ಬೇಲೂರು,ಜು.2- ಮಗುವಿನೊಂದಿಗೆ ಆಟವಾಡುತ್ತಿದ್ದಾಗಲೇ ತಂದೆಗೆ ಹೃದಯಾಘಾತವಾಗಿ ನಿಧನವಾಗಿರುವ ಘಟನೆ ತಾಲ್ಲೂಕಿನ ಯಕಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದಿದೆ.ಮಾದಿಹಳ್ಳಿ ಗ್ರಾಮದ ರವಿಕುಮಾರ್ (30) ಮೃತಪಟ್ಟ ದುರ್ದೈವಿ.ನಿನ್ನೆ ಸಂಜೆ ಮಾದಿಹಳ್ಳಿ ಗ್ರಾಮದಿಂದ ಹೊರಟು ಪತ್ನಿಯ ತವರಾದ ತಾಲ್ಲೂಕಿನ ಯಕಶೆಟ್ಟಿಹಳ್ಳಿ ಗ್ರಾಮಕ್ಕೆ ತೆರಳಿ ಪತ್ನಿಯೊಂದಿಗೆ ಮಾತನಾಡಿ ನಂತರ 9 ತಿಂಗಳ ಮಗುವಿನೊಂದಿಗೆ ಆಟವಾಡುತ್ತಾ ಸಮಯ ಕಳೆಯುತ್ತಿದ್ದರು.
ಕೂಡಲೇ ಎದೆನೋವು ಕಾಣಿಸಿಕೊಂಡು ಹಠಾತ್ತನೆ ಕುಸಿದುಬಿದ್ದು, ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಕೃಷಿಕರಾದ ರವಿಕುಮಾರ್ ಮದುವೆಯಾಗಿ 2 ವರ್ಷವಾಗಿತ್ತು. ಇತ್ತೀಚೆಗಷ್ಟೇ ಮಗುವಾಗಿದೆ.
ಇವರ ಅಕಾಲಿಕ ನಿಧನದಿಂದ ಕುಟುಂಬ ಸದಸ್ಯರಿಗೆ ಬರಸಿಡಿಲು ಅಪ್ಪಳಿಸಿದಂತಾಗಿದ್ದು, ಪತ್ನಿಯ ಆಕ್ರಂದನ ಮುಗಿಲು ಮುಟ್ಟಿತ್ತು. ದಿನದಿಂದ ದಿನಕ್ಕೆ ಹೃದಯಾಘಾತಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.
- ಡಿ.ಕೆ. ಸುರೇಶ ಕೆಎಂಎಫ್ ಅಧ್ಯಕ್ಷಗಾದಿ ಕನಸಿಗೆ ನಾನಾ ವಿಘ್ನ
- “ದಿ ರಾಮೇಶ್ವರಂ ಕೆಫೆ” ವತಿಯಿಂದ ಉತ್ತರ ಭಾರತದ ಶೈಲಿಯ “ತೀರ್ಥ” ಕೆಫೆ ಆರಂಭ
- ಆ.1 ರಿಂದ ಬೆಸ್ಕಾಂ ಬಿಲ್ ಪಾವತಿಯ ATP ಸೇವೆ ಸ್ಥಗಿತ
- ಮನೆಯ ಟೆರೇಸ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗರ್ಭಿಣಿ ಶವ ಮಹಿಳೆ
- ಪಹಲ್ಗಾಮ್ ದಾಳಿಗೆ ಅವಕಾಶ ಮಾಡಿಕೊಟ್ಟಿದ್ದೇಕೆ..? : ಗುಂಡೂರಾವ್ ಪ್ರಶ್ನೆ