Thursday, July 3, 2025
Homeರಾಜ್ಯನಿಮ್ಮ ಮನೆ ಬಾಗಿಲಿಗೆ ಬರಲಿದೆ ಹಾಪ್‌ಕಾಮ್ಸ್‌ ತರಕಾರಿ

ನಿಮ್ಮ ಮನೆ ಬಾಗಿಲಿಗೆ ಬರಲಿದೆ ಹಾಪ್‌ಕಾಮ್ಸ್‌ ತರಕಾರಿ

Hopcoms vegetables will come to your doorstep

ಬೆಂಗಳೂರು, ಜು.2- ಇನ್ನು ಮುಂದೆ ಹಾಪ್‌ಕಾಮ್ಸೌ ತರಕಾರಿಗಳು ನಿಮ ಮನೆ ಬಾಗಿಲಿಗೆ ಬರಲಿವೆ. ನಗರದಲ್ಲಿ ಹೆಚ್ಚುತ್ತಿರುವ ಮಾಲ್‌ ಸಂಸ್ಕೃತಿಗೆ ಪೈಪೋಟಿ ನೀಡಲು ಮುಂದಾಗಿರುವ ಹಾಪ್‌ಕಾಮ್ಸೌನವರು ಜನರನ್ನು ಸೆಳೆಯಲು ಇಂತಹ ವಿನೂತನ ಪ್ರಯತ್ನಕ್ಕೆ ಕೈ ಹಾಕಿದೆ.

ಅದರಲ್ಲೂ ನಗರದಲ್ಲಿ ಅಪಾರ್ಟ್‌ಮೆಂಟ್‌ ಸಂಸ್ಕೃತಿ ಹೆಚ್ಚುತ್ತಿರು ವುದನ್ನು ಗಮನದಲ್ಲಿಟ್ಟುಕೊಂಡು ಇನ್ನು ಮುಂದೆ ಫ್ಲಾಟ್‌ಗಳಲ್ಲೇ ಸಂಚಾರ ಮಾರಾಟ ಮಳಿಗೆ ತೆರೆಯಲು ತೀರ್ಮಾನಿಸಿದ್ದೇವೆ ಎಂದು ಸಂಸ್ಥೆಯ ಮುಖ್ಯಸ್ಥ ಮಿರ್ಜಿ ಉಮೇಶ್‌ ಶಂಕರ್‌ ತಿಳಿಸಿದ್ದಾರೆ.

ಸೂಪರ್‌ ಮಾರ್ಕೆಟ್‌ಗಳಿಗೆ ಪೈಪೋಟಿ ನೀಡಬೇಕು ಎಂಬ ಉದ್ದೇಶದಿಂದ ಹಾಪ್‌ ಕಾಮ್ಸೌನಿಂದ ಮನೆ ಬಾಗಿಲಿಗೆ ತಾಜಾ ತರಕಾರಿ. ಹಣ್ಣು ತಲುಪಿಸುವ ಮೂಲಕ ಜನ ಮಾನಸ ಗೆಲ್ಲಲು ಮುಂದಾಗಿದೇವೆ ಎಂದು ಅವರು ಮಾಹಿತಿ ನೀಡಿದ್ದಾರೆ. ಪ್ರಾಯೋಗಿಕವಾಗಿ ನಗರದ 60 ಅಪಾರ್ಟ್ಮೆಂಟ್‌ ಗಳಲ್ಲಿ ಈ ಯೋಜನೆ ಜಾರಿ ಮಾಡಲು ತೀರ್ಮಾನಿಸಿದ್ದೇವೆ ಇದಕ್ಕೆ ಜನರ ಪ್ರತಿಕ್ರಿಯೆ ನೋಡಿ ಯೋಜನೆ ವಿಸ್ತರಣೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

ನಗರದ ಅಪಾರ್ಟ್ಮೆಂಟ್‌ ಫೆಡರೇಶನ್‌ಗಳ ಸಹಭಾಗಿತ್ವದಲ್ಲಿ ಈ ಯೋಜನೆ ಆರಂಭಿಸಲಾಗುತ್ತಿದ್ದು, ಬರುವ ಲಾಭದಲ್ಲಿ ಪೆಡರೇಶನ್‌ಗೂ ಕಮಿಷನ್‌ ನೀಡುವ ಮೂಲಕ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ. ತಿಂಗಳಿಗೆ ನಾಲ್ಕು ಲಕ್ಷ ವ್ಯಾಪಾರ ಮಾಡಿದರೆ, ಫೆಡರೇಷನ್‌ ಅವರಿಗೆ ಶೇ.20 ರಷ್ಟು ಕಮಿಷನ್‌ ನೀಡುವ ಬಗ್ಗೆ ತೀರ್ಮಾನಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

RELATED ARTICLES

Latest News