ನ್ಯೂಯಾರ್ಕ್, ಜೂ.29– ನಲವತ್ತೇಳು ವರ್ಷದಿಂದ ಅಮೆರಿಕದಲ್ಲಿ ನೆಲೆಸಿದ್ದ ಮಡೋನಾ ಡೊನ್ನಾ ಕಶಾನಿಯನ್‌ಗೆ ತನ್ನ ಕೈತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಒಮ್ಮೆಲೇ ಆಘಾತವಾಯಿತು. ನ್ಯೂ ಆರ್ಲಿಯನ್ಸ್‌ನ ಸ್ವಗೃಹದಲ್ಲಿ ಅಮೆರಿಕದ ವಲಸೆ ಮತ್ತು ಸೀಮಾಸುಕ ಜಾರಿ ಅಧಿಕಾರಿಗಳು ಆಕೆಗೆ ಬೇಡಿ ತೊಡಿಸಿ ಕರೆದೊಯ್ದರು ಎಂದು ಆಕೆಯ ಕುಟುಂಬ ತಿಳಿಸಿದೆ.ಮಡೋನ್ನಾ 47 ವರ್ಷಗಳಿಂದ ಅಮೆರಿಕದಲ್ಲಿ ವಾಸಿಸುತ್ತಿದ್ದು, ಅಮೆರಿಕನ್ ಪ್ರಜೆಯನ್ನು ವಿವಾಹವಾಗಿದ್ದಾರೆ. ಈ ದಂಪತಿಗೆ ಓರ್ವ ಮಗಳೂ ಇದ್ದಾಳೆ.
1978ರಲ್ಲಿ ವಿದ್ಯಾರ್ಥಿ ವೀಸಾ ಪಡೆದು ಇರಾನ್ ನಿಂದ ಇಲ್ಲಿಗೆ ಆಗಮಿಸಿದ ಕಶಾನಿಯನ್ ತನ್ನ ತಂದೆ ಅಮೆರಿಕ ಬೆಂಬಲಿತ ಷಾ ಅವರಿಗೆ ಬೆಂಬಲ ನೀಡಿದ್ದಕ್ಕಾಗಿ ಪ್ರತೀಕಾರ ಕ್ರಮಕ್ಕೆ ಗುರಿಯಾಗಬಹುದೆಂಬ ಭೀತಿಯಿಂದ ಕ್ಷಮಾದಾನಕ್ಕೆ ಅರ್ಜಿ ಸಲ್ಲಿಸಿದ್ದರು.
ಅವರ ಪ್ರಯತ್ನ ವಿಫಲವಾಯಿತು. ಆದರೆ ವಲಸಿಗ ಅಧಿಕಾರಿಗಳ ಎದುರು ನಿಯಮಿತವಾಗಿ ಹಾಜರಾಗಬೇಕೆಂಬ ಷರತ್ತು ವಿಧಿಸಿ ಆಕೆಗೆ ತನ್ನ ಪತಿ ಮತ್ತು ಮಗುವಿನ ಜೊತೆಗೆ ವಾಸಿಸಲು ಅವಕಾಶ ಮಾಡಿಕೊಡಲಾಯಿತು. ಇದಕ್ಕೆ ಆಕೆ ಸಮ್ಮತಿಸಿದರು. ಕತ್ರಿನಾ ಚಂಡಮಾರುತದ ಸಂದರ್ಭದಲ್ಲಿ ಅವರು ಒಮ್ಮೆ ಸೌತ್ ಕೆರೋಲಿನಾದಲ್ಲಿ ಪರಿಶೀಲನೆಗೊಳಗಾಗಿದ್ದರು.
ಈಗ ಇರಾನಿಯನ್ನರನ್ನು ಹೊರಹಾಕುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕ್ರಮದ ಮೇರೆಗೆ ಲೂಸಿಯಾನಾದ ಬಾಸಿಲ್‌ನಲ್ಲಿರುವ ವಲಸಿಗರ ಸೆರೆಮನೆಯಲ್ಲಿ ಅವರನ್ನು ಇರಿಸಲಾಗಿದೆ. ಆಕೆಯ ಬಗ್ಗೆ ಮಾಹಿತಿಗಾಗಿ ಕುಟುಂಬ ಹೆಣಗಾಡುತ್ತಿದೆ. ಅಮೆರಿಕದಲ್ಲಿ ದಶಕಗಳ ಬಳಿಕ ಇತರ ಇರಾನೀಯರನ್ನೂ ವಲಸೆ ಅಧಿಕಾರಿಗಳು ಬಂಧಿಸುತ್ತಿದ್ದಾರೆ.
ಅಮೆರಿಕದ ಆಂತರಿಕ ಭದ್ರತಾ ಇಲಾಖೆ ಎಷ್ಟು ಜನರ ಬಂಧನವಾಗಿದೆ ಎಂಬ ಮಾಹಿತಿ ನೀಡಿಲ್ಲ. ಆದರೆ ಇರಾನ್ ಮೇಲಿನ ಅಮೆರಿಕದ ಮಿಲಿಟರಿ ದಾಳಿಗಳು ಇನ್ನಷ್ಟು ಜನರ ಬಂಧನವಾಗಬಹುದು ಎಂಬ ಸುಳಿವು ನೀಡಿದ್ದು ಅಮೆರಿಕದಲ್ಲಿರುವ ಇರಾನಿಯನ್ನರು ಆತಂಕಕ್ಕೊಳಗಾಗಿದ್ದಾರೆ.
- ಹಸುವಿನ ಕೆಚ್ಚಲು ಕೊಯ್ದ ದುಷ್ಕರ್ಮಿಗಳು
- 8 ವರ್ಷಗಳಿಂದ ವಿತರಣೆಯಾಗದ 1 ಲಕ್ಷ ಸ್ಯಾನಿಟರಿ ಪ್ಯಾಡ್ ಬೆಂಕಿಗೆ
- ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಜಾರಕಿಹೊಳಿ ಬ್ರದರ್ಸ್, ಕುತೂಹಲ ಕೆರಳಿಸಿದ ಬೆಳವಣಿಗೆ
- ಬೆಂಗಳೂರು : ಮಹಿಳೆಯ ಭೀಕರವಾಗಿ ಕೊಂದು ಮೂಟೆ ಕಟ್ಟಿ ಕಸದ ಲಾರಿಗೆ ಎಸೆದ ದುಷ್ಕರ್ಮಿಗಳು
- ‘ಮುಂದಿನ 3 ತಿಂಗಳಲ್ಲಿ ಡಿಕೆಶಿ ಸಿಎಂ ಆಗ್ತಾರೆ’ : ಕಾಂಗ್ರೆಸ್ನಲ್ಲಿ ತಾರಕಕ್ಕೇರಿದ ಬದಲಾವಣೆ ಬಿಸಿ