹಾರಿಸಿದ ನಂತರ, ಮಧ್ಯಪ್ರಾಚ್ಯದ ಎರಡು ಕಟ್ಟಾ ಶತ್ರುಗಳಿಗೆ ಅಮೆರಿಕಾದ ನಾಯಕ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸದಂತೆ ಎಚ್ಚರಿಕೆ ನೀಡಿದ್ದರು.
ದಿ ಸೀಸ್ ಫೈರ್ ( ಕದನ ವಿರಾಮ) ಈಗ ಪರಿಣಾಮ ಬೀರುತ್ತಿದೆ. ದಯವಿಟ್ಟು ಅದನ್ನು ಉಲ್ಲಂಘಿಸಬೇಡಿ ಎಂದು ಟ್ರಂಪ್ ತಮ ಸಾಮಾಜಿಕ ಜಾಲ ತಾಣ ಎಕ್ಸ್ ನ ಪೋಸ್ಟ್‌ನಲ್ಲಿ ಬರೆದಿದ್ದಾರೆ.12 ದಿನಗಳ ಯುದ್ಧವನ್ನು ಕೊನೆಗೊಳಿಸಲು ಅಮೆರಿಕದ ನಾಯಕ ಈ ಹಿಂದೆ ಸಂಪೂರ್ಣ ಕದನ ವಿರಾಮಕ್ಕೆ ಕರೆ ನೀಡಿದ್ದರು.ಮಂಗಳವಾರ ಬೆಳಿಗ್ಗೆ 0400 ರಿಂದ ಆರಂಭಗೊಂಡು 24 ಗಂಟೆಗಳ ಹಂತ ಹಂತದ ಕದನ ವಿರಾಮ ಪ್ರಕ್ರಿಯೆಯಾಗಲಿದೆ ಎಂದಿದ್ದರು.
ಇರಾನ್ ಏಕಪಕ್ಷೀಯವಾಗಿ ಎಲ್ಲಾ ಕಾರ್ಯಾಚರಣೆಗಳನ್ನು ಮೊದಲು ಸ್ಥಗಿತಗೊಳಿಸಿತು. 12 ಗಂಟೆಗಳ ನಂತರ ಇಸ್ರೇಲ್ ಕೂಡ ಇದೇ ಕ್ರಮ ಕೈಗೊಳ್ಳಲಿದೆ ಎಂದು ಅವರು ಹೇಳಿದ್ದರು.ಇಸ್ರೇಲ್ ಆಕ್ರಮಿತ ಪ್ರದೇಶಗಳ ಮೇಲೆ ಐದು ಅಲೆಗಳ ಕ್ಷಿಪಣಿ ದಾಳಿಗಳು ನಡೆದ ನಂತರ, ದಕ್ಷಿಣದಲ್ಲಿ ಕನಿಷ್ಠ ಏಳು ಜನರು ಸಾವನ್ನಪ್ಪಿದ ನಂತರ ಇಸ್ರೇಲ್ ಜೊತೆಗಿನ ಕದನ ವಿರಾಮ ಜಾರಿಗೆ ಬಂದಿದೆ ಎಂದು ಇರಾನ್ ಸರ್ಕಾರಿ ಮಾಧ್ಯಮ ತಿಳಿಸಿತ್ತು.
- ರಾಜ್ಯದ ಅಧಿಕಾರಕ್ಕಾಗಿ ಕಾನೂನು ಹೋರಾಟ ಅನಿವಾರ್ಯ; ಸ್ಟಾಲಿನ್
- ಟಾರ್ಪಾಲ್ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
- ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಆರ್ಎಸ್ಎಸ್ ಸಮಾಜ ಸೇವೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದ ಮೋದಿ
- ಠಾತ್ ಹೃದಯಾಘಾತ ತಪ್ಪಿಸಲು ಜಿಲ್ಲೆ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲೂ ಹೃದಯ ಜ್ಯೋತಿ ಯೋಜನೆ ಅನುಷ್ಠಾನ
- ಸಂವಿಧಾನ ರಕ್ಷಿಸಲು ಪಕ್ಷದ ಕಾರ್ಯಕರ್ತರಿಗೆ 5 ಶಪಥ ಬೋಧಿಸಿದ ಡಿ.ಕೆ.ಶಿವಕುಮಾರ್