ಉಡುಪಿ,ನ.28-ನಮಗೆ ನಮ ಮಹಿಳೆಯರು ಹಾಗೂ ನಾಗರಿಕರ ರಕ್ಷಣೆಯನ್ನು ಹೇಗೆ ಮಾಡ ಬೇಕೆಂಬುದು ಗೊತ್ತಿದೆ. ನವ ಭಾರತ ಇಂದು ಯಾರಿಗೂ ತಲೆಬಾಗುವುದಿಲ್ಲ ಎಂದು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿಯವರು ಮತ್ತೆ ಪಾಕಿಸ್ತಾನಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಹಿಂದೆ ದೇಶದಲ್ಲಿ ಉಗ್ರರ ದುಷ್ಕೃತ್ಯಗಳು ನಡೆದಾಗ ಆಗಿನ ಸರ್ಕಾರ ಕೈಕಟ್ಟಿ ಕೂತಿತ್ತು. ಈಗ ಇದು ನವ ಭಾರತ. ಯಾರಿಗೂ ತಲೆಬಗ್ಗಿ ಕೂರುವುದಿಲ್ಲ ದೇಶದ ರಕ್ಷಣೆ ಮತ್ತು ದೇಶದ ಸುರಕ್ಷತೆ ಹಾಗೂ ಮಹಿಳೆಯರು ಮತ್ತು ನಾಗರಿಕ ರಕ್ಷಣೆ ನಮಗೆ ಗೊತ್ತಿದೆ ಎಂದು ಪಾಕಿಸ್ತಾನ ಹೆಸರು ಉಲ್ಲೇಖ ಮಾಡದೆ ಭಾರತದ ತಂಟೆಗೆ ಬಂದರೆ ಸುಮನಿರುವುದಿಲ್ಲ ಎಂದು ಗುಡುಗಿದರು.
