ಮೆಕ್ಸಿಕೊ, ಜೂ.26- ಬಂಧೂಕು ದಾರಿಯೊಬ್ಬ ಮನಬಂದಂತೆ ಗುಂಡಿನ ದಾಳಿ ನಡೆಸಿದ ಪರಿಣಾಮ 12 ಮಂದಿ ಸಾವನ್ನಪ್ಪಿರುವ ದುರಂತ ಮೆಕ್ಸಿಕನ್ ರಾಜ್ಯದ ಗುವಾನಾಜುವಾಟೊದನಲ್ಲಿ ನಡೆದಿದೆ.
ಧಾರ್ಮಿಕ ಆಚರಣೆ ಅಂಗವಾಗಿ ಸ್ಯಾನ್ ಬಾರ್ಟೊಲೊ ಬೆರಿಯೊಸ್ನಲ್ಲಿ ಕ್ಯಾಥೋಲಿಕ್ ಚರ್ಚ್ನಲ್ಲಿ ಪಾರ್ಟಿ ಆಯೋಜಿಸಲಾಗಿತ್ತು.ಈ ವೇಳೆ ನೂರಾರು ಜನರು ರಸ್ತೆಯಲ್ಲಿ ಮದ್ಯ ಸೇವಿಸುತ್ತಾ ನೃತ್ಯ ಮಾಡುತ್ತಿದ್ದರು. ಬಂಧೂಕು ದಾರಿಯೊಬ್ಬ ಗುಂಡಿನ ದಾಳಿ ನಡೆಸಿದ ಪರಿಣಾಮ ಅಲ್ಲಿದ್ದ ಜನರು ದಿಕ್ಕಾಪಾಲಾಗಿ ಹೋಡಿದ್ದಾರೆ.
ಹಲವರಿಗೆ ಗುಂಡು ತಾಗಿ ಕುಸಿದು ಬಿದ್ದಿದ್ದಾರೆ, 12 ಮಂದಿ ಮೃತಪಟ್ಟಿದ್ದಾರೆ ಎಂದು ಇರಾಪುವಾಟೊನ ಪೊಲೀಸ್ ಅಧಿಕಾರಿ ರೊನಾಲ್ಡ್ ಗೋಮೇಜ್ ಸೆರ್ವಾಂಟೆಸ್ ತಿಳಿಸಿದ್ದಾರೆ. ಘಟನೆಯಲ್ಲಿ 20 ಮಂದಿ ಗಾಯಗೊಂಡಿದ್ದು, ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೆಕ್ಸಿಕೊ ಅಧ್ಯಕ್ಷಕೌಡಿಯಾ ಅವರು ದಾಳಿಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದು, ಹಂತಕನ ಪತ್ತೆ ಕಾರ್ಯಾಚರಣೆ ನೆಯುತ್ತಿದೆ ಎಂದು ಹೇಳಿದ್ದಾರೆ.
ಮೆಕ್ಸಿಕೋದಲ್ಲಿ ಕಳೆದ 6 ತಿಂಗಳಲ್ಲಿ ಇಂತಹ ನರಮೇಧ ನಡೆಯುತ್ತಲೇ ಇದೆ. ಸುಮಾರು ಒಂದು ಸಾವಿರಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ.ಆರ್ಥಿಕ ಹೊಡೆತ ಮತ್ತು ಹರಾಜುಕತೆಯಿಂದ ಮೆಕ್ಸಿಕೊದಲ್ಲಿ ವ್ಯಾಪಕ ಹಿಂಸಾಚಾರಗಳು ಕೂಡ ನಡೆಯುತ್ತಿವೆ. ಸಾವಿರಾರು ಜನರು ಈಗಾಗಲೇ ನೆರೆಯ ಅಮೇರಿಕಾ ಹಾಗೂ ಯುರೋಪ್ನ ಹಲವು ರಾಷ್ಟ್ರಗಳಿಗೆ ವಲಸೆ ಹೋಗಿದ್ದಾರೆ.
- BIG NEWS : ಹೊಸಕೆರೆ ಬಳಿಯ ಅಪಾರ್ಟ್ಮೆಂಟ್ನಲ್ಲಿ ನಟ ದರ್ಶನ್ ಅರೆಸ್ಟ್
- ರಾಜ್ಯದಲ್ಲಿ 13 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್ದಾರರು : ಕೆ.ಹೆಚ್.ಮುನಿಯಪ್ಪ
- ಭೂಸ್ವಾಧೀನ ವೇಳೆ ಹಣ ಪಡೆದಿದ್ದರೆ ಸೂರ್ಯ ಮುಳುಗುವುದರೊಳಗೆ ಸಸ್ಪೆಂಡ್ : ಡಿಕೆಶಿ
- ಬ್ಯಾಟ್ನಿಂದ ಹೊಡೆದು ಮಗನನ್ನು ಕೊಂದಿದ್ದ ತಂದೆಗೆ ಜೀವಾವಧಿ ಶಿಕ್ಷೆ
- ರಾಷ್ಟ್ರಪತಿ ಪದಕಕ್ಕೆ ಆಯ್ಕೆಯಾದ 1090 ಅಧಿಕಾರಿಗಳು