ಚಾಮರಾಜನಗರ, ಜು.2– ಮಾದೇಶ್ವರ ಸ್ವಾಮಿ ಬೆಟ್ಟದಲ್ಲಿ ಹುಲಿಗಳ ಹತ್ಯೆ ಕಹಿನೆನಪು ಮಾಸುವ ಮುನ್ನವೇ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿ ಕಂದೇಗಾಲ ಕೊಡಸೋಗೆ ಬಳಿ 20ಕ್ಕೂ ಹೆಚ್ಚು ವಾನರಗಳ ಮೃತದೇಹ ಪತ್ತೆಯಾಗಿದೆ.
ವಾನರಗಳಿಗೆ ವಿಷವಿಟ್ಟು ಹತ್ಯೆ ಮಾಡಿ ನಂತರ ಇಲ್ಲಿ ತಂದುಹಾಕಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಕೋತಿಗಳನ್ನು ಗಮನಿಸಿದ ಸ್ಥಳೀಯರು ಕೂಡಲೇ ಗುಂಡ್ಲುಪೇಟೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮತ್ತು ಅರಣ್ಯ ಇಲಾಖಾಧಿಕಾರಿಗಳು ಪರಿಶೀಲನೆ ನಡೆಸಿದ್ದು, ವಾನರಗಳ ಸಾವಿಗೆ ಕಾರಣವೇನು ಎಂಬುದನ್ನು ಪತ್ತೆಹಚ್ಚಲಿದ್ದಾರೆ.