Thursday, July 3, 2025
Homeರಾಜ್ಯಅನುದಾನವಿಲ್ಲದೆ ಕ್ಷೇತ್ರದಲ್ಲಿ ಮುಖ ತೋರಿಸಲಾಗುತ್ತಿಲ್ಲ, ಇನ್ನೆಷ್ಟು ದಿನ ಸ್ವಾಮಿ ಈ ಭಂಡ ಬಾಳು..?

ಅನುದಾನವಿಲ್ಲದೆ ಕ್ಷೇತ್ರದಲ್ಲಿ ಮುಖ ತೋರಿಸಲಾಗುತ್ತಿಲ್ಲ, ಇನ್ನೆಷ್ಟು ದಿನ ಸ್ವಾಮಿ ಈ ಭಂಡ ಬಾಳು..?

MLAs are not getting grants

ಬೆಂಗಳೂರು,ಜು.2- ನಯಾ ಪೈಸೆ ಅನುದಾನವಿಲ್ಲದೆ ತಮ್ಮ ತಮ ಕ್ಷೇತ್ರಗಳಿಗೆ ಹೋಗಲೂ ಮುಖ ಇಲ್ಲ ಎಂದು ಶಾಸಕರು ಅಸಹಾಯಕತೆಯನ್ನು ಹಂಚಿಕೊಂಡಿದ್ದಾರೆ.ಇನ್ನೆಷ್ಟು ದಿನ ಸ್ವಾಮಿ ಈ ಭಂಡ ಬಾಳು? ರಾಜೀನಾಮೆ ಕೊಟ್ಟು ತಮ ಹಾಗೂ ಕರ್ನಾಟಕದ ಗೌರವವನ್ನೂ ಉಳಿಸಿಕೊಳ್ಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌. ಆಶೋಕ್‌ ಬಹಿರಂಗ ಸವಾಲು ಹಾಕಿದ್ದಾರೆ.

ಈ ಕುರಿತು ತಮ್ಮ ಸಾಮಾಜಿಕ ಜಾಲ ತಾಣ ಎಕ್ಸ್ ನಲ್ಲಿ ಸರ್ಕಾರದ ವಿರುದ್ದ ಪೋಸ್ಟ್‌ ಮಾಡಿರುವ ಅವರು, ಲಾಟರಿ ಸಿಎಂ ಸಿದ್ದರಾಮಯ್ಯ ನವರೇ ಎಂದು ಕುಹಕವಾಡಿರುವ ಅಶೋಕ್‌, ಹೈಕಮಾಂಡ್‌ ಏಜೆಂಟ್‌ ರಣದೀಪ್‌ ಸಿಂಗ್‌ ಸುರ್ಜೇವಾಲ ಅವರ ಬಳಿ ನಿಮ ಶಾಸಕರು ಸಾಲು ಸಾಲು ದೂರುಗಳನ್ನು ಕೊಡುತ್ತಿದ್ದಾರೆ. ನಿಮ ಕಾಂಗ್ರೆಸ್‌‍ ಸರ್ಕಾರದ ಆಡಳಿತ ತೃಪ್ತಿ ತಂದಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ಎಲ್ಲ ಇಲಾಖೆಗಳಲ್ಲಿ ಲಂಚ, ಭ್ರಷ್ಟಾಚಾರ ನಡೆಯುತ್ತಿದೆ ಎಂದು ನಿಮ ಸರ್ಕಾರದಲ್ಲಿ ನಡೆಯುತ್ತಿರುವ ಹಗಲು ದರೋಡೆಯನ್ನು ಬಯಲು ಮಾಡುತ್ತಿದ್ದಾರೆ. ಸಚಿವರು ಶಾಸಕರನ್ನು ಭೇಟಿ ಕೂಡ ಮಾಡುತ್ತಿಲ್ಲ ಎಂದು ಸಚಿವರ ಕಾರ್ಯವೈಖರಿ ಬಗ್ಗೆ ದೂರು ನೀಡಿದ್ದಾರೆ ಎಂದು ವಾಗ್ದಳಿ ನಡೆಸಿದ್ದಾರೆ. ಮಾಧ್ಯಮಗಳ ಮುಂದೆ ಕೈ ಕೈ ಹಿಡಿದು ಒಗ್ಗಟ್ಟು ಪ್ರದರ್ಶನದ ನಾಟಕ, ತೆರೆಮರೆಯಲ್ಲಿ ಬೆಂಬಲಿಗರ ಮೂಲಕ ಬೆನ್ನಿಗೆ ಚೂರಿ ಇರಿತ.

ಒಟ್ಟಿನಲ್ಲಿ ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ, ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಅವರ ಜಗಳದಲ್ಲಿ ಕರ್ನಾಟಕ ಬಡವಾಗುತ್ತಿದೆ. ಮಗು ಚಿವುಟೋದು ಅವರೇ ತೊಟ್ಟಿಲು ತೂಗೋದು ಅವರೇ ಎಂದು ವ್ಯಂಗ್ಯವಾಡಿದ್ದಾರೆ. ನಿಮ ಪಕ್ಷದ ಶಾಸಕರೇ ನಿಮ ಸರ್ಕಾರಕ್ಕೆ ಛೀ…ಥೂ ಎಂದು ಉಗಿಯುತ್ತಿದ್ದಾರೆ. ಹೈಕಮಾಂಡ್‌ ಏಜೆಂಟ್‌ ಸುರ್ಜೇವಾಲ ಅವರಿಗೆ ಒಂದೆರಡು ಸೂಟ್‌ ಕೇಸ್‌‍ ಕೊಟ್ಟು ಸುಮನಾಗಿಸಬಹುದು. ಹೈಕಮಾಂಡ್‌ಗೆ ಭರಪೂರ ಕಪ್ಪ ಕಾಣಿಕೆ ಕೊಟ್ಟು ಬುಟ್ಟಿಗೆ ಹಾಕಿಕೊಳ್ಳಬಹುದು. ಶಾಸಕರಿಗೆ ಹೆದರಿಸಿ, ಬೆದರಿಸಿ ಅವರ ಬಾಯಿ ಮುಚ್ಚಿಸಬಹುದು.

ಆದರೆ ಜನಸಾಮಾನ್ಯರ ಬಾಯಿ ಹೇಗೆ ಮುಚ್ಚಿಸುತ್ತೀರಿ? ಇನ್ನಾದರೂ ಈ ಭಂಡ ಬಾಳು ಸಾಕು ಮಾಡಿ. ರಾಜೀನಾಮೆ ಕೊಟ್ಟು ಈ ನಾಟಕಕ್ಕೆ ತೆರೆ ಎಳೆಯಿರಿ.ಲಾಟರಿ ಮುಖ್ಯಮಂತ್ರಿ; ಪಾಪರ್‌ ಸರ್ಕಾರ ಎಂದು ಆಶೋಕ್‌ ಅವರು ಟೀಕಾ ಪ್ರಹಾರನಡೆಸಿದ್ದಾರೆ.

RELATED ARTICLES

Latest News